Home
ಸುದ್ದಿಜಾಲ

ಏರ್‌ಟೆಲ್‌ ಪ್ಲ್ಯಾನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ!..ಹೊಸ ದರ ಪಟ್ಟಿ ಇಲ್ಲಿದೆ!

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂಗೆ ನೇರ ಪೈಪೋಟಿ ನೀಡುತ್ತ ಮುನ್ನಡೆದಿರುವ ಭಾರ್ತಿ ಏರ್‌ಟೆಲ್ ಹಲವು ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ತನ್ನ ಗ್ರಾಹಕರಿಗಾಗಿ ಭಿನ್ನ ದರ ಪಟ್ಟಿಯಲ್ಲಿ ಪ್ರೀಪೇಯ್ಡ್‌ ಮತ್ತ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆ ಹೊಂದಿದೆ. ಆದರೆ ಇದೀಗ ಏರ್‌ಟೆಲ್ ಟೆಲಿಕಾಂ ತನ್ನ ಯೋಜನೆಗಳ ಬೆಲೆ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ದಿಢೀರ್ ಬಿಗ್ ಶಾಕ್ ನೀಡಿದೆ.

ಏರ್‌ಟೆಲ್‌ ಪ್ಲ್ಯಾನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ!..ಹೊಸ ದರ ಪಟ್ಟಿ ಇಲ್ಲಿದೆ!

ಹೌದು, ಏರ್‌ಟೆಲ್ ಟೆಲಿಕಾಂ ತನ್ನ ಪ್ರೀಪೇಯ್ಡ್‌ ಯೋಜನೆಗಳ ಬೆಲೆಯಲ್ಲಿ ಏರಿಕೆ ಮಾಡಿದೆ ಎಂದು ಟೆಲಿಕಾಮ್ ಟಾಕ್ ವರದಿ ಮಾಡಿದೆ. ಸಂಸ್ಥೆಗೆ ಪ್ರತಿ ಬಳಕೆದಾರರಿಗೆ 200ರೂ. ಸರಾಸರಿ ಆದಾಯದ (ARPU) ತಲುಪುವ ನೆರವು ಮಾಡುತ್ತದೆ ಎನ್ನಲಾಗಿದೆ. ಏರ್‌ಟೆಲ್‌ ಟೆಲಿಕಾಂನ ಆರಂಭ 79ರೂ. ಪ್ರೀಪೇಯ್ಡ್‌ ಯೋಜನೆಯು ದರ ಹೆಚ್ಚಳದಿಂದಾಗಿ ಈಗ 99ರೂ. ಆಗಿದೆ. ಹಾಗೆಯೇ 149ರೂ. ಪ್ರೀಪೇಯ್ಡ್‌ ಯೋಜನೆಯು 179ರೂ. ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಪ್ರೀಪೇಯ್ಡ್‌ ಪ್ಲ್ಯಾನ್ ದರ ಹೆಚ್ಚಳ
ಏರ್‌ಟೆಲ್‌ ಟೆಲಿಕಾಂ ದಿಢೀರ್ ತನ್ನ ಪ್ರೀಪೇಯ್ಡ್‌ ಯೋಜನೆಗಳ ಬೆಲೆಯಲ್ಲಿ ಹೆಚ್ಚಳ ಘೋಷಿಸಿದೆ. ಆದರೆ ಯೋಜನೆಗಳ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ. ಹೀಗಾಗಿ ಏರ್‌ಟೆಲ್‌ನ ಜನಪ್ರಿಯ ಪ್ರೀಪೇಯ್ಡ್‌ ಯೋಜನೆಗಳು ಈಗ ಗ್ರಾಹಕರಿಗೆ ಹೊರೆ ಎನಿಸಲಿವೆ. ದರ ಏರಿಕೆಯಿಂದ ಏರ್‌ಟೆಲ್‌ನ ಆರಂಭಿಕ ಯೋಜನೆ ಬೆಲೆಯು 99ರೂ. ಆಗಿದೆ.

ಏರ್‌ಟೆಲ್‌ ಪ್ಲ್ಯಾನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ!..ಹೊಸ ದರ ಪಟ್ಟಿ ಇಲ್ಲಿದೆ!

ಡೇಟಾ ವೋಚರ್‌ಗಳ ಬೆಲೆ ಏರಿಕೆ
ಏರ್‌ಟೆಲ್‌ ಟೆಲಿಕಾಂ ಪ್ರೀಪೇಯ್ಡ್‌ ಯೋಜನೆಗಳ ಜೊತೆಗೆ ಕಂಪನಿಯ ಡೇಟಾ ವೋಚರ್‌ಗಳು ಸಹ ಬೆಲೆ ಏರಿಕೆಯನ್ನು ಪಡೆದಿವೆ. 48ರೂ, 98ರೂ ಮತ್ತು 251ರೂ, ವೋಚರ್‌ಗಳು ಈಗ ದರದ ಏರಿಕೆ ಕಂಡಿದ್ದು, ಕ್ರಮವಾಗಿ 58ರೂ, 118ರೂ ಮತ್ತು 301ರೂ ಬೆಲೆಯಲ್ಲಿ ಲಭ್ಯವಿರುತ್ತವೆ. ಎಲ್ಲಾ ಯೋಜನೆಗಳ ಪ್ರಯೋಜನಗಳ ಪ್ರಯೋಜನಗಳು ಮೊದಲಿನಂತೆ ಇರಲಿವೆ. ಆದರೆ ಈಗ ದುಬಾರಿ ಬೆಲೆಯಲ್ಲಿ ಲಭ್ಯವಿರುತ್ತವೆ.

ಹೊಸ ದರದ ಜಾರಿ ಯಾವಾಗ?
ಏರ್‌ಟೆಲ್ ಪ್ರೀಪೇಯ್ಡ್‌ ದರ ಏರಿಕೆ ಘೋಷಿಸಿದ್ದು, ಹೊಸ ದರಗಳು ಇದೇ ನವೆಂಬರ್ 26, 2021 ರಿಂದ ಅನ್ವಯವಾಗುತ್ತವೆ. ಇನ್ನು ನಾಲ್ಕು ದಿನಗಳ ಬಾಕಿ ಇದ್ದು, ಗ್ರಾಹಕರು ರೀಚಾರ್ಜ್ ಮಾಡಿಸಿಕೊಳ್ಳಬಹುದು. ನ.26ರಿಂದ ಹೊಸ ದರದಲ್ಲಿ ರೀಚಾರ್ಜ್ ಮಾಡಿಸಬೇಕಾಗುತ್ತದೆ.

ಏರ್‌ಟೆಲ್ ಹಿಂಬಾಲಿಸಲಿವೇ ಜಿಯೋ ಮತ್ತು ವಿ

ಸದ್ಯ ಏರ್‌ಟೆಲ್ ತನ್ನ ಪ್ರೀಪೇಯ್ಡ್‌ ಬೆಲೆಗಳಲ್ಲಿ ಹೆಚ್ಚಳ ಘೋಷಿಸಿದೆ. ಏರ್‌ಟೆಲ್‌ ಅನ್ನು ವಿ ಟೆಲಿಕಾಂ ಮತ್ತು ಜಿಯೋ ಟೆಲಿಕಾಂ ಹಿಂಬಾಲಿಸಲಿವೇ ಎನ್ನಲಾಗಿದೆ. ಅಂದರೇ ಜಿಯೋ ಮತ್ತು ವಿ ಟೆಲಿಕಾಂಗಳ ಸ್ವಲ್ಪ ಮಟ್ಟಿಗೆ ಪ್ರೀಪೇಯ್ಡ್‌ ಯೋಜನೆಗಳ ದರದಲ್ಲಿ ಏರಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಏರ್‌ಟೆಲ್‌ ಪ್ಲ್ಯಾನ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ!..ಹೊಸ ದರ ಪಟ್ಟಿ ಇಲ್ಲಿದೆ!

ಏರ್‌ಟೆಲ್‌ನ ಕೆಲವು ಜನಪ್ರಿಯ ಯೋಜನೆಗಳ ಮಾಹಿತಿ ಇಲ್ಲಿದೆ:

ಏರ್‌ಟೆಲ್‌ 149ರೂ. ಪ್ರೀಪೇಡ್‌ ಯೋಜನೆ
ಏರ್‌ಟೆಲ್‌ನ 149ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ದೀರ್ಘಾವಧಿಯ ವ್ಯಾಲಿಡಿಟಿ ಪಡೆದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 28 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಒಟ್ಟಾರೇ 2GB ಡೇಟಾ ಹಾಗೂ ಒಟ್ಟಾರೇ 300 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ವಾಯಿಸ್‌ ಕರೆಯ ಸೌಲಭ್ಯ ಹಾಗೂ ಹೆಚ್ಚುವರಿಯಾಗಿ ಡಿಸ್ನಿ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಸಹ ಲಭ್ಯವಾಗಲಿದೆ.

ಏರ್‌ಟೆಲ್‌ 199ರೂ. ಪ್ರೀಪೇಯ್ಡ್‌ ಪ್ಲ್ಯಾನ್
ಏರ್‌ಟೆಲ್‌ನ 199ರೂ. ಪ್ರಿಪೇಯ್ಡ್ ಯೋಜನೆಯು ಸಹ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ, 100 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಲಭ್ಯವಾಗಲಿದೆ. ಆದರೆ ಈ ಯೋಜನೆಯು ಇದೀಗ ಪರಿಷ್ಕರಣೆ ಆಗಿದ್ದು, ಕೆಲವು ಚಂದಾದಾರರಿಗೆ ಈ ಯೋಜನೆಯಲ್ಲಿ 1.5GB ಡೇಟಾ ಪ್ರಯೋಜನದ ಆಯ್ಕೆ ಇದೆ.

ಏರ್‌ಟೆಲ್‌ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್
ಏರ್‌ಟೆಲ್‌ನ 249ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ.

ಏರ್‌ಟೆಲ್‌ 349ರೂ. ಪ್ರೀಪೇಯ್ಡ್‌ ಪ್ಲ್ಯಾನ್
ಏರ್‌ಟೆಲ್‌ ಸಂಸ್ಥೆಯ 349ರೂ. ಪ್ಲ್ಯಾನ್ ಸಹ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಲೈಫ್‌ ಇನ್ಶೂರೆನ್ಸ್‌ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB (4G/3G/2G ) ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ಗಳು ಪ್ರಯೋಜನ ಸಿಗುತ್ತವೆ.

ಏರ್‌ಟೆಲ್‌ 598ರೂ. ಪ್ರೀಪೇಯ್ಡ್‌ ಯೋಜನೆ
ಏರ್‌ಟೆಲ್‌ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84vದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಯಾವುದೇ ನೆಟವರ್ಕ್‌ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100ಎಸ್‌ಎಮ್‌ಎಸ್‌ ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಏರ್‌ಟೆಲ್‌ 558ರೂ. ಪ್ರೀಪೇಯ್ಡ್‌ ಪ್ಲ್ಯಾನ್‌
ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್‌ ಪ್ಯಾನ್‌ಗಳಲ್ಲಿ ಒಂದಾಗಿರುವ 558ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಏರ್‌ಟೆಲ್‌ನ 698ರೂ ಪ್ಲ್ಯಾನ್
ಏರ್‌ಟೆಲ್‌ನ 698ರೂ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

ಏರ್‌ಟೆಲ್‌ 379ರೂ. ಪ್ಲ್ಯಾನ್‌
ಏರ್‌ಟೆಲ್‌ನ ಈ 379ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಸಹ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆದಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ.

Best Mobiles in India

English summary
Airtel Hikes Prepaid Plan Tariff: Check New Price List Here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+