100Mbps ವೇಗದ ಪ್ರಮುಖ ಬ್ರಾಡ್‌ಬ್ಯಾಂಡ್ ಯೋಜನೆಗಳ ಮಾಹಿತಿ ಇಲ್ಲಿದೆ!
ಸದ್ಯ ಇಂಟರ್ನೆಟ್ ಪ್ರತಿಯೊಬ್ಬರಿಗೂ ಅತ್ಯಗತ್ಯ ಆಗಿದ್ದು, ಅನೇಕ ಕೆಲಸಗಳು ಆನ್‌ಲೈನ್ ಮೂಲಕ ನಡೆಯಲು ಇಂಟರ್ನೆಟ್ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ವೇಗದ ಹಾಗೂ ಸ್ಥಿರ ಇಂಟರ್ನೆಟ್ ಬಳಕೆಗೆ ಬ್ರಾಡ್‌ಬ್ಯಾಂಡ್ ಯೋಜನೆಗಳು ಪೂರಕ. ಟೆಲಿಕಾಂ ಸಂಸ್ಥೆಗಳು ಸಹ ಆಕರ್ಷಕ ಪ್ರೈಸ್‌ನಲ್ಲಿ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಚಯಿಸುತ್ತ ಸಾಗಿವೆ. ಅವುಗಳಲ್ಲಿ ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎನ್ ಹಾಗೂ ಎಸಿಟಿ ಫೈಬರ್ ಗ್ರಾಹಕರ ಗಮನ ಸೆಳೆದಿವೆ. ಬಜೆಟ್ ಪ್ರೈಸ್‌ನಲ್ಲಿರುವ ಹಲವು ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅದರಲ್ಲಿ 100mbps ವೇಗದ ಬ್ರಾಡ್‌ಬ್ಯಾಂಡ್ ಯೋಜನೆಗಳು ಹೆಚ್ಚು ಉಪಯುಕ್ತ ಎನಿಸಿವೆ.

ಹೌದು, ಪ್ರತಿಷ್ಠಿತ ಬ್ರಾಡ್‌ಬ್ಯಾಂಡ್ ಕಂಪನಿಗಳು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವೇಗದ ಸಂಪರ್ಕದ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿವೆ. ಈ ನಿಟ್ಟಿನಲ್ಲಿ ಏರ್‌ಟೆಲ್, ಬಿಎಸ್‌ಎನ್‌ಎಲ್, ಜಿಯೋ ಹಾಗೂ ACT ಫೈಬರ್‌ನೆಟ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಈ ಸಂಸ್ಥೆಗಳು ಆರಂಭಿಕ ಪ್ಲ್ಯಾನ್ ಶುಲ್ಕವು ತಿಂಗಳಿಗೆ 1,000ರೂ.ಗಳ ಆಸುಪಾಸಿನಲ್ಲಿದ್ದು, 100 Mbps ವೇಗದ ಡೇಟಾ ಸೇವೆಯ ಪ್ರಯೋಜನೆ ನೀಡುವುದಾಗಿ ಹೇಳಿವೆ. ಹಾಗಾದರೇ ಏರ್‌ಟೆಲ್, ಬಿಎಸ್‌ಎನ್‌ಎಲ್, ಜಿಯೋ ಹಾಗೂ ACT ಟೆಲಿಕಾಂಗಳ 100Mbps ವೇಗದ ಆರಂಭಿಕ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಯೋಜನೆ
ಭಾರ್ತಿ ಏರ್‌ಟೆಲ್ ಸಂಸ್ಥೆಯು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ನೀಡಿದ್ದು, ಅವುಗಳಲ್ಲಿ 799ರೂ. ಪ್ಲ್ಯಾನ್ ಹೆಚ್ಚು ಆಕರ್ಷಿಸಿದೆ. ಈ ಪ್ಲ್ಯಾನಿನಲ್ಲಿ 100 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ದೊರೆಯಲಿದ್ದು, ತಿಂಗಳಿಗೆ 150GB FUP ಮಿತಿ ನೀಡಲಾಗಿದೆ. ಈ ಪ್ಯಾನಿನೊಂದಿಗೆ ಏರ್‌ಟೆಲ್ ಎಕ್ಸ್‌ಟ್ರಿಮ್ ಸದಸ್ಯತ್ವ ದೊರೆಯಲಿದ್ದು, ಜೊತೆಗೆ ಅನಿಯಮಿತ ಉಚಿತ ಕರೆಗಳು ಪ್ರಯೋಜನ ಸಿಗಲಿದೆ.

ಬಿಎಸ್‌ಎನ್ಎಲ್ ಬ್ರಾಡ್‌ಬ್ಯಾಂಡ್ ಯೋಜನೆ
ಬಿಎಸ್‌ಎನ್ಎಲ್ ಸಂಸ್ಥೆಯು ಬ್ರಾಡ್‌ಬ್ಯಾಂಡ್ ವಲಯದಲ್ಲಿ ಗುರುತಿಸಿಕೊಂಡಿದ್ದು, ಸಂಸ್ಥೆಯ 1277ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ 100 Mbps ವೇಗದ ಪ್ರಯೋಜನವನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ 750GB ಡೇಟಾ ಸೌಲಭ್ಯವು ದೊರೆಯಲಿದ್ದು, ಈ ನಿಗದಿತ ಡೇಟಾ ಮುಗಿದ ಬಳಿಕ 2 Mbps ಸಾಮರ್ಥ್ಯದಲ್ಲಿ ಇಂಟರ್ನೆಟ್ ಮುಂದುವರೆವುದು. ಅನಿಯಮಿತ ಲ್ಯಾಂಡ್‌ಲೈನ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ.

ACT ಫೈಬರ್‌ನೆಟ್ ಯೋಜನೆ
ACT ಫೈಬರ್‌ನೆಟ್ ಸಹ ಅಗ್ಗದ ಬ್ರಾಡ್‌ಬ್ಯಾಂಡ್ ಯೋಜನೆಗಳ ಆಯ್ಕೆಗಳನ್ನು ಹೊಂದಿದ್ದು, 100 Mbps ವೇಗದ ಆರಂಭಿಕ ಪ್ಲ್ಯಾನ್ 799ರೂ.ಗಳಾಗಿದೆ (ದೆಹಲಿಯಲ್ಲಿ). ಇದೇ ಪ್ಲ್ಯಾನ್ ಹೈದ್ರಾಬಾದನಲ್ಲಿ ಟಾಕ್ಸ್ ಹೊರತುಪಡಿಸಿ 1,075ರೂ. ಆಗಿದೆ. ಈ ಬ್ರಾಡ್‌ಬ್ಯಾಂಡ್ ಪ್ಲ್ಯಾನಿನಲ್ಲಿ 1000GB ಡೇಟಾ ಸೌಲಭ್ಯವು ದೊರೆಯಲಿದ್ದು, ನಿಗದಿತ ಡೇಟಾ ಬಳಕೆ ಮುಗಿತ ಬಳಿಕ FUP ವೇಗದ ಮಿತಿಯು 5 Mbps ಸಾಮರ್ಥ್ಯದಲ್ಲಿರಲಿದೆ.

ಜಿಯೋ ಬ್ರಾಡ್‌ಬ್ಯಾಂಡ್ ಯೋಜನೆ
ಜಿಯೋ ಸಂಸ್ಥೆಯು 100 Mbps ನಿಂದ 1 Gbps ವರೆಗಿನ ಹಲವು ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಅವುಗಳಲ್ಲಿ ಆರಂಭಿಕ ಯೋಜನೆಯು 100mbps ವೇಗದಲ್ಲಿ ಗಮನ ಸೆಳೆದಿದೆ. ಜಿಯೋ 699ರೂ.ಗಳ ಆರಂಭಿಕ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ 100mbps ವೇಗದ ಸೌಲಭ್ಯವನ್ನು ಪಡೆದಿದ್ದು, ಒಟ್ಟು 1200GB ಡೇಟಾ ಪ್ರಯೋಜನ ಒದಗಿಸಲಿದೆ. ಇದರೊಂದಿಗೆ ಜಿಯೋದ ಇತರೆ ಪ್ರಯೋಜನಗಳು ಸಹ ಲಭ್ಯವಾಗಲಿವೆ.


Click it and Unblock the Notifications








