Airtel recharge plan: ಏರ್‌ಟೆಲ್‌ನಿಂದ ಸದ್ದಿಲ್ಲದೆ ಹೊಸ ರೀಚಾರ್ಜ್ ಪ್ಲ್ಯಾನ್ ಘೋಷಣೆ!
ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ಏರ್‌ಟೆಲ್ ಆಗಾಗ್ಗೆ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿಕೊಂಡು ಬರುತ್ತಲೇ ಇದೆ. ಕೆಲವು ರೀಚಾರ್ಜ್ ಪ್ಲ್ಯಾನ್‌ಗಳು ಭಾರೀ ಜನಪ್ರಿಯತೆ ಪಡೆದರೆ, ಇನ್ನೂ ಕೆಲವು ಪ್ಲ್ಯಾನ್‌ಗಳು ಸದ್ದಿಲ್ಲದೆ ಲಿಸ್ಟ್‌ನಿಂದ ಮಾಯವಾಗುತ್ತವೆ. ಈ ಬೆಳವಣಿಗೆ ನಡುವೆ ಏರ್‌ಟೆಲ್ ಸೈಲೆಂಟ್ ಆಗಿ ಹೊಸ ಪ್ಲ್ಯಾನ್ ಘೋಷಣೆ ಮಾಡಿದೆ.
ಹೌದು, ಏರ್‌ಟೆಲ್ 6GB ಬಂಡಲ್ ಡೇಟಾ ಪ್ರಯೋಜನಗಳೊಂದಿಗೆ ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಇದು ವೇಗದ ಹಾಗೂ ಹೆಚ್ಚುವರಿ ಡೇಟಾ ಅಗತ್ಯವಿರುವ ಬಳಕೆದಾರರಿಗಾಗಿ ಉತ್ತಮವಾದ ಆಯ್ಕೆಯಾಗಿದೆ. ಆದರೆ ಈ ಪ್ಲ್ಯಾನ್‌ನ ಮಾನ್ಯತೆ ದಿನಗಳು ಮಾತ್ರ ಬಳಕೆದಾರರಿಗೆ ಬೇಸರ ಉಂಟು ಮಾಡುತ್ತದೆ. ಹಾಗಿದ್ರೆ, ಬನ್ನಿ ಈ ಹೊಸ ರೀಚಾರ್ಜ್ ಪ್ಲ್ಯಾನ್‌ನ ದರ ಎಷ್ಟು, ಇದರಿಂದ ಏನೆಲ್ಲಾ ಲಾಭ, ಮಾನ್ಯತೆ ದಿನಗಳು ಎಷ್ಟೆಂದು ತಿಳಿಯೋಣ.

ಏರ್‌ಟೆಲ್ 49ರೂ.ಗಳ ರೀಚಾರ್ಜ್ ಪ್ಲ್ಯಾನ್: ಏರ್‌ಟೆಲ್ ತನ್ನ ಶ್ರೇಣಿಗೆ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದ್ದು, ಇದರಲ್ಲಿ ಬಳಕೆದಾರರು 6GB ಡೇಟಾ ಪಡೆದುಕೊಳ್ಳಬಹುದು. ವೊಡಾಫೋನ್ ಐಡಿಯಾ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಇದೇ ರೀತಿಯ ಡೇಟಾ ವೋಚರ್ ಅನ್ನು ಲಾಂಚ್ ಮಾಡಿದ ಕೆಲವೇ ದಿನಗಳಲ್ಲಿ ಏರ್‌ಟೆಲ್ ಈ ಪ್ಲ್ಯಾನ್ ಪರಿಚಯಿಸುತ್ತಿದೆ.
ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಪ್ಲ್ಯಾನ್ 1 ದಿನದ ಮಾನ್ಯತೆಯೊಂದಿಗೆ ಬರುತ್ತದೆ. ಆದರೆ, ಈ ಪ್ರಿಪೇಯ್ಡ್ ಡೇಟಾ ವೋಚರ್ ಒಂದು ಸ್ವತಂತ್ರ ಯೋಜನೆ ಅಲ್ಲ. ಬದಲಾಗಿ ಸಕ್ರಿಯ ಬೇಸ್ ಪ್ಲ್ಯಾನ್ ಇದ್ದರೆ ಮಾತ್ರ ಈ ಪ್ಲ್ಯಾನ್ ಸೌಲಭ್ಯ ಪಡೆದುಕೊಳ್ಳಬಹುದು. ಈ ಮೂಲಕ ಮನೆಯಿಂದ ಕೆಲಸ ಮಾಡುವವರು, ನಿತ್ಯ ಹೆಚ್ಚಿನ ಇಂಟರ್ನೆಟ್ ಬಳಕೆ ಮಾಡುವವರು ಈ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು.

ಇದರ ನಡುವೆ ಮಾನ್ಯತೆ ದಿನಗಳು ಹೆಚ್ಚಿರಬೇಕು ಅಥವಾ ಬೇಸ್ ಪ್ಲ್ಯಾನ್‌ವರೆಗಾದರೂ ಇರುವ ರೀಚಾರ್ಜ್ ಪ್ಲ್ಯಾನ್ ಬೇಕು ಎಂದರೆ ನೀವು 58 ರೂ.ಗಳ ಪ್ಲ್ಯಾನ್‌ಕಡೆ ಕಣ್ಣಾಯಿಸಬಹುದು. ಆದರೆ, ಈ ಪ್ಲ್ಯಾನ್‌ನಲ್ಲಿ ನಿಮಗೆ ಕೇವಲ 3GB ಡೇಟಾ ಮಾತ್ರ ಲಭ್ಯವಾಗುತ್ತದೆ. ಇದಕ್ಕೂ ಮಿಗಿಲಾಗಿ ಇನ್ನೂ ಹೆಚ್ಚಿನ ಡೇಟಾ ಮತ್ತು ವ್ಯಾಲಿಡಿಟಿ ಅಗತ್ಯವಿದ್ದರೆ 98ರೂ.ಗಳ ಪ್ಲ್ಯಾನ್ ಲಭ್ಯವಿದೆ. ಇದರಲ್ಲಿ 5GB ಡೇಟಾ ಲಭ್ಯ ಇದ್ದು, ವಿಂಕ್ ಮ್ಯೂಸಿಕ್ ಪ್ರೀಮಿಯಂನ ಸೌಲಭ್ಯ ಲಭ್ಯ. ಹಾಗೂ ಬೇಸ್ ಪ್ಲ್ಯಾನ್‌ನ ಮಾನ್ಯತೆ ದಿನದ ವರೆಗೂ ಇದು ಇರುತ್ತದೆ.
ಏರ್‌ಟೆಲ್ ತನ್ನ 5G ನೆಟ್‌ವರ್ಕ್ ಅನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ದೇಶಾದ್ಯಂತ ನಿಯೋಜಿಸುವಲ್ಲಿ ಮುಂದಾಗಿದೆ. 5G ನೆಟ್‌ವರ್ಕ್ ಅನ್ನು ಭಾರತದ 3000 ಕ್ಕೂ ಹೆಚ್ಚು ನಗರಗಳು ಹಾಗೂ ಪಟ್ಟಣಗಳಲ್ಲಿ ನೀಡುತ್ತಿದ್ದು, ಡಿಸೆಂಬರ್ 2023ರ ಅಂತ್ಯದ ವೇಳೆಗೆ ಎಲ್ಲಾ ನಗರಗಳು ಹಾಗೂ ಪಟ್ಟಣಗಳನ್ನು ಕವರ್ ಮಾಡುವ ಗುರಿಯನ್ನು ಹೊಂದಿದೆ. ಈ ಮೂಲಕ ಎಲ್ಲರಿಗೂ 5G ಸೇವೆ ನೀಡಲು ಕಾತುರವಾಗಿದೆ.
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ 5G ಬೆಂಬಲಿತ ಸ್ಮಾರ್ಟ್‌ಫೋನ್ ಹೊಂದಿರುವ ಏರ್‌ಟೆಲ್ ಬಳಕೆದಾರರು 239 ರೂ.ಗಳು ಮತ್ತು ಅದಕ್ಕಿಂತ ಹೆಚ್ಚಿನ ಬೆಲೆ ಹೊಂದಿರುವ ಪ್ಲ್ಯಾನ್‌ಗಳಲ್ಲಿ ಅನಿಯಮಿತ ಏರ್‌ಟೆಲ್ 5G ಡೇಟಾವನ್ನು ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಅದರಂತೆ ನೀವು ಏರ್‌ಟೆಲ್ 5ಜಿ ಸಕ್ರಿಯಗೊಳಿಸಲು, ಏರ್‌ಟೆಲ್ ಥ್ಯಾಂಕ್ಸ್ ಆಪ್‌ಗೆ ಭೇಟಿ ನೀಡಿ ಅಲ್ಲಿ 5G ಡೇಟಾ ಆಫರ್ ಅನ್ನು ಕ್ಲೈಮ್ ಮಾಡಿ.

ಇದರೊಂದಿಗೆ ಜಿಯೋ ಸಹ ತಾನು ಯಾವುದಕ್ಕೂ ಹಿಂದೆ ಇಲ್ಲ ಎಂಬಂತೆ ತನ್ನ ಸ್ವತಂತ್ರ ನೆಟ್‌ವರ್ಕ್ ಅನ್ನು ಎಲ್ಲಾ ಕಡೆ ನಿಯೋಜಿಸುತ್ತಿದೆ. ಜಿಯೋ ಗ್ರಾಹಕರು 239ರೂ.ಗಳು ಹಾಗೂ ಅದಕ್ಕಿಂತ ಹೆಚ್ಚಿನ ಸಕ್ರಿಯ ಬೇಸ್ ಪ್ಲ್ಯಾನ್ ಮೂಲಕ 5G ಡೇಟಾವನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಂದರೆ 239 ರೂ.ಗಳ ಕೆಳಗಿನ ಪ್ಲ್ಯಾನ್ ಹೊಂದಿದ್ದರೆ 5G ಸೇವೆ ಪಡೆಯಲು 61ರೂ.ಗಳ ರೀಚಾರ್ಜ್ ಮಾಡಿಸಿಕೊಳ್ಳಬೇಕಿದೆ.


Click it and Unblock the Notifications








