ಅಮೆಜಾನ್-ಫ್ಲಿಪ್‌ಕಾರ್ಟಿಗೆ ಸೆಡ್ಡು: ಗಣಪತಿ ಹಬ್ಬಕ್ಕೆ ಅಂಬಾನಿಯಿಂದ ಭರ್ಜರಿ ಆಫರ್..!
ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಹುಟ್ಟು ಹಾಕಿರುವ ಹೊಸತನಗಳಿಗೆ ಲೆಕ್ಕವಿಲ್ಲ ಎನ್ನಬಹುದು. ಜಿಯೋ ಮೂಲಕ ಬಳಕೆದಾರರ ವಿಶ್ವಾಸ ಮತ್ತು ನಂಬಿಕೆಯನ್ನುಗಳಿಸಿಕೊಂಡಿರುವ ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ, ಹೊಸದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ. ದೇಶದಲ್ಲಿರುವ ಎಲ್ಲಾ ಮಾದರಿಯ ಮಾರುಕಟ್ಟೆಯಲ್ಲಿ ಪ್ರಭಾವ ಹೊಂದಿರುವ ರಿಲಯನ್ಸ್, ಇ-ಕಾರ್ಮಸ್ ಕಂಪನಿಯೊಂದನ್ನು ಆರಂಭಿಸಲು ಮುಂದಾಗಿದೆ. ಇದಕ್ಕೇ ಜಿಯೋ ದಿಂದಲೇ ಪ್ರಾರಂಭವಾಗುವ ಹೆಸರೊಂದನ್ನು ಇಡಲಿದ್ದಾರೆ ಎನ್ನಲಾಗಿದೆ.

ಓದಿರಿ: ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ: ಐದನೇದು ನೋಡಲೇ ಬೇಡಿ..!
ಜಿಯೋ ಹೆಸರಿನಲ್ಲಿ ಅಂಬಾನಿ ಮುಟ್ಟಿದೆಲ್ಲವೂ ಚಿನ್ನವಾಗುತ್ತಿದೆ. ಈ ಹಿನ್ನಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹಿಡಿತವನ್ನು ಸಾಧಿಸಿರುವ ಅಮೆರಿಕಾದ ಕಂಪನಿಗಳಿಗೆ ಸೆಡ್ಡು ಹೊಡೆದು, ತಮ್ಮದೇ ಆನ್‌ಲೈನ್ ಸ್ಟೋರ್ ವೊಂದನ್ನು ಹುಟ್ಟಿ ಹಾಕಿ, ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವುದರೊಂದಿಗೆ ತಮ್ಮದೇ ಜಿಯೋ ಬ್ರಾಂಡ್ ಅನ್ನು ಮತ್ತಷ್ಟು ಉತ್ತಮ ಪಡಿಸಲು ಮುಂದಾಗಿದ್ದಾರೆ.

ಅಮೆರಿಕಾದ ಪ್ರಭಾವ:
ಸದ್ಯ ಭಾರತೀಯ ಇ ಕಾರ್ಮಸ್ ಮಾರುಕಟ್ಟೆಯಲ್ಲಿ ಅಮೆರಿಕಾದ ಕಂಪನಿಗಳ ಹಿಡಿತವು ಹೆಚ್ಚಾಗಿದೆ. ವಾಲ್‌ಮಾರ್ಟ್ ಫ್ಲಿಪ್‌ಕಾರ್ಟ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದೇ ಮಾದರಿಯಲ್ಲಿ ಅಮೆಜಾನ್ ಸಹ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಈ ಎರಡು ಕಂಪನಿಗಳ ಅಮೆರಿಕಾದವು. ಈ ಹಿನ್ನಲೆಯಲ್ಲಿ ಜಿಯೋದಿಂದಾಗಿ ಭಾರತದ್ದೇ ಬ್ರಾಂಡ್ ನಿರ್ಮಾಣವಾಗಲಿದೆ.

ಸೆಡ್ಡು:
ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಹಿಡಿತವು ಹೆಚ್ಚಾಗಿದೆ. ಬೇರೆ ಎಲ್ಲಾ ಇ ಕಾರ್ಮಸ್ ಕಂಪನಿಗಳಿಗಿಂತಲೂ ಹೆಚ್ಚಿನ ಸೇಲ್ ಮತ್ತು ಆಫರ್ ಗಳನ್ನು ಬಳಕೆದಾರರಿಗೆ ಈ ಎರಡು ಕಂಪನಿಗಳು ನೀಡುತ್ತಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇವುಗಳಿಗೆ ಸೆಡ್ಡು ಹೊಡೆಯಲು ಅಂಬಾನಿ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಶೀಘ್ರವೇ ಆರಂಭ:
ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಹಲವು ಸ್ತರಗಳಲ್ಲಿ ನಾವು ರಿಲಯನ್ಸ್ ಪ್ರಭಾವನ್ನು ನೋಡಬಹುದು. ಈ ಹಿನ್ನಲೆಯಲ್ಲಿ ಇ ಕಾಮರ್ಸ್ ಮಾರುಕಟ್ಟೆಯಲ್ಲಿಯೂ ಅದೃಷ್ಠ ಪರೀಕ್ಷೆಗೆ ನಿಂತಿರುವ ಅಂಬಾನಿ, ಶೀಘ್ರವೇ ತಮ್ಮ ಕನಸಿನ ಪ್ರಾಜೆಕ್ಟ್‌ಗೆ ಜೀವನ್ನು ತುಂಬಲಿದ್ದಾರೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್- ಎಲೆಕ್ಟ್ರಾನಿಕ್ಸ್:
ಸದ್ಯ ಆನ್‌ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು ಮಾರಾಟವಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಮೊದಲಿಗೆ ರಿಲಯನ್ಸ್ ಸ್ಮಾರ್ಟ್‌ಫೋನ್- ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಹೆಚ್ಚಿನ ಗಮನವನ್ನು ನೀಡಲಿದೆ. ಇದಾದ ಮೇಲೆ ಹಂತ ಹಂತವಾಗಿ ಎಲ್ಲಾ ವಿಭಾಗವನ್ನು ಆರಂಭಿಸಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್:
ಜಿಯೋ ಆನ್‌ಲೈನ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಭರ್ಜರಿ ಆಫರ್ ಅನ್ನು ಆರಂಭದಲ್ಲಿ ನೀಡಲಿದೆ. ಅಲ್ಲದೇ ಎಕ್ಸ್‌ಕ್ಲೂಸಿವ್ ಆಗಿ ವಿವಿಧ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಲಿದೆ ಎನ್ನುವ ಮಾಹಿತಿ ಲೀಕ್ ಆಗಿದೆ. ಶೀಘ್ರವೇ ಹಬ್ಬಗಳು ಶುರುವಾಗುವ ಹಿನ್ನಲೆಯಲ್ಲಿ ಅಂಬಾನಿ ದೊಡ್ಡ ಮಟ್ಟದಲ್ಲಿಯೇ ಇ ಕಾರ್ಮಸ್ ಸಂಸ್ಥೆಯನ್ನು ಆರಂಭಿಸಿಲಿದ್ದಾರೆ ಎನ್ನುವ ಸುದ್ದಿ ಇದೆ.

'ಜಿಯೋ ಫೋನ್' ಜೊತೆಗೆ ಇತಿಹಾಸದಲ್ಲಿಯೇ ಕಾಣದ ಬಿಗ್ ಆಫರ್ ಪ್ರಕಟಿಸಿತು ಜಿಯೋ!!
ಹಳೆಯ ಯಾವುದೇ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್‌ಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿರುವ ಜಿಯೋ ಇದೀಗ ಮತ್ತೊಂದು ಬಂಪರ್ ಕೊಡುಗೆಯನ್ನು ಘೋಷಿಸಿದೆ. ನಾಳೆಯಿಂದ ಆರಂಭವಾಗುತ್ತಿರುವ ಜಿಯೋ ಎಕ್ಸ್‌ಚೇಂಜ್ ಮೇಳದಲ್ಲಿ, ಪ್ರಸ್ತುತ ಬಳಕೆ ಮಾಡುತ್ತಿರುವ ಹಳೆಯ ಫೋನ್ ನೀಡಿ ಭರಪೂರ ಕೊಡುಗೆಗಳನ್ನು ಪಡೆಯಬಹುದಾಗಿದೆ.
ಜಿಯೋ ಇಂದು ಪ್ರಕಟಿಸಿರುವಂತೆ, ಹಳೆಯ ಜಿಯೋ ಪೋನ್‌ಗೂ ಮತ್ತು ನೂತನ ಜಿಯೋ ಪೋನಿಗೂ ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ, ಈ ಎಕ್ಸ್‌ಚೇಂಜ್ ಮೇಳ ಕೇವಲ ಇತರೆ ಫೀಚರ್‌ಪೋನ್‌ಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ. ಇದರಿಂದ ಈ ವರೆಗೂ ಇದ್ದ ಗೊಂದಲ ಪರಿಹಾರವಾಗಿದ್ದು, ಹಳೆ ಜಿಯೋ ಪೋನ್ ಬಳಕೆದಾರರಿಗೆ ಈಗ ಸ್ಪಷ್ಟ ಉತ್ತರ ಸಿಕ್ಕಿದೆ.
ಇನ್ನು ಹಳೆಯ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್ ಪಡೆದವರಿಗಾಗಿ ಜಿಯೋ ಮತ್ತೊಂದು ಇತಿಹಾಸದಲ್ಲಿಯೇ ಯಾರೂ ನೀಡದ ಆಫರ್ ಅನ್ನು ಘೋಷಿಸಿದೆ. ಕೇವಲ 99 ರೂಪಾಯಿಗಳಿಗೆ ಪ್ರತಿತಿಂಗಳ ಸೇವೆಯನ್ನು ಹೆಚ್ಚು ಡೇಟಾದ ಜೊತೆಗೆ ಪಡೆಯಬಹುದಾಗಿದೆ. ಹಾಗಾಗಿ, ಜಿಯೋ ಫೋನ್ ಎಕ್ಸ್‌ಚೇಂಜ್ ಬಗೆಗಿನ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ಜಿಯೋ ಪೋನ್ ಗೊಂದಲ ಪರಿಹಾರ!
ಈ ವರೆಗೂ ಹುಟ್ಟಿಕೊಂಡಿದ್ದ ಗೊಂದಲಕ್ಕೆ ಜಿಯೋ ಸ್ಪಷ್ಟ ಉತ್ತರ ನೀಡಿದೆ. ಹಳೆಯ ಜಿಯೋ ಪೋನ್‌ಗೂ ಮತ್ತು ನೂತನ ಜಿಯೋ ಪೋನಿಗೂ ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ, ಈ ಎಕ್ಸ್‌ಚೇಂಜ್ ಮೇಳ ಕೇವಲ ಇತರೆ ಫೀಚರ್‌ಪೋನ್‌ಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ. ಹಳೆ ಜಿಯೋ ಪೋನ್ ಬಳಕೆದಾರರಿಗೆ ಈ ಎಕ್ಸ್‌ಚೇಂಜ್ ಆಫರ್‌ಗೂ ಸಂಬಂಧವಿಲ್ಲ.!

ಜುಲೈ 21 ರಿಂದ ಚಾಲನೆ!
ಜುಲೈ 21 ರಿಂದ. ಅಂದರೆ, ನಾಳೆಯಿಂದ ಜಿಯೋ ಫೋನ್ ಎಕ್ಸ್‌ಚೇಂಜ್ ಆಫರ್‌ಗೆ ಚಾಲನೆ ಸಿಗುತ್ತಿದೆ. ದೇಶದಲ್ಲಿನ ಎಲ್ಲಾ ಜಿಯೋ ಸ್ಟೋರ್‌ಗಳಲ್ಲಿಯೂ ಸಹ ಜಿಯೋ ಫೋನ್ ಅನ್ನು ಹಳೆಯ ಫೀಚರ್ ಫೋನಿಗೆ ಬದಲಾಗಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದ್ದು, ಹಳೆಯ ಫೋನ್ ನೀಡಿ ಹೊಸ ಫೋನ್ ಪಡೆದುಕೊಳ್ಳಲು ಕೇವಲ 501 ರೂಪಾಯಿಗಳನ್ನು ಪಾವತಿಸಬೇಕಿದೆ.

ಈ ಫೋನ್ ಕೂಡ ಉಚಿತ!
ಹಳೆಯ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್ ಪಡೆಯುವಾಗ ಪಾವತಿಸುವ ಹಣವನ್ನು ಜಿಯೋ ಮತ್ತೆ ವಾಪಸ್ ಮಾಡುವುದಾಗಿ ತಿಳಿಸಿದೆ. ಈಗ ಪಾವತಿಸಿದ 501 ರೂಪಾಯಿಗಳನ್ನು ಡೆಪಾಸಿಟ್ ಎಂದು ಪರಿಗಣಿಸಲಾಗಿದ್ದು, ಮೂರು ವರ್ಷಗಳ ನಂತರ ಮತ್ತೆ 501 ರೂಪಾಯಿ ಹಣವನ್ನು ವಾಪಸ್ ನೀಡುವುದಾಗಿ ಜಿಯೋ ತಿಳಿಸಿದೆ.

ಕೆಳಗಿನ ಷರತ್ತುಗಳನ್ನು ಪೂರೈಸಬೇಕಿದೆ.
ಹೊಸ ಜಿಯೋ ಫೋನ್‌ಗೆ ನಿಮ್ಮ ಹಳೆಯ ಫೋನ್ ಅನ್ನು ಬದಲಾಯಸಲು ಈ ಷರತ್ತುಗಳನ್ನು ಪೂರೈಸಬೇಕಿದೆ. ನಿಮ್ಮ ಹಳೆಯ ಮೊಬೈಲ್ ಫೋನ್ ಕೆಲಸ ಮಾಡುತ್ತಿರಬೇಕು. ಕಳೆದ 3.5 ವರ್ಷಗಳ (2015) ಒಳಗೆ ಖರೀದಿಸಿದ ಮೊಬೈಲ್ ಆಗಿರಬೇಕು, ಅದು ಯಾವುದೇ 2ಜಿ, 3ಜಿ, 4ಜಿ (ನಾನ್-ವೋಲ್ಟ್) ಸಾಧನಗಳನ್ನು ವಿನಿಮಯಕ್ಕಾಗಿ ಒಪ್ಪಿಕೊಳ್ಳಲಾಗುತ್ತದೆ.

ವಿನಿಮಯ ಮಾಡಿಕೊಳ್ಳಲು ನೆನಪಿಡಿ!
ಹಳೆಯ ಫೀಚರ್ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ಹೋಗುವ ಮುನ್ನ ನೀವು ಈ ಅಂಶಗಳನ್ನು ನೆನಪಿನಲ್ಲಿ ಇಡಬೇಕಾಗುತ್ತದೆ. ಹಳೆಯ ಮೊಬೈಲ್ ಫೋನ್ ಕೆಲಸ ಮಾಡುತ್ತಿರಬೇಕು. ಹಳೆಯ ಫೋನ್ ಬ್ಯಾಟರಿ ಮತ್ತು ಚಾರ್ಜರ್ ಹೊಂದಿರಬೇಕು. MNP(ಮೊಬೈಲ್ ನಂಬರ್ ಪೋರ್ಟಬಲಿಟಿ)ಗೆ ಬದಲಾಗಲು ಹೊಸ MNP JIO ಸಂಖ್ಯೆಯಮನ್ನು ಹೊಂದಿರಬೇಕು.

ಎಕ್ಸ್‌ಚೇಂಜ್ ನಂತರ ಮುಂದೇನು?
ನಿಮ್ಮ ಹಳೆಯ ಫೋನ್ ಅನ್ನು ಹೊಸ ಜಿಯೋ ಫೋನ್‌ಗೆ ಬದಲಾಯಿಸಿಕೊಂಡ ನಂತರ, ನಿಮಗೆ ಜಿಯೋ ಸ್ಟೋರ್‌ನಲ್ಲಿ ಹೊಸ ಸಿಮ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಹಳೆ ನಂಬರ್ ಅನ್ನು ನೀವು ಉಳಿಸಿಕೊಳ್ಳಲು ಬಯಸಿದರೆ, ನಿಮ್ಮ ಹಳೆಯ ನಂಬರ್ ಅನ್ನೇ ಜಿಯೋಗೆ ಪೋರ್ಟ್ ಮಾಡಲಾಗುತ್ತದೆ ಎಂದು ಜಿಯೋ ಪ್ರಕಟಣೆಯಲ್ಲಿ ತಿಳಿಸಿದೆ.

ಏನೆಲ್ಲಾ ಆಫರ್‌ಗಳು ಲಭ್ಯ?
ಹಳೆಯ ಫೋನ್ ಅನ್ನು ಹೊಸ ಜಿಯೋ ಫೋನ್‌ಗೆ ಬದಲಾಯಿಸಿಕೊಂಡವರಿಗೆ, ಮಾನ್ಸೂನ್ ಆಫರ್ ಅಂಗವಾಗಿ ಜಿಯೋ ಹೊಸದಾಗಿ ಎರಡು ಆಫರ್‌ಗಳನ್ನು ನೀಡಿದೆ.! ಜಿಯೋ 594 ರೂಪಾಯಿಗಳ ಆಫರ್ ಅಥವಾ ಜಿಯೋ 99 ರೂಪಾಯಿಗಳ ಆಫರ್‌ಗಳು ಕ್ರಮವಾಗಿ, ಒಂದು ತಿಂಗಳು ಮತ್ತು ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿವೆ.

ಜಿಯೋ 594 ರೂ. ಆಫರ್!
ಎಕ್ಸ್‌ಚೇಂಜ್ ಜಿಯೋ ಫೋನ್ ಖರೀದಿಸಿದವರಿಗೆ ಜಿಯೋ 594 ರೂಪಾಯಿಗಳಿಗೆ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ಅನ್ನು ನೀಡಿದೆ. ಒಮ್ಮೆ 594 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಂಡರೆ, ಆರು ತಿಂಗಳು ಅನ್‌ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಒಟ್ಟಾರೆ 90GB ಹೈಸ್ಪೀಡ್ ಡೇಟಾವನ್ನು ಒಳಗೊಂಡಿದೆ.

ಜಿಯೋ 99 ರೂ. ಆಫರ್!
ಎಕ್ಸ್‌ಚೇಂಜ್ ಜಿಯೋ ಫೋನ್ ಖರೀದಿಸಿದವರಿಗೆ ಜಿಯೋ ನೀಡಿರುವ ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಇದಾಗಿದೆ. 99 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ ಒಂದು ತಿಂಗಳು ಅನ್‌ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 0.5GB ಸ್ಪೀಡ್ ಡೇಟಾ ದೊರೆಯಲಿದೆ.

ಆಗಸ್ಟ್ 15 ಕ್ಕೆ ಅಪ್‌ಡೇಟ್!!
ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ಗಳನ್ನು ಸಹ ಈಗ ಜಿಯೋ ಫೋನಿನಲ್ಲಿ ಬಳಸಬಹುದಾಗಿದ್ದು, ಆಗಸ್ಟ್ 15 ಕ್ಕೆ ಜಿಯೋ ಫೋನ್ ಅಪ್‌ಡೇಟ್ ಆಗಲಿದೆ ಎಂದು ಜಿಯೋ ತಿಳಿಸಿದೆ. ಹಳೆಯ ಮತ್ತು ಈಗ ನೀಡಿರುವ ಎಲ್ಲಾ ಫೋನ್‌ಗಳಲ್ಲಿಯೂ ಹೊಸ ಅಪ್‌ಡೇಟ್ ಸಿಗಲಿದೆ ಎಂದು ಜಿಯೋ ಸ್ಪಷ್ಟಪಡಿಸಿದೆ.


Click it and Unblock the Notifications








