ಏರ್‌ಟೆಲ್‌ನ ಈ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೇ ಸಿಗಲಿದೆ 4ಲಕ್ಷದ ಇನ್ಶೂರೆನ್ಸ್!
ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತವೆ. ಇನ್ನು ಕೆಲವೊಮ್ಮೆ ಎಕ್ಸ್‌ಟ್ರಾ ಟಾಕ್‌ಟೈಮ್, ಹೆಚ್ಚುವರಿ ಡಾಟಾ ನಂತಹ ಕೊಡುಗೆಗಳನ್ನು ಘೋಷಿಸುತ್ತವೆ. ದೇಶದಲ್ಲಿ ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳು ಪ್ರೀಪೇಡ್ ಪ್ಲ್ಯಾನ್‌ಗಳ ದರ ಏರಿಕೆ ಮಾಡಿವೆ. ಈ ನಿಟ್ಟಿನಲ್ಲಿ ಚಂದಾದಾರರನ್ನು ಆಕರ್ಷಿಸಲು ಹೆಣಗಾಡುತ್ತಿವೆ. ಆ ಪೈಕಿ ಏರ್‌ಟೆಲ್ ಟೆಲಿಕಾಂ ಸಂಸ್ಥೆಯು ಭಿನ್ನ ಆಫರ್ ನೀಡಲು ಮುಂದಾಗಿದೆ.

ಹೌದು, ಜನಪ್ರಿಯ ಏರ್‌ಟೆಲ್ ಸಂಸ್ಥೆಯು ತನ್ನ ಹೊಸ 379ರೂ. ಪ್ಲ್ಯಾನಿನಲ್ಲಿ ಅದಿಕ ವ್ಯಾಲಿಡಿಟಿ ನೀಡಿದೆ. ಮತ್ತು 279ರೂ. ಪ್ರೀಪೇಡ್ ಪ್ಲ್ಯಾನ್‌ಗಳ ರೀಚಾರ್ಜ್ ನೊಂದಿಗೆ 4ಲಕ್ಷದ ಜೀವವಿಮೆ/ ಇನ್ಶೂರೆನ್ಸ್ ನೀಡುವುದಾಗಿ ಘೋಷಿಸಿದೆ. ಇನ್ನು ಏರ್‌ಟೆಲ್‌ನ ಈ ಎರಡು ಪ್ರೀಪೇಡ್ ಪ್ಲ್ಯಾನ್‌ಗಳು ಉತ್ತಮ ವ್ಯಾಲಿಡಿಟಿ, ಕರೆಗಳ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನ ಪಡೆದಿವೆ. ಈ ಪ್ಲ್ಯಾನ್‌ಗಳು ಎಲ್ಲಾ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿಯೂ ಲಭ್ಯ ಇವೆ. ಈ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ.

4ಲಕ್ಷದ ವಿಮೆ/ಇನ್ಸೂರೆನ್ಸ್
ಏರ್‌ಟೆಲ್‌ನ 279ರೂ. ಪ್ರೀಪೇಡ್ ಪ್ಲ್ಯಾನ್‌ಗಳ ರೀಚಾರ್ಜ್ ಮಾಡಿಕೊಂಡರೇ ಗ್ರಾಹಕರಿಗೆ 4ಲಕ್ಷದ ಟರ್ಮ್ ಜೀವ ವಿಮೆ/ಇನ್ಸೂರೆನ್ಸ್ ಲಭ್ಯವಾಗಲಿದೆ. ಈ ರೀತಿ ಕೊಡುಗೆ ಇದೆ ಮೊದಲೆನಲ್ಲ. ಟೆಲಿಕಾಂ ಬೆಲೆ ಏರಿಕೆಗೂ ಮುಂಚೆಯು ಏರ್‌ಟೆಲ್ ತನ್ನ ಕೆಲವು ಪ್ರೀಪೇಡ್ ಪ್ಲ್ಯಾನ್‌ಗಳಿಗೆ ಉಚಿತ ಜೀವವಿಮೆ ಘೋಷಿಸಿತ್ತು. ಈ್ ಮತ್ತೆ ಅದೇ ರೀತಿ ಆಫರ್ ಹೊರಡಿಸಿದೆ. ಇನ್ನು ಈ ಕೊಡುಗೆಗಾಗಿ ಎಚ್‌ಡಿಎಫ್‌ಸಿ ಲೈಫ್ ಇನ್ಸೂರೆನ್ಸ್ ಜೊತೆಗೂಡಿದೆ.

ಏರ್‌ಟೆಲ್ 279ರೂ. ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 279ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 6GB (4G/3G/2G ) ಡಾಟಾ ಹಾಗೂ 900 ಎಸ್‌ಎಮ್‌ಎಸ್‌ಗಳು ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಜೊತೆಗೆ ಹೆಚ್‌ಡಿಎಫ್‌ಸಿ ಲೈಫ್ ನಿಂದ 4ಲಕ್ಷದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಿಗಲಿದೆ.

ಏರ್‌ಟೆಲ್ 379ರೂ. ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 379ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 6GB (4G/3G/2G ) ಡಾಟಾ ಹಾಗೂ 900 ಎಸ್‌ಎಮ್‌ಎಸ್‌ಗಳು ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಜೊತೆಗೆ ನಾಲ್ಕು ವಾರಗಳ Shaw Academy ಕೋರ್ಸ್ ಸೌಲಭ್ಯ, Wynk ಮ್ಯೂಸಿಕ್ ಏರ್‌ಟೆಲ್ ಆಪ್ ಸೇವೆಗಳು ಸಹ ಲಭ್ಯವಾಗಲಿವೆ.


Click it and Unblock the Notifications








