Airtel Recharge plans: ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡೋಲ್ಲ ಅನ್ನೋರಿಗೆ ಈ ಪ್ಲ್ಯಾನ್‌ಗಳು ಬೆಸ್ಟ್!
ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಏರ್‌ಟೆಲ್ ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿದೆ. ಜೊತೆಗೆ ಇದು ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಈ ಮೂಲಕ ಅನೇಕ ಉತ್ತಮ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ. ಅದರಲ್ಲೂ ಇತರ ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲ್ಯಾನ್‌ಗಳಿಗೆ ಹೋಲಿಸಿದರೆ ಏರ್‌ಟೆಲ್ ಯೋಜನೆ ಸ್ವಲ್ಪ ದುಬಾರಿಯಾಗಿದೆ.
ಹೌದು, ಏರ್‌ಟೆಲ್ ಯಾವುದೇ ಪ್ಲ್ಯಾನ್ ದುಬಾರಿ ಎನಿಸಿದರೂ ಸಹ ಅದಕ್ಕೆ ತಕ್ಕ ಸೌಲಭ್ಯಗಳನ್ನು ಆ ಪ್ಲ್ಯಾನ್‌ಗಳಲ್ಲಿ ನೀಡಲಾಗುತ್ತದೆ. ಇದಕ್ಕೆ ಏರ್‌ಟೆಲ್ ಬಳಕೆದಾರರು ಸಹ ಸಮ್ಮತಿಸುತ್ತಾರೆ. ಇದರಿಂದಾಗಿಯೇ ಏರ್‌ಟೆಲ್ ಎಂತಹ ದುಬಾರಿ ಪ್ಲ್ಯಾನ್‌ಗಳನ್ನಾದರೂ ಸಹ ಆರಂಭಿಸಲು ಹೆದರುವುದಿಲ್ಲ. ಹೀಗಾಗಿ ಏರ್‌ಟೆಲ್‌ನ ಈ ದೊಡ್ಡ ಮೊತ್ತದ ರೀಚಾರ್ಜ್ ಪ್ಲ್ಯಾನ್‌ಗಳನ್ನು ಗಮನಿಸೋಣ ಬನ್ನಿ.

ಏರ್‌ಟೆಲ್ ಒಂದು ಸಾವಿರಕ್ಕಿಂತ ಹೆಚ್ಚಿನ ಬೆಲೆ ಇರುವ ಮೂರು ಪ್ರಮುಖ ಪ್ಲ್ಯಾನ್‌ಗಳನ್ನು ಹೊಂದಿದೆ. ಅದರಲ್ಲೂ ಈ ಮೂರರಲ್ಲಿ ಎರಡು ಪ್ಲ್ಯಾನ್‌ಗಳು ಮೂರು ಸಾವಿರ ಬೆಲೆ ಹೊಂದಿವೆ. ಅದಾಗ್ಯೂ ಯಾವ ಗ್ರಾಹಕರಿಗೂ ಸಹ ಇದು ಹೊರೆಯಂತೆ ಕಾಣಿಸಿಲ್ಲ. ಯಾಕೆಂದರೆ ಈ ಮೂರು ಪ್ಲ್ಯಾನ್‌ಗಳು ವಿವಿಧ ಪ್ರಯೋಜನದೊಂದಿಗೆ ಉತ್ತಮವಾದ ಸೇವೆ ನೀಡುವ ಗುರಿ ಹೊಂದಿವೆ. ಅವುಗಳೆಂದರೆ 1799ರೂ.,2999ರೂ. ಹಾಗೂ ಮತ್ತೊಂದು 3359ರೂ.ಗಳ ಪ್ಲ್ಯಾನ್.
ಏರ್‌ಟೆಲ್‌ನ 1,799ರೂ.ಗಳ ಪ್ಲ್ಯಾನ್: ಇನ್ನು ಮೊದಲ ದೊಡ್ಡ ಮೊತ್ತದ ಬೆಲೆಯ ರೀಚಾರ್ಜ್ ಪ್ಲ್ಯಾನ್ ಕಡೆ ಗಮನಿಸುವುದಾದರೆ ಇದು ಏರ್‌ಟೆಲ್ ಪ್ರಿಪೇಯ್ಡ್ ಪ್ಲ್ಯಾನ್ ಆಗಿದ್ದು , 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಂದರೆ ಬರೋಬ್ಬರಿ ಒಂದು ವರ್ಷ ಯಾವುದೇ ರೀಚಾರ್ಜ್ ಮಾಡಿಸಬೇಕಿಲ್ಲ. ಜೊತೆಗೆ ಅನಿಯಮಿತ ವಾಯ್ಸ್ ಕಾಲ್ ಹಾಗೂ 3600 ಎಸ್ಎಮ್‌ಎಸ್ ನೊಂದಿಗೆ ಬಳಕೆದಾರರು 24GB ಲುಂಪ್ಸಮ್ ಡೇಟಾ ಪಡೆದುಕೊಳ್ಳಬಹುದು.
ಈ ಪ್ಲ್ಯಾನ್ ದೀರ್ಘಾವಧಿಯ ಮಾನ್ಯತೆಯನ್ನು ಆಯ್ಕೆ ಮಾಡಲು ಹಾಗೂ ಹೆಚ್ಚಿನ ಡೇಟಾ ಅಗತ್ಯವಿಲ್ಲದ ಏರ್‌ಟೆಲ್ ಚಂದಾದಾರರಿಗೆ ಸೂಕ್ತವಾಗಿದೆ. ಇದರೊಂದಿಗೆ ಬಳಕೆದಾರರು ಅಪೊಲೊ 24|7 ಸರ್ಕಲ್, ಉಚಿತ ಹಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಸೇವೆ ಪಡೆದುಕೊಳ್ಳಬಹುದು. ಇವು ಸಹ ಒಂದು ವರ್ಷದ ಮಾನ್ಯತೆ ಹೊಂದಿರುತ್ತವೆ.
ಏರ್‌ಟೆಲ್‌ನ 2,999ರೂ.ಗಳ ಪ್ಲ್ಯಾನ್: ಏರ್‌ಟೆಲ್‌ನ ಮತ್ತೊಂದು ದೊಡ್ಡ ಮೊತ್ತದ ಪ್ಲ್ಯಾನ್ ಇದಾಗಿದ್ದು, ಇದರಲ್ಲಿ ಬಳಕೆದಾರರು ಪ್ರತಿದಿನ 2 GB ಡೇಟಾ ಬಳಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಅನಿಯಮಿತ ವಾಯ್ಸ್ ಕಾಲ್ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಪಡೆದುಕೊಳ್ಳಬಹುದು. ಇದರೊಂದಿಗೆ ಈ ಪ್ಲ್ಯಾನ್ ಒಂದು ವರ್ಷದವರೆಗೆ ಅಂದರೆ 365 ದಿನಗಳ ಮಾನ್ಯತೆ ಪಡೆದಿದೆ.
ಈ ಪ್ಲ್ಯಾನ್‌ನಲ್ಲಿ ಮೇಲೆ ತಿಳಿಸಿದ ಸೌಲಭ್ಯಗಳೊಂದಿಗೆ ಬಳಕೆದಾರರು ಅಪೋಲೋ 24|7 ಸರ್ಕಲ್, ಉಚಿತ ಹೆಲೋಟ್ಯುನ್ ಮತ್ತು ವಿಂಕ್ ಮ್ಯೂಸಿಕ್ ನಂತಹ ಹೆಚ್ಚುವರಿ ಸೌಲಭ್ಯಗಳು ಈ ಪ್ಲ್ಯಾನ್‌ನಲ್ಲಿ ಲಭ್ಯ ಇವೆ. ಇಷ್ಟು ಮಾತ್ರವಲ್ಲದೆ ಬಳಕೆದಾರರು ಈ ಪ್ಲ್ಯಾನ್‌ನಲ್ಲಿ 5G ಫೋನ್ ಬಳಕೆದಾರರಿಗೆ ಅನಿಯಮಿತ 5G ಡೇಟಾವನ್ನು ಸಹ ನೀಡಲಾಗುತ್ತಿದೆ.

ಏರ್‌ಟೆಲ್‌ನ 3,359ರೂ.ಗಳ ಪ್ಲ್ಯಾನ್: ದೀರ್ಘಾವದಿಯ ಪ್ಲ್ಯಾನ್‌ಗಳಲ್ಲಿ ಮೂರನೇ ಪ್ಲ್ಯಾನ್ ಆಗಿರುವ ಈ 3,359ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ವಾಯ್ಸ್ ಕಾಲ್ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಆಯ್ಕೆ ನೀಡಲಾಗುತ್ತಿದ್ದು, ಇದರೊಂದಿಗೆ ಇತ್ಯವೂ 2.5 GB ಡೇಟಾವನ್ನು ಬಳಕೆದಾರರು ಪಡೆದುಕೊಳ್ಳಬಹುದು. ಈ ಮೂಲಕ ಯಾರಿಗೆಲ್ಲಾ ಹೆಚ್ಚಿನ ಡೇಟಾ ಅಗತ್ಯ ಇದೆಯೋ ಅವರು ಬಳಕೆ ಮಾಡಿಕೊಳ್ಳಬಹುದು.
ಇದರೊಂದಿಗೆ ಓಟಿಟಿ ಸೇವೆಗಳಿಗೆ ಈ ಪ್ಲ್ಯಾನ್‌ನಲ್ಲಿ ಉಚಿತ ಎಂಟ್ರಿ ಸಿಗಲಿದೆ. ಅಂದರೆ ಹೆಚ್ಚುವರಿ ಪ್ರಯೋಜನವಾಗಿ 1 ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಲಭ್ಯ ಇರಲಿದೆ. ಇದರೊಂದಿಗೆ ಈ ವಾರ್ಷಿಕ ಯೋಜನೆಯು ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಪ್ರಯೋಜನಗಳನ್ನು ಸಹ ನೀಡುತ್ತದೆ.
ಈ ಪ್ಲ್ಯಾನ್‌ಗಳಿಂದ ಬಳಕೆದಾರರಿಗೆ ಆಗುವ ಪ್ರಯೋಜನ ಏನು?: ಮಾಸಿಕ ಯೋಜನೆಗಳು ಮತ್ತು ಮೂರು ತಿಂಗಳ ಯೋಜನೆಗಳಿಗಿಂತ ಈ ವಾರ್ಷಿಕ ಪ್ಲ್ಯಾನ್ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ. ಯಾಕೆಂದರೆ ಟೆಲಿಕಾಂ ಸಂಸ್ಥೆಗಳು ಆಗಾಗ್ಗೆ ಪ್ಲ್ಯಾನ್‌ಗಳ ಬೆಲೆಯಲ್ಲಿ ಏರಿಳಿತ ಪ್ರಕ್ರಿಯೆ ನಡೆಸಲಿದ್ದು, ಇದ್ಯಾವುದು ವಾರ್ಷಿಕ ಪ್ಲ್ಯಾನ್‌ಗಳಿಗೆ ಅನ್ವಯ ಆಗುವುದಿಲ್ಲ.


Click it and Unblock the Notifications








