ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್: ಈ ಹೊಸ ಪ್ಲ್ಯಾನ್‌ನಲ್ಲಿ ಹಲವು ಪ್ರಯೋಜನ!
ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ಏರ್‌ಟೆಲ್ ಮೊನ್ನೆಯಷ್ಟೇ 599ರೂ. ಗಳ ಪೋಸ್ಟ್‌ಪೇಯ್ಡ್ (postpaid plans) ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಪ್ಲ್ಯಾನ್ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಸೇವೆ ಲಭ್ಯವಾಗುತ್ತಿದ್ದು, ಈ ಸಂತಸದ ನಡುವೆ ಏರ್‌ಟೆಲ್ ಮತ್ತೆ ಹೊಸದೊಂದು ಪ್ಲ್ಯಾನ್ ಬಗ್ಗೆ ಘೋಷಣೆ ಮಾಡಿದೆ.
ಹೌದು, ಏರ್‌ಟೆಲ್ ತನ್ನ ಗ್ರಾಹಕರಿಗೆ ವಿವಿಧ ರೀತಿಯ ರೀಚಾರ್ಜ್ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿಕೊಂಡು ಬರುತ್ತಿದ್ದು, ಇದೀಗ ಪ್ರೀಮಿಯಂ ಸೇವೆ ಹಾಗೂ ಹಲವು ಪ್ರಯೋಜನ ನೀಡುವ ಹೊಸ ಬ್ಲಾಕ್ ಪ್ಲ್ಯಾನ್ (Airtel Black) ಅನ್ನು ಘೋಷಣೆ ಮಾಡಿದೆ. ಈ ಮೂಲಕ ಏರ್‌ಟೆಲ್ ಗ್ರಾಹಕರು ಒಂದೇ ರೀಚಾರ್ಜ್‌ನಲ್ಲಿ ಬಂಡಲ್‌ಗಟ್ಟಲೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಯಾವುದು ಈ ಹೊಸ ರೀಚಾರ್ಜ್ ಪ್ಲ್ಯಾನ್?, ಇದರಿಂದ ಲಭ್ಯವಾಗುವ ಪ್ರಯೋಜನಗಳು ಏನೇನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏರ್‌ಟೆಲ್ ಬ್ಲಾಕ್ ಪ್ಲ್ಯಾನ್: ಏರ್‌ಟೆಲ್ ಬ್ಲಾಕ್ 799ರೂ.ಗಳ (Airtel Black 799) ರೀಚಾರ್ಜ್ ಪ್ಲ್ಯಾನ್ ಪರಿಚಯಿಸಲಾಗಿದ್ದು, ಪ್ರೀಮಿಯಂ ಸೇವೆ ಮತ್ತು ಪ್ರಯೋಜನಗಳೊಂದಿಗೆ ಒಂದೇ ಪ್ಲ್ಯಾನ್‌ನಲ್ಲಿ ಡಿಟಿಹೆಚ್, ಫೈಬರ್ ಮತ್ತು ಮೊಬೈಲ್ ಪ್ಲ್ಯಾನ್‌ಗಳನ್ನು ಬಂಡಲ್ ಮಾಡಲಾಗಿದೆ. ಅಂತೆಯೇ ಇದರಲ್ಲಿ 2 ಪೋಸ್ಟ್‌ಪೇಯ್ಡ್ ಆಯ್ಕೆ, 1 ಡಿಟಿಹೆಚ್ ಕನೆಕ್ಷನ್ ಒಳಗೊಂಡಂತೆ ಒಟ್ಟು 3 ಕನೆಕ್ಷನ್ ಸೇವೆಯನ್ನು ನೀವು ಪಡೆಯಬಹುದು.
ಇನ್ಮುಂದೆ ಏರ್‌ಟೆಲ್ ಬಳಕೆದಾರರು ಈ ರೀಚಾರ್ಜ್ ಪ್ಲ್ಯಾನ್ ಮೂಲಕ ಎರಡು ಆಡ್-ಆನ್ ಸಂಪರ್ಕಗಳು ಮತ್ತು ಡಿಟಿಹೆಚ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದ್ದು, ಇದು ಗ್ರಾಹಕರ ಆಯ್ಕೆಗೆ ಸಂಬಂಧಿಸಿದ್ದಾಗಿದೆ. ಅಂದರೆ, ಗ್ರಾಹಕರು ತಮ್ಮ ಆಯ್ಕೆಯ ಪ್ರಕಾರ ಸೇವೆಗಳನ್ನು ಸೇರಿಸಿಕೊಳ್ಳಬಹುದು. ಅದರಂತೆ ಪೋಸ್ಟ್‌ಪೇಯ್ಡ್ ಸೇವೆಯಲ್ಲಿ 105 GB ಡೇಟಾ, ಅನಿಯಮಿತ ವಾಯ್ಸ್ ಕಾಲ್ ಪ್ರಯೋಜನಗಳು ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.
ಅದಾಗ್ಯೂ ಪೋಸ್ಟ್‌ಪೇಯ್ಡ್ ಸೇವೆಯಲ್ಲಿ ನೀವು ಡೇಟಾ ರೋಲ್‌ಓವರ್ ಪ್ರಯೋಜನಗಳನ್ನು ಸಹ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚುವರಿಯಾಗಿ ಏರ್‌ಟೆಲ್ ಬ್ಲ್ಯಾಕ್ 799ರೂ. ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 260ರೂ.ಮೌಲ್ಯದ ಟಿವಿ ಚಾನೆಲ್ ಸೇವೆ ಪಡೆದುಕೊಳ್ಳಲು ಅನುಮತಿಸಲಾಗಿದೆ. ಜೊತೆಗೆ ಬಳಕೆದಾರರು ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಪ್ರೈಮ್ ವಿಡಿಯೋ. ಡಿಸ್ನಿ + ಹಾಟ್‌ಸ್ಟಾರ್ ಹಾಗೂ ಏರ್‌ಟೆಲ್ ಎಕ್ಸ್ಟ್ರೀಮ್ ಸೇವೆಯನ್ನೂ ಪಡೆಯಬಹುದಾಗಿದೆ.

ವಿಶೇಷ ಆದ್ಯತಾ ಸೇವೆಗಳು: ಈ ಪ್ಲ್ಯಾನ್‌ನಲ್ಲಿ ನೀವು ಒಂದು ಬಿಲ್ ಮತ್ತು ಒಂದು ಕಾಲ್ ಸೆಂಟರ್ ಸೇವೆ, ಡೆಡಿಕೇಟೆಡ್ ರಿಲೇಶನ್‌ಶಿಪ್ ಟೀಮ್, ಆದ್ಯತಾ ರೆಸಲ್ಯೂಶನ್, 60 ಸೆಕೆಂಡ್‌ಗಳಲ್ಲಿ ಕಾಲ್ ಪಿಕಪ್, ಉಚಿತ ಸೇವಾ ಭೇಟಿ, ಬೈ ನೌ ಆಂಡ್ ಪೇ ಲೇಟರ್ ಸೇವೆ, ಏರ್‌ಟೆಲ್ ಶಾಪ್ ಸೌಲಭ್ಯ ಸೇರಿದಂತೆ ಇನ್ನಿತರೆ ಆದ್ಯತಾ ಸೇವೆಗಳನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇನ್ನ ಇನ್‌ಸ್ಟಾಲೇಶನ್ ಮತ್ತು ಒಂದು ವರ್ಷದ ಪೋಸ್ಟ್‌ಪೇಯ್ಡ್ ಬಿಲ್‌ಗಳಲ್ಲಿ ತಿಂಗಳಿಗೆ 100 ರೂ. ಮೌಲ್ಯದ ಪ್ರಯೋಜನಗನ್ನೂ ಸಹ ನೀಡಲಾಗುತ್ತದೆ. ಉಚಿತ ಇನ್‌ಸ್ಟಾಲೇಶನ್ ಪ್ರಯೋಜನಗಳಿಗಾಗಿ ಆಯ್ಕೆಮಾಡಿದ ಪ್ಲ್ಯಾನ್‌ಗೆ ಮುಂಚಿತವಾಗಿ ಪಾವತಿಸಬೇಕು, ಮುಂಬರುವ ಬಿಲ್‌ಗಳಲ್ಲಿ ಅದನ್ನು ಸರಿಹೊಂದಿಸಲಾಗುತ್ತದೆ. ಇದರ ಹೊರತಾಗಿ ಬ್ಲಾಕ್ ಗ್ರಾಹಕರು VoLTE ಮತ್ತು VoWiFi ಸೇವೆಗಳನ್ನು ಪಡೆದುಕೊಳ್ಳಬಹುದಾಗಿದ್ದು, 5G ಸೇವೆ ಇರುವ ಪ್ರದೇಶಗಳಲ್ಲಿ ಅನ್‌ಲಿಮಿಟೆಡ್ 5G ಡೇಟಾ ಆಫರ್ ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ಏರ್‌ಟೆಲ್ ಕೆಲವು ದಿನಗಳ ಹಿಂದಷ್ಟೇ ಎರಡು ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ 599 ರೂ. ಗಳ ಪ್ಲಾಟಿನಂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಆದರೆ ನೀವು ಈ ಬ್ಲಾಕ್ ಪ್ಲ್ಯಾನ್‌ನಲ್ಲಿ ಡಿಟಿಹೆಚ್ ಸೇವೆಯನ್ನು ಹುಡುಕುತ್ತಿದ್ದರೆ ಈ ಹೊಸ 799 ರೂ. ಗಳ ಬ್ಲಾಕ್ ಪ್ಲ್ಯಾನ್ ಯೋಗ್ಯವಾಗಿದೆ.


Click it and Unblock the Notifications








