Airtel Home ಆಲ್-ಇನ್-ಒನ್: ಬ್ರಾಡ್‌ಬ್ಯಾಂಡ್, DTH ಕಂಪ್ಲಿಟ್ ಪ್ಯಾಕೇಜ್!
ದೇಶದಲ್ಲಿ ಲಾಕ್‌ಡೌನ್ ಜಾರಿಯಾದಾಗಿಂದ ಜಿಯೋ, ಏರ್‌ಟೆಲ್, ವೊಡಾಫೋನ್ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರರಿಗೆ ಹಲವು ಕೊಡುಗೆಗಳನ್ನು ಘೋಷಿಸಿವೆ. ಹಾಗೆಯೇ ತನ್ನ ಚಂದಾದಾರರಿಗೆ ಅನುಕೂಲವಾಗಲೆಂದು ಏರ್‌ಟೆಲ್ ಸಂಸ್ಥೆಯು ಏರ್‌ಟೆಲ್ ಹೋಮ್ ಆಲ್ ಇನ್ ಒನ್ ಪ್ಲ್ಯಾನ್ ಪರಿಚಯಿಸಿದೆ. ಈ ಯೋಜನೆಯು ಬ್ರಾಡ್‌ಬ್ಯಾಂಡ್, ಡಿಟಿಎಚ್ ಮತ್ತು ಪೋಸ್ಟ್‌ಪೇಯ್ಡ್ ಸೇವೆಗಳ ಪ್ರಯೋಜನಗಳು ಲಭ್ಯವಾಗಲಿವೆ.

ಹೌದು, ಭಾರ್ತಿ ಏರ್‌ಟೆಲ್ ಹೊಸದಾಗಿ ಒಟ್ಟು ಮೂರು ಪ್ಯಾಕೇಜ್ ಯೋಜನೆಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ 1,899ರೂ. ಬೆಲೆಯ ಆಲ್ ಇನ್ ಒನ್ ಪ್ಲ್ಯಾನ್, 1399ರೂ. ಹಾಗೂ 899ರೂ. ಪ್ಲ್ಯಾನ್ ಆಗಿವೆ. ಈ ಪ್ಲ್ಯಾನ್‌ಗಳು ಕಾಂಬೊ ಮಾದರಿಯ ಪ್ರಯೋಜನಗಳನ್ನು ಗ್ರಾಹಕರಿಗೆ ಒದಗಿಸಲಿದೆ. ಈ ಯೋಜನೆಗಳ ಬೆಲೆಯಲ್ಲಿ ರಿಯಾಯಿತಿ ಸಹ ನೀಡಿದೆ. ಬ್ರಾಡ್‌ಬ್ಯಾಂಡ್ ಫೈಬರ್, ಪೋಸ್ಟ್‌ಪೇಯ್ಡ್, ಡಿಟಿಎಚ್ ಹಾಗೂ ಪೋಸ್ಟ್‌ಪೇಯ್ಡ್ ಆಡ್ ಆನ್ ಪ್ಲ್ಯಾನ್‌ಗಳ ಪ್ರಯೋಜನ ಒಳಗೊಂಡಿವೆ.

1,899ರೂ. ಪ್ಲ್ಯಾನ್
ಏರ್‌ಟೆಲ್ ಪರಿಚಯಿಸಿರುವ 1,899ರೂ. ಆನ್ ಇನ್ ಒನ್ ಪ್ಲ್ಯಾನ್ ನಾಲ್ಕು ಸಬ್ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಫೈಬರ್, ಏರ್‌ಟೆಲ್ ಡಿಟಿಎಚ್, ಏರ್‌ಟೆಲ್ ಪೋಸ್ಟ್‌ಪೇಯ್ಡ್, ಹಾಗೂ ಏರ್‌ಟೆಲ್ ಪೋಸ್ಟ್‌ಪೋಯ್ಡ್ ಆಡ್ ಆನ್ ಪ್ಲ್ಯಾನ್‌ಗಳು ಸೇರಿವೆ. ಹಾಗೆಯೇ ಇದು ಒಂದು ತಿಂಗಳ ವ್ಯಾಲಿಡಿಟಿ ಸೌಲಭ್ಯದ ಯೋಜನೆ ಆಗಿದೆ.

1399ರೂ. ಪ್ಲ್ಯಾನ್
ಈ ಯೋಜನೆಯಲ್ಲಿ ಏರ್‌ಟೆಲ್ ಫೈಬರ್, ಏರ್‌ಟೆಲ್ ಪೋಸ್ಟ್‌ಪೇಯ್ಡ್, ಹಾಗೂ ಏರ್‌ಟೆಲ್ ಪೋಸ್ಟ್‌ಪೋಯ್ಡ್ ಆಡ್ ಆನ್ ಪ್ಲ್ಯಾನ್‌ಗಳು ಸೇರಿವೆ. ಪ್ಲ್ಯಾನ್ ಮೊತ್ತ 1399ರೂ. (GST ಹೊರತುಪಡಿಸಿ) ಆಗಿದೆ. ಈ ಯೋಜನೆಯು ಸಹ ಒಂದು ತಿಂಗಳ ವ್ಯಾಲಿಡಿಟಿ ಸೌಲಭ್ಯದ ಯೋಜನೆ ಆಗಿದೆ.

899ರೂ ಪ್ಲ್ಯಾನ್
ಏರ್‌ಟೆಲ್‌ನ 899ರೂ. ಯೋಜನೆಯಲ್ಲಿ ಏರ್‌ಟೆಲ್ ಡಿಟಿಎಚ್, ಏರ್‌ಟೆಲ್ ಪೋಸ್ಟ್‌ಪೇಯ್ಡ್, ಹಾಗೂ ಏರ್‌ಟೆಲ್ ಪೋಸ್ಟ್‌ಪೋಯ್ಡ್ ಆಡ್ ಆನ್ ಪ್ಲ್ಯಾನ್‌ಗಳು ಸೇರಿವೆ. ಈ ಯೋಜನೆಯು ಸಹ ಒಂದು ತಿಂಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯ ಡಿಟಿಎಚ್ ಸೇವೆಯಲ್ಲಿ ಸುಮಾರು 140 SD/HD ಚಾನೆಲ್‌ಗಳ ಸೌಲಭ್ಯ ಹೊಂದಿದೆ.

ಏರ್‌ಟೆಲ್ ಟೆಲಿಕಾಂ ಗ್ರಾಹಕರಿಗೆ ಡಬಲ್ ಬೇನಿಫಿಟ್ಸ್ ಒದಗಿಸುವ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಈ ಯೋಜನೆಗಳು ಡೇಟಾ, ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಪ್ರಯೋಜನಗಳ ಜೊತೆಗೆ ಇನ್ಶೂರೆನ್ಸ್ ಪ್ರಯೋಜನ ಸಹ ಒದಗಿಸಲಿವೆ. ಹಾಗಾದರೆ ಆ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 179ರೂ. ಪ್ಲ್ಯಾನ್
ಏರ್‌ಟೆಲ್‌ನ ನೂತನ 179ರೂ. ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಭಾರತದಾದ್ಯಂತ ಅನಿಯಮಿತ ಕರೆಗಳ ಸೌಲಭ್ಯ ಇದೆ. ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್ಎಮ್ಎಸ್ ಹಾಗೂ 2GB ಡಾಟಾ 4G/3G/2G ಪ್ರಯೋಜನವನ್ನು ಒಳಗೊಂಡಿದೆ. ಇದರೊಂದಿಗೆ ಭಾರ್ತಿ ಆಕ್ಸಾ ಲೈಫ್ ಇನ್ಶೂರೆನ್ಸ್‌ನಿಂದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಹ ಪಡೆದಿದೆ.

ಏರ್‌ಟೆಲ್ 279ರೂ. ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 279ರೂ. ಪ್ಲ್ಯಾನ್ ಸಹ ಲೈಫ್ ಇನ್ಶೂರೆನ್ಸ್ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 6GB (4G/3G/2G ) ಡಾಟಾ ಹಾಗೂ 900 ಎಸ್‌ಎಮ್‌ಎಸ್‌ಗಳು ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಇದರೊಂದಿಗೆ 4ಲಕ್ಷದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಿಗಲಿದೆ.


Click it and Unblock the Notifications








