Airtel ನಿಂದಲೂ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಆಫರ್: 2 ಅನಿಯಮಿತ ಡೇಟಾ ಪ್ಲ್ಯಾನ್ ಘೋಷಣೆ!
ಏರ್‌ಟೆಲ್ (Airtel) ಪ್ರಮುಖ ಟೆಲಿಕಾಂಗಳಲ್ಲಿ ಒಂದಾಗಿದ್ದು, ಈ ಮೂಲಕ ತನ್ನ ಗ್ರಾಹಕರಿಗೆ ವಿವಿಧ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಜನಪ್ರಿಯತೆ ಪಡೆದಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡೇಟಾ ಆಧಾರಿತ ಪ್ಲ್ಯಾನ್‌ಗಳ ಕಡೆ ಹೆಚ್ಚು ಗಮನಹರಿಸಿರುವ ಏರ್‌ಟೆಲ್ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಆಫರ್ ನೀಡಿದೆ.
ಹೌದು, 2023ರ ಐಸಿಸಿ ಪುರುಷರ ವಿಶ್ವಕಪ್ (ICC Men's World Cup 2023) ಹಿನ್ನೆಲೆ ಏರ್‌ಟೆಲ್ ಕ್ರಿಕೆಟ್ ಉತ್ಸಾಹಿಗಳಿಗೆ ಅಡೆತಡೆಯಿಲ್ಲದ ಮ್ಯಾಚ್ ಸ್ಟ್ರೀಮಿಂಗ್ ಅನ್ನು ಸುಲಭಗೊಳಿಸಲು ಎರಡು ವಿಶೇಷ ಅನಿಯಮಿತ ಡೇಟಾ ಯೋಜನೆಗಳನ್ನು ಘೋಷಣೆ ಮಾಡಿದೆ. ಹಾಗಿದ್ರೆ, ಈ ಪ್ಲ್ಯಾನ್‌ಗಳ ಬೆಲೆ ಎಷ್ಟು?, ಮಾನ್ಯತೆ ದಿನಗಳು ಎಷ್ಟು?, ಇತರೆ ಪ್ರಯೋಜನಗಳು ಏನು ಎಂಬ ಹಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್ನು ಐಸಿಸಿ ಪುರುಷರ ವಿಶ್ವಕಪ್ 2023 ಪಂದ್ಯಾವಳಿ ಪ್ರಾರಂಭವಾಗುತ್ತಿದ್ದಂತೆ ಭಾರತದಲ್ಲಿ ಕ್ರಿಕೆಟ್ ಸಂಭ್ರಮ ಹೆಚ್ಚಾಗುತ್ತಿದೆ. ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾದ ಏರ್‌ಟೆಲ್, ಅತ್ಯಾಕರ್ಷಕ ಡೇಟಾ ಪ್ಲ್ಯಾನ್‌ಗಳೊಂದಿಗೆ ಕ್ರಿಕೆಟ್ ಉತ್ಸಾಹಿಗಳಿಗೆ ಇನ್ನಷ್ಟು ಸಂತಸ ನೀಡಲಿದೆ. ಭಾರತದಲ್ಲಿ ಆಯೋಜಿಸಲಾದ 10 ತಂಡಗಳ ಪಂದ್ಯಾವಳಿ ವೀಕ್ಷಣೆಗೆ ರಾಷ್ಟ್ರದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕಾರಣಕ್ಕೆ ಏರ್‌ಟೆಲ್ ಹೊಸ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿದೆ.
ಏರ್‌ಟೆಲ್ ನಿಂದ ಎರಡು ಹೊಸ ಪ್ಲ್ಯಾನ್: ಭಾರತದ ಪ್ರಮುಖ ಟೆಲಿಕಾಂ ಪೂರೈಕೆದಾರನಾದ ಏರ್‌ಟೆಲ್ ಎರಡು ಅನಿಯಮಿತ ಡೇಟಾ ಯೋಜನೆಗಳನ್ನು ಘೋಷಿಸಿದೆ. ಅಂದರೆ 99 ರೂ. ಮತ್ತು 49 ರೂ. ಗಳ ಪ್ಲ್ಯಾನ್. ಇಷ್ಟೇ ಅಲ್ಲದೆ ಏರ್‌ಟೆಲ್ DTH ಸ್ಟಾರ್ ನೆಟ್‌ವರ್ಕ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಕ್ರಿಕೆಟ್ ಉತ್ಸಾಹಿಗಳನ್ನು ಗುರಿಯಾಗಿಟ್ಟುಕೊಂಡು ಸರಳೀಕೃತ ಆಯ್ಕೆ ಮತ್ತು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳ ಸೇರ್ಪಡೆಗಾಗಿ ವಿಶೇಷ ಯೋಜನೆಗಳನ್ನು ನೀಡಲಿದೆ
ಏರ್‌ಟೆಲ್‌ನ 99 ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು 2 ದಿನಗಳ ಅವಧಿಗೆ ಅನಿಯಮಿತ ಡೇಟಾವನ್ನು ಪಡೆಯಬಹುದಾಗಿದೆ. ಅಂದರೆ ಯಾವುದೇ ಡೇಟಾ ಮಿತಿಗಳ ಬಗ್ಗೆ ಚಿಂತಿಸದೆ ಬಳಕೆದಾರರು ಪಂದ್ಯಗಳನ್ನು ಸ್ಟ್ರೀಮ್ ಮಾಡಬಹುದಾಗಿದೆ. ಈ ಮೂಲಕ ತಮ್ಮದೇ ಆದ ಕ್ರಿಕೆಟ್ ಅಭಿಮಾನವನ್ನು ತೋರಬಹುದಾಗಿದೆ.
ಏರ್‌ಟೆಲ್‌ನ 49 ರೂ.ಗಳ ಪ್ಲ್ಯಾನ್ ನಲ್ಲಿ ಬಳಕೆದಾರರು ಒಂದು ದಿನದ ಸೇವೆ ಪಡೆಯಲಿದ್ದಾರೆ. ಅಂದರೆ ಯಾರಿಗೆ ಕಡಿಮೆ ಡೇಟಾ ಅಗತ್ಯ ಇದೆಯೋ ಅವರು ಈ ಸೌಲಭ್ಯ ಪಡೆಯಬಹುದು. ಏರ್‌ಟೆಲ್ ಒಂದು ದಿನಕ್ಕೆ 6GB ಡೇಟಾವನ್ನು ಒದಗಿಸುವ ಪ್ಲ್ಯಾನ್ ಇದಾಗಿದ್ದು, ಒಂದೇ ಕ್ರಿಕೆಟ್ ಪಂದ್ಯದ ಬಿಂಜ್‌ಗೆ ಈ ಪ್ಲ್ಯಾನ್ ಸೂಕ್ತವಾಗಿದೆ.
ಐಸಿಸಿ ವಿಶ್ವಕಪ್ 2023 ರ ಪ್ರತಿ ಕ್ಷಣವನ್ನು ಹಿಡಿಯಲು ಬಯಸುವ ಕ್ರಿಕೆಟ್ ಉತ್ಸಾಹಿಗಳಿಗಾಗಿ ಈ ಪ್ಲ್ಯಾನ್ ಯೋಗ್ಯವಾಗಿವೆ. ಈ ಎರಡು ವಿಶೇಷ ಡೇಟಾ ಯೋಜನೆಗಳನ್ನು ಏರ್‌ಟೆಲ್ ಈಗಾಗಲೇ ಅನಾವರಣಗೊಳಿಸಿದ್ದು, ಪ್ರಿಪೇಯ್ಡ್ ಗ್ರಾಹಕರಿಗೆ ಲಭ್ಯವಿದೆ ಮತ್ತು ವರ್ಧಿತ ವೀಕ್ಷಣೆಯ ಅನುಭವಕ್ಕೆ ಈ ಮೂಲಕ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಏರ್‌ಟೆಲ್ ಹೇಳಿಕೊಂಡಿದೆ.
ವಿಶೇಷ ಏರ್‌ಟೆಲ್ DTH ರೀಚಾರ್ಜ್ ಯೋಜನೆಗಳು: ಮೊಬೈಲ್ ಡೇಟಾ ಯೋಜನೆಗಳ ಜೊತೆಗೆ, ಏರ್‌ಟೆಲ್ DTH ಕ್ರಿಕೆಟ್ ಉತ್ಸಾಹಿಗಳಿಗೆ ವಿಶೇಷ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಲು ಸ್ಟಾರ್ ನೆಟ್‌ವರ್ಕ್‌ನೊಂದಿಗೆ ಭಾಗಿಯಾಗಿದೆ. ಈ ಪ್ಲ್ಯಾನ್‌ಗಳು ಸ್ಟಾರ್ ಸ್ಪೋರ್ಟ್ಸ್ ಪೋರ್ಟ್‌ಫೋಲಿಯೊದಿಂದ ಚಾನಲ್‌ಗಳನ್ನು ಆಯ್ಕೆ ಮಾಡುವ ಮತ್ತು ಸೇರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿವೆ.
ಇತ್ತೀಚಿನ ಓಪನ್ ಸಿಗ್ನಲ್ ವರದಿ ಪ್ರಕಾರ ಏರ್‌ಟೆಲ್‌ನ ಸ್ಥಾನವನ್ನು ಕ್ರಿಕೆಟ್ ಅಭಿಮಾನಿಗಳಿಗೆ ಗೋ-ಟು ಆಯ್ಕೆಯಾಗಿ ಮತ್ತಷ್ಟು ಹೆಚ್ಚಿಸಿದೆ. ಐಸಿಸಿ ವಿಶ್ವಕಪ್ 2023 ಕ್ರೀಡಾಂಗಣಗಳಲ್ಲಿ ಸುಧಾರಿತ ನೆಟ್‌ವರ್ಕ್ ಅನುಭವಗಳು ಮತ್ತು ವೇಗದ ಅಪ್‌ಲೋಡ್‌ನಿಂದಾಗಿ ಏರ್‌ಟೆಲ್ ಬಳಕೆದಾರರು ಪ್ರಯೋಜನ ಪಡೆಯಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಓಪನ್ ಸಿಗ್ನಲ್ ಎಲ್ಲಾ ಕ್ರೀಡಾಂಗಣಗಳಲ್ಲಿ ಮೊಬೈಲ್ ನೆಟ್‌ವರ್ಕ್ ಕಾರ್ಯಕ್ಷಮತೆಯ ವ್ಯಾಪಕ ಮೌಲ್ಯಮಾಪನವನ್ನು ನಡೆಸಿ ಈ ವರದಿ ನೀಡಿದೆ.
ಇದಲ್ಲದೆ ಭಾರತದಲ್ಲಿನ 40 ದೊಡ್ಡ ನಗರಗಳಲ್ಲಿ ಮೊಬೈಲ್ ಲೈವ್ ವಿಡಿಯೋ ಸ್ಟ್ರೀಮಿಂಗ್ ಗುಣಮಟ್ಟದಲ್ಲಿ ಏರ್‌ಟೆಲ್ ಅಗ್ರ ಪ್ರದರ್ಶನಕಾರರಾಗಿ ಹೊರಹೊಮ್ಮಿದೆ. ಈ ಅತ್ಯುತ್ತಮ ಪ್ರದರ್ಶನವು ಲೈವ್ ವಿಡಿಯೋ ಅನುಭವ ಮತ್ತು 5G ಲೈವ್ ವಿಡಿಯೋ ಅನುಭವ ಎರಡಕ್ಕೂ ವಿಸ್ತರಿಸುತ್ತದೆ. ತಮ್ಮ ಆದ್ಯತೆಯ ಭಾಷೆಯಲ್ಲಿ ತಡೆರಹಿತ ಸ್ಟ್ರೀಮಿಂಗ್‌ಗಾಗಿ ಹುಡುಕುತ್ತಿರುವ ಕ್ರಿಕೆಟ್ ಉತ್ಸಾಹಿಗಳಿಗೆ ಏರ್‌ಟೆಲ್ ಅನ್ನು ಆದ್ಯತೆಯ ನೆಟ್‌ವರ್ಕ್ ಆಗಿ ಬಳಕೆ ಮಾಡಬಹುದಾಗಿದೆ.

ಇದಿಷ್ಟು ಮಾತ್ರವಲ್ಲದೆ ವೀಕ್ಷಕರ ಅನುಭವವನ್ನು ಮತ್ತಷ್ಟು ಹೆಚ್ಚಿಗೆ ಮಾಡಲು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ ತ್ವರಿತ-ಪ್ರವೇಶದ ಪ್ರೋಮೋ-ರೈಲ್ ಅನ್ನು ಸಹ ಪರಿಚಯಿಸಿದೆ. ಈ ಫೀಚರ್ಸ್ ಗ್ರಾಹಕರು ಲೈವ್ ಕ್ರಿಕೆಟ್ ಪಂದ್ಯದ ಪ್ರಸಾರಕ್ಕೆ ತ್ವರಿತವಾಗಿ ನ್ಯಾವಿಗೇಟ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಪ್ರತಿ ರೋಮಾಂಚಕ ಕ್ಷಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ.


Click it and Unblock the Notifications








