Airtel: ಏರ್‌ಟೆಲ್‌ನ ಹೊಸ 179ರೂ. ಪ್ಲ್ಯಾನಿನಲ್ಲಿ ಸಿಗುತ್ತೆ ಡಬಲ್ ಲಾಭ!
ದೇಶದ ಟೆಲಿಕಾಂ ವಲಯದಲ್ಲಿ ಮೊದಲಿನಿಂದಲೂ ಭಾರಿ ಜನಪ್ರಿಯ ಪ್ಲ್ಯಾನ್‌ಗಳನ್ನು ನೀಡುತ್ತಾ ಸಾಗಿರುವ ಏರ್‌ಟೆಲ್, ಈಗ ಮತ್ತೊಂದು ಭರ್ಜರಿ ಕೊಡುಗೆ ನೀಡಿದೆ. ಇತ್ತೀಚಿಗೆ ಪ್ರೀಪೇಡ್ ಪ್ಲ್ಯಾನ್‌ಗಳ ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಗ್ರಾಹಕರಿಗೆ ಆಕರ್ಷಕ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಂಸ್ಥೆಯು ಮುನ್ನಡೆದಿದ್ದು, ಇದೀಗ ಅಗ್ಗದ ಪ್ರೀಪೇಡ್ ಪ್ಲ್ಯಾನ್ ಒಂದನ್ನು ಪರಿಚಯಿಸಿದೆ. ಈ ಹೊಸ ಪ್ಲ್ಯಾನ್ ಗ್ರಾಹಕರಿಗೆ ಡಬಲ್ ಧಮಾಕಾ ಒದಗಿಸಲಿದೆ.

ಹೌದು, ಏರ್‌ಟೆಲ್ ಟೆಲಿಕಾಂ ಹೊಸದಾಗಿ 179ರೂ. ಪ್ರೀಪೇಡ್ ಪ್ಲ್ಯಾನ್ ಘೋಷಿಣೆ ಮಾಡಿದೆ. ಈ ಪ್ರೀಪೇಡ್ ಪ್ಲ್ಯಾನ್ ವ್ಯಾಲಿಡಿಟಿ, ಡಾಟಾ ಮತ್ತು ಕರೆಯ ಪ್ರಯೋಜನಗಳನ್ನು ಹೊಂದಿದ್ದು, ಇದರೊಂದಿಗೆ 2 ಲಕ್ಷದ ಇನ್ಶೂರೆನ್ಸ್ ಸೌಲಭ್ಯವನ್ನು ಒಳಗೊಂಡಿದೆ. ಈಗಾಗಲೇ ಏರ್‌ಟೆಲ್ ತನ್ನ ಕೆಲವು ಪ್ರೀಪೇಡ್ ಪ್ಲ್ಯಾನ್‌ಗಳಿಗೆ ಇನ್ಶೂರೆನ್ಸ್ ಪ್ರಯೋಜನೆ ಒದಗಿಸಿದ್ದು, ಆ ಪೈಕಿ ಈ ಫ್ಲ್ಯಾನ್ ಸಹ ಸೇರಿಕೊಂಡಿದೆ. ಹಾಗಾದರೆ ಏರ್‌ಟೆಲ್‌ನ 179ರೂ ಪ್ಲ್ಯಾನ್ ಪ್ರಯೋಜನಗಳೆನು ಹಾಗೂ ಇನ್ಶೂರೆನ್ಸ್ ಪ್ರಯೋಜನ ಪಡೆದ ಇತರೆ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 179ರೂ. ಪ್ಲ್ಯಾನ್
ಏರ್‌ಟೆಲ್‌ನ ನೂತನ 179ರೂ. ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಭಾರತದಾದ್ಯಂತ ಅನಿಯಮಿತ ಕರೆಗಳ ಸೌಲಭ್ಯ ಇದೆ. ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್ಎಮ್ಎಸ್ ಹಾಗೂ 2GB ಡಾಟಾ 4G/3G/2G ಪ್ರಯೋಜನವನ್ನು ಒಳಗೊಂಡಿದೆ. ಇದರೊಂದಿಗೆ ಭಾರ್ತಿ ಆಕ್ಸಾ ಲೈಫ್ ಇನ್ಶೂರೆನ್ಸ್‌ನಿಂದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಹ ಪಡೆದಿದೆ.

ಏರ್‌ಟೆಲ್ 279ರೂ. ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 279ರೂ. ಪ್ಲ್ಯಾನ್ ಸಹ ಲೈಫ್ ಇನ್ಶೂರೆನ್ಸ್ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 6GB (4G/3G/2G ) ಡಾಟಾ ಹಾಗೂ 900 ಎಸ್‌ಎಮ್‌ಎಸ್‌ಗಳು ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಇದರೊಂದಿಗೆ 4ಲಕ್ಷದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಿಗಲಿದೆ.

ಈ ಪ್ಲ್ಯಾನ್ ಸೂಕ್ತವೇ?
ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ, ಗ್ರಾಮೀಣ ಪ್ರದೇಶದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅನುಕೂಲವಾಗಲಿದೆ ಎಂದು ಏರ್‌ಟೆಲ್ ಹೇಳಿದೆ. ರೀಚಾರ್ಜ್‌ನೊಂದಿಗೆ ಟರ್ಮ್ ಇನ್ಶೂರೆನ್ಸ್ ಮಾಡಬಯಸುವ, ಹೆಚ್ಚು ಡಾಟಾ ಬಯಸದ ಮತ್ತು ಅಧಿಕ ವ್ಯಾಲಿಡಿಟಿ ನಿರೀಕ್ಷಿಸಿದ ಗ್ರಾಹಕರಿಗೆ ಈ ಪ್ಲ್ಯಾನ್ ಸೂಕ್ತ ಅನಿಸಲಿದೆ.


Click it and Unblock the Notifications








