Home
ಸುದ್ದಿಜಾಲ

Airtel ನಿಂದ ಅನಿಯಮಿತ ಡೇಟಾ ಸೌಲಭ್ಯ ಇರುವ 99 ರೂ.ಗಳ ಪ್ಲ್ಯಾನ್‌ ಲಾಂಚ್‌!

ಏರ್‌ಟೆಲ್‌ ಟೆಲಿಕಾಂ (Airtel) ವಲಯದಲ್ಲಿ ಉತ್ತಮ ಸ್ಥಾನ ಪಡೆದಿದೆ. ಇದು ಜಿಯೋ, ವೊಡಾಫೋನ್‌ ಐಡಿಯಾ ಹಾಗೂ ಬಿಎಸ್‌ಎನ್‌ಎಲ್‌ನೊಂದಿಗೆ (Jio, Vodafone Idea and BSNL) ನೇರವಾಗಿ ಸ್ಪರ್ಧಿಸುತ್ತಾ ಬರುತ್ತಿದ್ದು, ಈ ನಡುವೆ ಏರ್‌ಟೆಲ್‌ ಹೊಸ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದೆ. ಇದರಿಂದಾಗಿ ಗ್ರಾಹಕರು ಅನಿಯಮಿತ 5G ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಹೌದು, ಏರ್‌ಟೆಲ್ ಅನಿಯಮಿತ ಡೇಟಾದೊಂದಿಗೆ 99ರೂ.ಗಳ ಡೇಟಾ ಪ್ಯಾಕ್ (Rs.99 data pack) ಅನ್ನು ಲಾಂಚ್ ಮಾಡಿದೆ. ಈ ಮೂಲಕ ತನ್ನ ಪ್ರಿಪೇಯ್ಡ್ ಪ್ಲ್ಯಾನ್‌ನ ಪೋರ್ಟ್‌ಫೋಲಿಯೊವನ್ನು ವಿಸ್ತರಣೆ ಮಾಡಿಕೊಂಡಿದೆ. ಈ ಡೇಟಾ ಪ್ಯಾಕ್ ಅನ್ನು ಈಗ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ. ಹಾಗಿದ್ರೆ, ಬನ್ನಿ ಈ ಪ್ಲ್ಯಾನ್‌ ಬಳಕೆದಾರರಿಗೆ ಹೇಗೆಲ್ಲಾ ಲಾಭ?, ಮಾನ್ಯತೆ ದಿನಗಳು ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಿ.

Airtel ನಿಂದ ಅನಿಯಮಿತ ಡೇಟಾ ಸೌಲಭ್ಯ ಇರುವ 99 ರೂ.ಗಳ ಪ್ಲ್ಯಾನ್‌ ಲಾಂಚ್‌!

ಏರ್‌ಟೆಲ್‌ನಿಂದ ಹೊಸ 99 ರೂ.ಗಳ ಡೇಟಾ ಪ್ಯಾಕ್: ಏರ್‌ಟೆಲ್‌ ಇದೀಗ ಹೊಸ ಡೇಟಾ ಪ್ಯಾಕ್‌ (Data pack) ಅನ್ನು ಘೋಷಣೆ ಮಾಡಿದ್ದು, ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯವನ್ನು (ARPU) ಹೆಚ್ಚಿಸುವ ಅನ್ವೇಷಣೆ ಹಿನ್ನೆಲೆ ಈ ಪ್ಲ್ಯಾನ್‌ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ. ಈ ಪ್ಲ್ಯಾನ್‌ 1 ದಿನದ ಮಾನ್ಯತೆ ದಿನಗಳನ್ನು ಹೊಂದಿದ್ದು, ಅನಿಯಮಿತ ಡೇಟಾವನ್ನು ನೀಡುತ್ತದೆ.

ಈ ಪ್ಲ್ಯಾನ್‌ನಲ್ಲಿ ನ್ಯಾಯಯುತ ಬಳಕೆಯ ನೀತಿ (FPU) 30GB ಗೆ ನಿರ್ಬಂಧಿಸುವ ಪ್ಲ್ಯಾನ್‌ಗೆ ಅನ್ವಯಿಸಲಿದ್ದು, ಅನಿಯಮಿತ ಡೇಟಾದೊಂದಿಗೆ ವೇಗವು 64Kbps ವೇಗಕ್ಕೆ ಕಡಿಮೆಯಾಗುತ್ತದೆ ಎಂದು ಏರ್‌ಟೆಲ್‌ ಮಾಹಿತಿ ನೀಡಿದೆ. ಈ ಪ್ಲ್ಯಾನ್‌ 1 ದಿನದ ಮಾನ್ಯತೆಯನ್ನು ಹೊಂದಿದ್ದರೂ ಸಹ ಸ್ವತಂತ್ರ ಆಯ್ಕೆಯಾಗಿ ಲಭ್ಯವಿಲ್ಲದ ಕಾರಣ ಬಳಕೆದಾರರು ಸಕ್ರಿಯ ಮೂಲ ಯೋಜನೆಯನ್ನು ಹೊಂದಿರಬೇಕಾಗುತ್ತದೆ.

ಪ್ರಮುಖವಾಗಿ ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ ಏರ್‌ಟೆಲ್ ತನ್ನ ಗ್ರಾಹಕರಿಗೆ ಅನಿಯಮಿತ 5G ಡೇಟಾವನ್ನು ಇದರಲ್ಲಿ ನೀಡುತ್ತಿದೆ. 5G ಸೇವೆಗಳು ಲಭ್ಯವಿರುವ ಮತ್ತು ಡಿವೈಸ್‌ 5G ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಪ್ರದೇಶಗಳಿಗೆ ಇದು ಅನ್ವಯಿಸುತ್ತದೆ. ಈ ಅನಿಯಮಿತ 5G ಡೇಟಾವು ಈಗ 99 ರೂ.ಡೇಟಾ ಪ್ಯಾಕ್‌ನಂತಹ ಯಾವುದೇ ಕ್ಯಾಪಿಂಗ್ ಅನ್ನು ಹೊಂದಿದ್ದು, ನೀವು ಈ 5G ಗೆ ಪ್ರವೇಶವನ್ನು ಹೊಂದಿಲ್ಲದಿದ್ದರೆ, ಅಗತ್ಯವಿದ್ದಾಗ ಹೆಚ್ಚುವರಿ ಡೇಟಾವನ್ನು ಪಡೆಯಲು ಈ ಹೊಸ ಡೇಟಾ ಪ್ಯಾಕ್ ಸೂಕ್ತ.

ಈ ಪ್ಲ್ಯಾನ್‌ನ ಆಸುಪಾಸಿನ ಪ್ಲ್ಯಾನ್‌ಗಳನ್ನು ಗಮನಿಸುವುದಾದರೆ 5G ಡೇಟಾ ಮತ್ತು ಏರ್‌ಟೆಲ್ ವಿಂಕ್ ಮ್ಯೂಸಿಕ್ ಚಂದಾದಾರಿಕೆಯೊಂದಿಗೆ 98 ರೂ.ಗಳ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ 30 ದಿನಗಳವರೆಗೆ ದಿನಕ್ಕೆ 1GB ಡೇಟಾ ಆಯ್ಕೆ ನೀಡುವ 181 ಪ್ಲ್ಯಾನ್‌ ಸಹ ಇದೆ. ಇದು ದೊಡ್ಡ ಮೊತ್ತದ ಬೆಲೆ ಎಂದರೆ ನೀವು 19ರೂ.ಗಳನ್ನು ಪಾವತಿ ಮಾಡುವ ಮೂಲಕ 1 ದಿನಕ್ಕೆ 1GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದು.

ಇದರೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕೆಲವು ಪ್ಲ್ಯಾನ್‌ಗಳ ಕಡೆ ಕಣ್ಣಾಯಿಸುವುದಾದರೆ 2GB ದೈನಂದಿನ ಡೇಟಾವನ್ನು ಬಯಸುವ ಬಳಕೆದಾರರಿಗೆ ಪೂರ್ಣ ಮೌಲ್ಯದ 84 ದಿನಗಳ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಏರ್‌ ಟೆಲ್ ನೀಡುತ್ತದೆ. ಅಂದರೆ ಏರ್‌ಟೆಲ್‌ ಲಿಸ್ಟ್‌ನಲ್ಲಿ ಇರುವ 839ರೂ.ಗಳ ಪ್ಲ್ಯಾನ್‌ ನಿಮಗೆ ನಿತ್ಯವೂ 2GB ಡೇಟಾ ನೀಡಲಿದ್ದು, ಹೆಚ್ಚಿನ ದಿನಗಳ ಮಾನ್ಯತೆಯನ್ನು ಹೊಂದಿದೆ.

ಈ ಯೋಜನೆಯೊಂದಿಗೆ ಅನಿಯಮಿತ ಧ್ವನಿ ಕರೆ ಮತ್ತು ನಿತ್ಯವೂ 100 SMS ಹಾಗೂ ಅನಿಯಮಿತ 5G ಡೇಟಾ, ಅಪೋಲೋ 24|7 ಸರ್ಕಲ್‌, ಉಚಿತ ಹೆಲೋಟ್ಯೂನ್‌, ವಿಂಕ್‌ ಮ್ಯೂಸಿಕ್ಸಕ್ ಮತ್ತು ರಿವಾರ್ಡ್‌ಮಿನಿ ಚಂದಾದಾರಿಕೆಯಂತಹ ಏರ್‌ಟೆಲ್‌ ಥ್ಯಾಂಕ್ಸ್ ಪ್ರಯೋಜನಗಳಿಗೆ ಈ ಪ್ಲ್ಯಾನ್‌ ಅನುವು ಮಾಡಿಕೊಡುತ್ತದೆ. ಇದರ ಹೊರತಾಗಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ 3 ತಿಂಗಳು ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ 84 ದಿನದ ಚಂದಾದಾರಿಕೆ ಲಭ್ಯ.

Airtel ನಿಂದ ಅನಿಯಮಿತ ಡೇಟಾ ಸೌಲಭ್ಯ ಇರುವ 99 ರೂ.ಗಳ ಪ್ಲ್ಯಾನ್‌ ಲಾಂಚ್‌!

ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಏರ್‌ಟೆಲ್‌ನ ಅನಿಯಮಿತ 5G ಡೇಟಾ ಆಫರ್ ಅನ್ನು ಏರ್‌ಟೆಲ್‌ನ 5G ವ್ಯಾಪ್ತಿಯಲ್ಲಿರುವ ಬಳಕೆದಾರರಿಗೆ ನೀಡಲಾಗುತ್ತದೆ. ಬಳಕೆದಾರರು ಮೊದಲು ತಮ್ಮ ಏರ್‌ಟೆಲ್ ಥ್ಯಾಂಕ್ಸ್ ಖಾತೆಗೆ ಹೋಗಿ ನಂತರ ಅನಿಯಮಿತ 5G ಡೇಟಾ ಆಫರ್ ಅನ್ನು ಕ್ಲೈಮ್ ಮಾಡಬೇಕಾಗುತ್ತದೆ. ಅನಿಯಮಿತ 5G ಡೇಟಾ ಪ್ರಯೋಜನವನ್ನು ಪಡೆಯಲು ಅರ್ಹವಾಗಿರುವ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ಪ್ರತಿ ಬಾರಿ ರೀಚಾರ್ಜ್ ಮಾಡಿದಾಗ ಬಳಕೆದಾರರು ಇದನ್ನು ಮಾಡಬೇಕು.

Best Mobiles in India

English summary
Airtel has launched Rs.99 data pack with unlimited data. With this, it has expanded its prepaid plan portfolio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+