Home
ಸುದ್ದಿಜಾಲ

ಏರ್‌ಟೆಲ್‌ನಿಂದ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌; ಅಧಿಕ ಡೇಟಾ ಮತ್ತು ವ್ಯಾಲಿಡಿಟಿ!

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಬಿಟ್ಟರೇ ಹೆಚ್ಚು ಲೀಡಿಂಗ್‌ನಲ್ಲಿರುವ ಟೆಲಿಕಾಂ ಅಂದರೇ ಅದು ಭಾರ್ತಿ ಏರ್‌ಟೆಲ್‌ ಆಗಿದೆ. ಏರ್‌ಟೆಲ್‌ ಸಂಸ್ಥೆಯು ತನ್ನ ಚಂದಾದಾರರಿಗೆ ಈಗಾಗಲೆ ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಲಾಕ್‌ಡೌನ್‌ ಸಂದರ್ಭದಲ್ಲಿಯೂ ತನ್ನ ಗ್ರಾಹಕರಿಗೆ ಅನುಕೂಲಕರ ಕೊಡುಗೆಗಳನ್ನು ಘೋಷಿಸಿದೆ. ಹಾಗೆಯೇ ಇದೀಗ ತನ್ನ ವಾರ್ಷಿಕ ಪ್ಲ್ಯಾನ್‌ನಲ್ಲಿ ಡೇಟಾ ಕೊಡುಗೆ ಹೆಚ್ಚಿಸಿದೆ.

ಏರ್‌ಟೆಲ್ ಟೆಲಿಕಾಂ

ಹೌದು, ಏರ್‌ಟೆಲ್ ಟೆಲಿಕಾಂ 2398ರೂ.ಗಳ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ ಅನ್ನು ಹೊಂದಿದ್ದು, ಈಗ ಹೊಸದಾಗಿ 2498ರೂ.ಗಳ ಮತ್ತೊಂದು ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್‌ ಅನ್ನು ಜಾರಿ ಮಾಡಿದೆ. ಈ ವಾರ್ಷಿಕ ಅವಧಿಯ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಇದ್ದು, ಜೊತೆಗೆ ಅನಿಯಮಿತ ಕರೆ, ಎಸ್‌ಎಮ್‌ಎಸ್‌ ಪ್ರಯೋಜನಗಳು ಸಹ ಸೇರಿವೆ. ಏರ್‌ಟೆಲ್‌ನ 2498ರೂ. ಪ್ಲ್ಯಾನ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ 2498ರೂ. ಪ್ಲ್ಯಾನ್

ಏರ್‌ಟೆಲ್ 2498ರೂ. ಪ್ಲ್ಯಾನ್

ಏರ್‌ಟೆಲ್‌ನ ಹೊಸ 2498ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗುತ್ತದೆ. ಹಾಗೂ ZEE5 ಪ್ರೀಮಿಯಂ ಸದಸ್ಯತ್ವ ಲಭ್ಯವಾಗಲಿದೆ. ಇತರೆ ಟೆಲಿಕಾಂಗಳ ವಾರ್ಷಿಕ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 2398ರೂ. ಪ್ಲ್ಯಾನ್

ಏರ್‌ಟೆಲ್ 2398ರೂ. ಪ್ಲ್ಯಾನ್

ಏರ್‌ಟೆಲ್‌ನ 2398ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗುತ್ತದೆ.

ಜಿಯೋ 2,399ರ ಪ್ಲಾನ್‌

ಜಿಯೋ 2,399ರ ಪ್ಲಾನ್‌

ಜಿಯೋದ ಹೊಸದಾಗಿ ಪರಿಚಯಿಸಿರುವ 2,399ರೂ. ವಾರ್ಷಿಕ ಪ್ಲಾನ್‌, ಹಿಂದಿನ 2121ರೂ. ಪ್ಲ್ಯಾನ್‌ಗಿಂತ ಹೆಚ್ಚಿನ ಪ್ರಯೋಜನ ಪಡೆದಿದೆ. ಈ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಅನಿಯಮಿತ ಎಸ್‌ಎಮ್‌ಎಸ್‌, ವಾಯಿಸ್‌ ಕರೆಗಳು ಸೇರಿದಂತೆ ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇತರೆ ಟೆಲಿಕಾಂಗಳಿಗೂ ಹೋಲಿಸಿದರೂ ಇದು ಉತ್ತಮ ವಾರ್ಷಿಕ ಯೋಜನೆ ಅನಿಸಲಿದೆ.

ವೊಡಾಫೋನ್ 2399ರೂ.ಪ್ಲ್ಯಾನ್

ವೊಡಾಫೋನ್ 2399ರೂ.ಪ್ಲ್ಯಾನ್

ವೊಡಾಫೋನಿನ 2399ರೂ.ಪ್ಲ್ಯಾನ್ ಒಂದು ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಹಾಗೂ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ.

Best Mobiles in India

English summary
Airtel has introduced a new yearly prepaid plan which will come with 2GB daily data and is priced at Rs 2,498.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+