Home
ಸುದ್ದಿಜಾಲ

ಟೆಲಿಕಾಂ ಲೋಕವನ್ನು ತಲ್ಲಣಗೊಳಿಸಿದ ಏರ್‌ಟೆಲ್‌ನ ಈ ಆಫರ್ ಎಲ್ಲರಿಗೂ ಲಭ್ಯವಿಲ್ಲ...!

By Srinidhi

ಭಾರ್ತಿ ಏರ್‌ಟೆಲ್ ಟೆಲಿಕಾಂ ಮಾರುಕಟ್ಟೆಯಲ್ಲಿ ಇರುವ ದರ ಸಮರಕ್ಕೆ ತುಪ್ಪ ಸುರಿಯುವಂತಹ ಕಾರ್ಯಕ್ಕೆ ಮುಂದಾಗಿದೆ. ಮೊನ್ನೇ ತಾನೆ ಹೊಸದೊಂದು ಪ್ಲಾನ್ ಬಿಡುಗಡೆ ಮಾಡಿದ್ದ ಏರ್‌ಟೆಲ್ ಮತ್ತೊಂದು ಹೊಸ ಪ್ಲಾನ್ ಬಿಡುಗಡೆ ಮಾಡಿದೆ. 3G ಮತ್ತು 4G ಗ್ರಾಹಕರನ್ನು ಸೆಳೆಯುವ ಸಲುವಾಗಿ ಈ ಆಪರ್ ಲಾಂಚ್ ಮಾಡಿದೆ ಎನ್ನಲಾಗಿದೆ.

ಟೆಲಿಕಾಂ ಲೋಕವನ್ನು ತಲ್ಲಣಗೊಳಿಸಿದ ಏರ್‌ಟೆಲ್‌ನ ಈ ಆಫರ್ ಎಲ್ಲರಿಗೂ ಲಭ್ಯವಿಲ್ಲ...!

ಓದಿರಿ: ಶುರುವಾಯ್ತು ನೋಕಿಯಾ 2 ಮಾರಾಟ: ಭಾರೀ ಬ್ಯಾಟರಿಯ ಫೋನ್ ಬೆಲೆ ಮಾತ್ರ ತೀರಾ ಕಮ್ಮಿ.!

ಮೊನ್ನೆತಾನೆ ವೊಡಾಫೋನ್ ಆಫರ್ ವೊಂದನ್ನು ಲಾಂಚ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಏರ್‌ಟೆಲ್ ಈ ಆಫರ್ ಲಾಂಚ್ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಕೇವಲ ಜಿಯೋ ದೊಂದಿಗೆ ಮಾತ್ರವೇ ಜಿದ್ಧಿಗೆ ಬಿದ್ದಿದ್ದ ಏರ್‌ಟೆಲ್ ವೊಡಾಫೋನ್ ಮೇಲೆಯೂ ಸದ್ಯ ಸಮರ ಸಾರಿದೆ. ಈ ಹೊಸ ಪ್ಲಾನ್‌ನಲ್ಲಿ ಡೇಟಾ ಸೇವೆಯನ್ನು ನೀಡಲು ಮುಂದಾಗಿದೆ ಏರ್‌ಟೆಲ್.

ಏರ್‌ಟೆಲ್ ರೂ.198ರ ಪ್ಲಾನ್:

ಏರ್‌ಟೆಲ್ ರೂ.198ರ ಪ್ಲಾನ್:

ಏರ್‌ಟೆಲ್ ನೀಡಿರುವ ಈ ಹೊಸ ಪ್ಲಾನ್ ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸುವುದು ಖಂಡಿತ ಎನ್ನಲಾಗಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಆಫರ್ ಗ್ರಾಹಕರಿಗೆ ವಾಯ್ಸ್ ಕರೆಯ ಲಾಭವನ್ನು ನೀಡುತ್ತಿಲ್ಲ ಬದಲಾಗಿ ಡೇಟಾ ಸೇವೆಯನ್ನು ಮಾತ್ರವೇ ನೀಡುತ್ತದೆ.

ಪ್ರತಿ ದಿನ 1GB ಡೇಟಾ:

ಪ್ರತಿ ದಿನ 1GB ಡೇಟಾ:

ಇದಲ್ಲದೇ ಈ ಆಫರ್ ನಲ್ಲಿ ಗ್ರಾಹಕರು ಪ್ರತಿ ದಿನ ಒಂದು GB 4G/3G ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಇಷ್ಟು ಕಡಿಮೆ ವೆಚ್ಚದಲ್ಲಿ ಪ್ರತಿ ನಿತ್ಯ ಒಂದು GB ಡೇಟಾ ಆಫರ್ ಅನ್ನು ಬೇರೆ ಯಾವುದೇ ನೆಟ್‌ವರ್ಕ್‌ನಲ್ಲಿ ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

ಎಲ್ಲಾರಿಗೂ ಲಭ್ಯವಿಲ್ಲ:

ಎಲ್ಲಾರಿಗೂ ಲಭ್ಯವಿಲ್ಲ:

ಏರ್‌ಟೆಲ್ ಬಿಡುಗಡೆ ಮಾಡಿರುವ ಈ ಆಫರ್ ಎಲ್ಲಾ ಬಳಕೆದಾರರಿಗೆ ದೊರೆಯುವುದಿಲ್ಲ ಎನ್ನಲಾಗಿದೆ. ಬದಲಾಗಿದೆ ಏರ್‌ಟೆಲ್ ಆಯ್ಕೆ ಮಾಡುವ ಕೇಲವು ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿದೆ ಎನ್ನಲಾಗಿದೆ. ಆದರೆ ಉತ್ತಮ ಆಫರ್ ಇದಾಗಿದೆ.

ಬೇರೆ ಆಫರ್ ಸಹ ಇದೆ:

ಬೇರೆ ಆಫರ್ ಸಹ ಇದೆ:

ಇದೇ ಮಾದರಿಯಲ್ಲಿ ಕೇವಲ ವಾಯ್ಸ್ ಕಾಲ್ ಲಾಭ ಬೇಕು ಎನ್ನುವವರಿಗೆ ರೂ.199 ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ 28 ದಿನಗಳ ವ್ಯಾಲಿಡಿಟಿಗೆ ಒಂದು GB ಡೇಟಾ ಹಾಗೂ ಸಂಫೂರ್ಣ ಉಚಿತ ಕರೆ ಮಾಡುವ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Airtel introduces Rs 198 pack to offer 1GB data per day. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+