Home
ಸುದ್ದಿಜಾಲ

Airtel ನಿಂದ ಪರಿಸರ ಸ್ನೇಹಿ ಡೆಬಿಟ್ ಕಾರ್ಡ್ ಲಾಂಚ್‌! ವಿಷದ ಕಾರ್ಡ್‌ಗೆ ಹೇಳಿ ವಿದಾಯ

ಏರ್‌ಟೆಲ್‌ (Airtel) ಕಂಪೆನಿಯು ಕೇವಲ ಟೆಲಿಕಾಂ ಸೇವೆಗಷ್ಟೇ ಸೀಮಿತವಾಗದೆ ಇತರೆ ವಿಭಾಗಗಳಲ್ಲೂ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಈ ನಡುವೆ ಏರ್‌ಟೆಲ್ ತನ್ನ ಬಳಕೆದಾರರಿಗೆ ಸಂತಸದ ಸುದ್ದಿ ನೀಡಿದೆ. ಟೆಲಿಕಾಂ ವಲಯದ ಹೊರತಾಗಿ ಬ್ಯಾಂಕಿಂಗ್ ಸೇವೆಗಳಲ್ಲಿ ಜನರನ್ನು ಆಕರ್ಷಿಸುತ್ತಿರುವ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕಿಂಗ್ (Airtel Payments Banking) ಇದೀಗ ಭಾರತದ ಮೊದಲ ಪರಿಸರ ಸ್ನೇಹಿ ಡೆಬಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.

ಹೌದು, ನಿಮಗೆ ಈ ವಿಷಯ ಕೇಳಿ ಕೊಂಚ ಗೊಂದಲಕ್ಕೆ ಒಳಗಾಗಿರಬಹುದು. ಆದರೆ, ಇದು ನಿಜ. ಹಾಗಿದ್ರೆ, ಡೆಬಿಟ್ ಕಾರ್ಡ್ ಪರಿಸರ ಸ್ನೇಹಿಯೇ? ಇದರಲ್ಲಿ ಅಂತಹುದೇನಿದೆ? ಪರಿಸರ ಸ್ನೇಹಿ ಡೆಬಿಟ್ ಕಾರ್ಡ್ ಎಂದರೇನು? ಅದರಿಂದ ಆಗುವ ಪ್ರಯೋಜನಗಳು ಏನು ? ಈ ಹೊಸ ಪ್ರಕಾರದ ಏರ್‌ಟೆಲ್ ಪಾವತಿ ಬ್ಯಾಂಕಿಂಗ್ ಡೆಬಿಟ್ ಕಾರ್ಡ್‌ಗಳನ್ನು ಎಲ್ಲಿ ಪಡೆದುಕೊಳ್ಳಬಹುದು? ಇದರಿಂದ ಏನನ್ನೆಲ್ಲಾ ಖರೀದಿ ಮಾಡಬಹುದು ಎಂಬುದನ್ನು ತಿಳಿಯೋಣ ಬನ್ನಿ.

Airtelನಿಂದ ಪರಿಸರ ಸ್ನೇಹಿ ಡೆಬಿಟ್ ಕಾರ್ಡ್ ಲಾಂಚ್‌!ವಿಷದ ಕಾರ್ಡ್‌ಗೆ ಹೇಳಿ ವಿದಾಯ

ಏರ್‌ಟೆಲ್‌ ಈಗಾಗಲೇ ಟೆಲಿಕಾಂ (Telecom) ಸೇವೆಗಳೊಂದಿಗೆ ಹಲವಾರು ಸೇವೆಗಳನ್ನು ಒದಗಿಸುತ್ತದೆ. ಅಂದರೆ ಬ್ಯಾಂಕಿಂಗ್, ಫಾಸ್ಟ್ಯಾಗ್ ರೀಚಾರ್ಜ್, ಡಿಜಿಟಲ್ ಗೋಲ್ಡ್, ಸೆಕ್ಯುರಿಟಿ ಕ್ಯಾಮೆರಾ ಸೇವೆಯಂತಹ ಹಲವಾರು ಸೌಲಭ್ಯಗಳನ್ನು ಈಗಾಗಲೇ ಗ್ರಾಹಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಏರ್‌ಟೆಲ್‌ ಈ ಹೊಸ ಪರಿಸರ ಸ್ನೇಹಿ ಡೆಬಿಟ್ ಕಾರ್ಡ್( eco-friendly debit card) ಪರಿಚಯಿಸಿದೆ.

ಅಂದರೆ ಏರ್‌ಟೆಲ್‌ ಭಾರತದಲ್ಲಿ ಮೊದಲ ಬಾರಿಗೆ ಪರಿಸರ ಸ್ನೇಹಿ ಡೆಬಿಟ್ ಕಾರ್ಡ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಮೂಲಕ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಡೆಬಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ ಮೊದಲ ಭಾರತೀಯ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಈ ಕ್ರಮದಿಂದ ಪರಿಸರಕ್ಕೆ ಹಾಗೂ ಬ್ಯಾಂಕಿಂಗ್‌ ವ್ಯವಸ್ಥೆಗೆ ತನ್ನದೇ ಆದ ಮಾದರಿ ಸೇವೆ ನೀಡಿದಂತಾಗಿದೆ.

ಡೆಬಿಟ್ ಕಾರ್ಡ್‌ಗಳನ್ನು ಈ ಕ್ಷಣಕ್ಕೂ ಸಹ ಪ್ಲಾಸ್ಟಿಕ್ ವಸ್ತುಗಳಿಂದ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್ ಭೂಮಿಗೆ ವಿಷವಾಗಿರುವುದು, ಆಗುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ. ನಿಖರವಾಗಿ ಹೇಳಬೇಕು ಎಂದರೆ ಕ್ರೆಡಿಟ್ ಕಾರ್ಡ್‌ಗಳಲ್ಲಿನ ಪ್ಲಾಸ್ಟಿಕ್ ಅನ್ನು ಪಾಲಿವಿನೈಲ್ ಕ್ಲೋರೈಡ್ ಅಸಿಟೇಟ್‌ನಿಂದ ತಯಾರು ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ PVCA ಅಥವಾ PVC ಎಂದು ಕರೆಯಲಾಗುತ್ತದೆ. ಆದರೆ, ಏರ್‌ಟೆಲ್ ಮಾತ್ರ ತನ್ನ ಡೆಬಿಟ್ ಕಾರ್ಡ್ ಅನ್ನು ಪರಿಸರ ಸ್ನೇಹಿ ವಸ್ತುಗಳೊಂದಿಗೆ ತಯಾರು ಮಾಡಿ ಪರಿಸರಕ್ಕೆ ಕೊಡುಗೆ ನೀಡಿದೆ.

ಅಂದರೆ ಇದನ್ನು R-PVC ಪ್ರಮಾಣೀಕೃತ ಪರಿಸರ ಸ್ನೇಹಿ ವಸ್ತುಗಳಿಂದ ನಿರ್ಮಾಣ ಮಾಡಲಾಗಿದ್ದು, ಈ ಉತ್ಪನ್ನವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಮೇಲೆ ಪರಿಣಾಮ ಬೀರುವ ಉತ್ಪನ್ನಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಏರ್‌ಟೆಲ್ ತಿಳಿಸಿದೆ. ಅದರಲ್ಲೂ ಪ್ರಮುಖವಾಗಿ ಇಂಗಾಲದ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡಬಹುದು. ಸುಮಾರು 50,000 R-PVC ಕಾರ್ಡ್‌ಗಳ ಪ್ರತಿ ಬ್ಯಾಚ್ ಇಂಗಾಲದ ಹೊರಸೂಸುವಿಕೆಯನ್ನು 350 ಕೆಜಿಯಷ್ಟು ಕಡಿಮೆ ಮಾಡುತ್ತದೆ ಎಂದು ಉಲ್ಲೇಖ ಮಾಡಿದೆ.

Airtelನಿಂದ ಪರಿಸರ ಸ್ನೇಹಿ ಡೆಬಿಟ್ ಕಾರ್ಡ್ ಲಾಂಚ್‌!ವಿಷದ ಕಾರ್ಡ್‌ಗೆ ಹೇಳಿ ವಿದಾಯ

ಇದರೊಂದಿಗೆ ಈ ಕಾರ್ಡ್‌ಗಳು ಹೈಡ್ರೋಕಾರ್ಬನ್ ಬಳಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. R-PVC ಕಾರ್ಡ್‌ಗಳ ಉತ್ಪಾದನೆಯು ಹೈಡ್ರೋಕಾರ್ಬನ್ ಬಳಕೆಯನ್ನು 43% ರಷ್ಟು ಕಡಿಮೆ ಮಾಡಲಿದೆ ಎಂದು ತಿಳಿಸಲಾಗಿದ್ದು, ಇದರೊಂದಿಗೆ R-PVC ಕಾರ್ಡ್‌ಗಳ ಬ್ಯಾಚ್‌ಗೆ 6.6 ಮಿಲಿಯನ್ ಲೀಟರ್ ನೀರನ್ನು ಉಳಿಸಲು ಸಹ ಇದು ಸಹಾಯ ಮಾಡಲಿದೆ ಎಂದು ಏರ್‌ಟೆಲ್‌ ಮಾಹಿತಿ ನೀಡಿದೆ.

ಇನ್ನು ಈ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನ ಈ ಹೊಸ ಪರಿಸರ ಸ್ನೇಹಿ ಕಾರ್ಡ್‌ಗಳು ವಿಭಿನ್ನ ಕೊಡುಗೆಗಳೊಂದಿಗೆ ಎರಡು ವೇರಿಯಂಟ್‌ನಲ್ಲಿ ಲಭ್ಯ ಇವೆ. ಅವುಗಳೆಂದರೆ ವೈಯಕ್ತಿಕಗೊಳಿಸಿದ ಕ್ಲಾಸಿಕ್ ಕಾರ್ಡ್ ಮತ್ತು ಇನ್‌ಸ್ಟಾ ಕ್ಲಾಸಿಕ್ ಕಾರ್ಡ್. ವೈಯಕ್ತಿಕಗೊಳಿಸಿದ ಕಾರ್ಡ್ ಅನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ನೀವು ಬುಕ್‌ ಮಾಡಿಕೊಳ್ಳಬಹುದು. ಇನ್‌ಸ್ಟಾ ಕಾರ್ಡ್ ಆಯ್ದ ಬ್ಯಾಂಕ್ ಪಾಯಿಂಟ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಉಳಿದಂತೆ ಈ ಏರ್‌ಟೆಲ್ ಪರಿಸರ ಸ್ನೇಹಿ ಡೆಬಿಟ್ ಕಾರ್ಡ್‌ 10,000 ರೂ.ಗಳ ವರೆಗಿನ ಇ-ಕಾಮರ್ಸ್ ಪ್ರಯೋಜನಗಳನ್ನು ನೀಡಲಿದೆ ಜೊತೆಗೆ ಭಾರತೀಯ ನಗರಗಳಲ್ಲಿ ಒನ್ ಡೈನ್ಸ್ ಅನ್ನು ಹೊಂದಿದ್ದು, ಕಂಪನಿಯು ಶೀಘ್ರದಲ್ಲೇ ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಹೆಚ್ಚಿನ ಡೆಬಿಟ್ ಕಾರ್ಡ್‌ಗಳನ್ನು ಪರಿಚಯಿಸಲಿದೆ ಎಂದು ಏರ್‌ಟೆಲ್‌ ಬ್ಯಾಂಕ್ ಮಾಹಿತಿ ನೀಡಿದೆ.

Best Mobiles in India

English summary
Airtel Payments Banking, which is attracting people in banking services apart from the telecom sector, has now launched India's first eco-friendly debit card.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+