Subscribe to Gizbot

ಏರ್‌ಟೆಲ್ ಇಂಟರ್ನೆಟ್ ಸೇವೆಯಲ್ಲಿ ಹೆಚ್ಚಳ

Written By:

ಭಾರತಿ ಏರ್‌ಟೆಲ್‌ನ ಮೊಬೈಲ್ ಇಂಟರ್ನೆಟ್ ಪ್ಯಾಕ್‌ಗಳು ಅಂದರೆ 2ಜಿ ಮತ್ತು 3ಜಿಯ ಆನ್‌ಲೈನ್ ದರಗಳಲ್ಲಿ ಪ್ರಿಪೈಡ್ ಗ್ರಾಹಕರಿಗಾಗಿ ದೇಶದಾದ್ಯಂತ ಹೆಚ್ಚಳವಾಗಲಿದೆ.

ಏರ್‌ಟೆಲ್ ಇಂಟರ್ನೆಟ್ ಸೇವೆಯಲ್ಲಿ ಹೆಚ್ಚಳ

ಮೊಬೈಲ್ ಡೇಟಾಗಳ ಆನ್‌ಲೈನ್ ಖರೀದಿಗಾಗಿ ಕಂಪೆನಿ ವಿನಾಯಿತಿಗಳನ್ನು ಒದಗಿಸುತ್ತಿದ್ದು ಆಫ್‌ಲೈನ್ ಮೂಲಕ ಇಂಟರ್ನೆಟ್ ಪ್ಯಾಕ್‌ಗಳನ್ನು ಮಾರಾಟ ಮಾಡುತ್ತಿರುವ ರೀಟೈಲರ್‌ಗಾಗಿ ಇದು ಅನ್ವಯವಾಗಲಿದೆ

ಓದಿರಿ: ವಾಟ್ಸಾಪ್: ಜನಪ್ರಿಯತೆ ಪಡೆದುಕೊಂಡಿರುವುದು ಹೇಗೆ?

" ನಮ್ಮ ಕೆಲವೊಂದು ಆನ್‌ಲೈನ್ ಪ್ರಿಪೈಡ್ ಡೇಟಾ ಪ್ಯಾಕ್‌ಗಳಲ್ಲಿ ಈ ವಿನಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಏರ್‌ಟೆಲ್ ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ 10 ಡೇಟಾ ಪ್ಯಾಕ್‌ಗಳ ಬೆಲೆಗಳನ್ನು ಏರ್‌ಟೆಲ್ ಹೆಚ್ಚಿಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ.

ಏರ್‌ಟೆಲ್ ಇಂಟರ್ನೆಟ್ ಸೇವೆಯಲ್ಲಿ ಹೆಚ್ಚಳ

ಆನ್‌ಲೈನ್ ಮೂಲಕ 2ಜಿ ಡೇಟಾದ 2 ಜಿಬಿ ಪ್ಯಾಕ್‌ಗೆ ವಿಧಿಸಿದ್ದ ದರ ರೂ 199 ಆಗಿತ್ತು. ಈಗ ಇದನ್ನು 28 ದಿನಗಳ ವ್ಯಾಲಿಡಿಟಿಗೆ ಅನುಸಾರವಾಗಿ 1.25 ಜಿಬಿಗೆ ಬದಲಾಯಿಸಲಾಗಿದೆ.

ಓದಿರಿ: ಸಾಮಾಜಿಕ ತಾಣ: ವಿಶ್ವದಲ್ಲೇ ಪ್ರಬಲ ಮಾಧ್ಯಮ

ಇನ್ನು 3ಜಿಯಲ್ಲಿ, ಕಂಪೆನಿಯು 3ಜಿಯ 1ಜಿಬಿ ಡೇಟಾವು 28 ದಿನಗಳ ವ್ಯಾಲಿಡಿಟಿಗೆ ಅನುಗುಣವಾಗಿ 255 ರೂಪಾಯಿಗಳಲ್ಲಿ ಲಭ್ಯವಾಗುತ್ತಿತ್ತು. ಇದೀಗ 30 ದಿನಗಳ ವ್ಯಾಲಿಡಿಟಿಗೆ ಅನುಸಾರವಾಗಿ ಇದನ್ನು ರೂ 249 ಕ್ಕೆ ನಿಗದಿ ಪಡಿಸಲಾಗಿದೆ.

ಏರ್‌ಟೆಲ್ ಇಂಟರ್ನೆಟ್ ಸೇವೆಯಲ್ಲಿ ಹೆಚ್ಚಳ

ಐಡಿಯಾ ಸೆಲ್ಯುಲಾರ್ ಕೂಡ ಪ್ರಿಪೈಡ್ ಗ್ರಾಹಕರಿಗಾಗಿ 100 ಶೇಕಡಾ ದರಗಳನ್ನು ಹೆಚ್ಚಿಸಿತ್ತು. ಇನ್ನು ಲಾಭವನ್ನು ಹೆಚ್ಚಿಸುವುದಕ್ಕಾಗಿ ವಿನಾಯಿತಿಗಳಲ್ಲಿ ಕಡಿತ ಮಾಡುತ್ತಿದೆ ಮತ್ತು ಉಚಿತ ಡೇಟಾ ಪ್ಯಾಕ್‌ಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದೆ. ಕಳೆದ ವರ್ಷ ಕೂಡ ಏರ್‌ಟೆಲ್, ವೋಡಾಫೋನ್ ಮತ್ತು ಐಡಿಯಾ ಡೇಟಾ ದರಗಳನ್ನು ಹೆಚ್ಚಿಸಿತ್ತು.

English summary
Bharti Airtel's mobile internet packs, both 2G and 3G, sold online will cost more for pre-paid customers across the country.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot