'ಬಾಹುಬಲಿ 4G' ಏರ್‌ಟೆಲ್ ಸಿಮ್ ಬಿಡುಗಡೆ..ಉಚಿತ ಡೇಟಾ ಕೊಡುಗೆ!!

Written By:

ಬಾಹುಬಲಿ ಸಿನಿಮಾ ಜೊತೆಗೆ ಭಾರತದ ನಂಬರ್ ಒನ್ ಟೆಲಿಕಾಂ ಏರ್‌ಟೆಲ್ ಕೈಜೋಡಿಸಿದ್ದು, ಹೊಸದಾಗಿ "ಬಾಹುಬಲಿ 4G ಸಿಮ್" ಬಿಡುಗಡೆ ಮಾಡಿದೆ! ಉಚಿತ ಡೇಟಾವನ್ನು ಒಳಗೊಂಡಿರುವ ನೂತನ ಸಿಮ್ ಬಿಡುಗಡೆಯಾಗಿದ್ದು, ಈ ಸಿಮ್ ಮೂಲಕ ಅತ್ಯಂತ ವೇಗದ ನೆಟ್‌ವರ್ಕ್ ನೀಡುವುದಾಗಿ ಏರ್‌ಟೆಲ್ ತಿಳಿಸಿದೆ.!!

ಹೈದರಬಾದ್‌ನಲ್ಲಿ ನಡೆದ "ದಿ ಬಾಹುಬಲಿ ನೆಟ್‌ವರ್ಕ್" ಎಂಬ ಕಾರ್ಯಕ್ರಮದಲ್ಲಿ ಏರ್‌ಟೆಲ್ ಮತ್ತು ಬಾಹುಬಲಿ ಸಿನಿಮಾ ತಂಡ ಒಟ್ಟುಗೂಡಿ ವಿಶೆಷ 'ಬಾಹುಬಲಿ 2 ಸಿಮ್' ಬಿಡುಗಡೆ ಮಾಡಿದೆ. ಬಾಹುಬಲಿ 2 ಸಿಮ್ ಮೂಲಕ ಭಾರತದ ವೇಗದ ನೆಟ್‌ವರ್ಕ್ ಮೂಲಕ ಸಿನೆಮಾ ನೋಡಿ ಎಂಜಾಯ್ ಮಾಡಬಹುದು ಎಂದು ಏರ್‌ಟೆಲ್‌ ಹೇಳಿದೆ.!!

 'ಬಾಹುಬಲಿ 4G' ಏರ್‌ಟೆಲ್ ಸಿಮ್ ಬಿಡುಗಡೆ..ಉಚಿತ ಡೇಟಾ ಕೊಡುಗೆ!!

ಓದಿರಿ: 3 ತಿಂಗಳು ಸಂಪೂರ್ಣ ಉಚಿತ ಡೇಟಾ ಘೊಷಿಸಿದ ಏರ್‌ಟೆಲ್.! ಟೆಲಿಕಾಂಗೆ ಶಾಕ್..!!

ಈ ಬಗ್ಗೆ ಮಾತನಾಡಿದ ಏರ್‌ಟೆಲ್ ಚೀಫ್ ಮಾರ್ಕೆಟಿಂಗ್ ಆಫಿಸರ್ ರಾಜ್ ಪೆಡಿಪೆಡ್ಡಿ, ಭಾರತದ ಅತ್ಯಂತ ವೇಯಗದ ನೆಟ್‌ವರ್ಕ್ ಹೊಂದಿರುವ ಏರ್‌ಟೆಲ್ ಬಾಹುಬಲಿ 2 ಜೊತೆ ಕೈಜೋಡಿಸಿದ್ದು ಅತ್ಯಂತ ಸಂತೋಷದ ವಿಷಯ. ಬಾಹುಬಲಿ 4G ಸಿಮ್ ಮೂಲಕ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಜನರಿಗೆ ತಲುಪಿಸುವುದಾಗಿ ಹೇಳಿದರು.

 'ಬಾಹುಬಲಿ 4G' ಏರ್‌ಟೆಲ್ ಸಿಮ್ ಬಿಡುಗಡೆ..ಉಚಿತ ಡೇಟಾ ಕೊಡುಗೆ!!

ನೂತನ ಬಾಹುಬಲಿ 2 ಸಿಮ್ ಮೂಲಕ ಉಚಿತ ಡೇಟಾ ನೀಡುವುದಾಗಿ ಕಾರ್ಯಕ್ರಮದಲ್ಲಿ ಹೇಳಿದರೂ ಎಷ್ಟು GB ಡೇಟಾವನ್ನು ಉಚಿತವಾಗಿ ನೀಡುವುದರ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ. ಇನ್ನು ಬಾಹುಬಲಿ 2 ಸಿಮ್ ಮೂಲಕ ಏರ್‌ಟೆಲ್ ಗ್ರಾಹಕರು ಏರ್‌ಟೆಲ್ ಮೂವಿಸ್, ವ್ಯಾಂಕ್ ಮೂವಿಸ್‌ಗಳನ್ನು ಸಹ ಉಚಿತವಾಗಿ ಎಂಜಾಯ್ ಮಾಡಬಹುದು ಎಂದು ಏರ್‌ಟೆಲ್ ಹೇಳಿದೆ.!!

English summary
airtel announced its partnership with baahubali 2. to know more visi to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot