Home
ಸುದ್ದಿಜಾಲ

ಏರ್‌ಟೆಲ್‌ನಿಂದ ಮತ್ತೆ ಎರಡು ಹೊಸ ಪ್ಲ್ಯಾನ್‌!..ನೇರವಾಗಿ ಜಿಯೋಗೆ ಟಾಂಗ್‌!

ಭಾರತೀಯ ಟೆಲಿಕಾಂ ವಲಯದಲ್ಲಿ ಲೀಡಿಂಗ್ ನಲ್ಲಿರುವ ಜಿಯೋಗೆ ನೇರ ಪೈಪೋಟಿ ನೀಡುತ್ತಿರುವ ಟೆಲಿಕಾಂ ಅಂದರೇ ಅದು ಭಾರ್ತಿ ಏರ್‌ಟೆಲ್‌ ಆಗಿದೆ. ಏರ್‌ಟೆಲ್‌ ಸಂಸ್ಥೆಯು ತನ್ನ ಚಂದಾದಾರರಿಗೆ ಈಗಾಗಲೆ ಹಲವು ಉಚಿತ ಕರೆ ಹಾಗೂ ಅಧಿಕ ಡೇಟಾ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿದೆ. ಹಾಗೆಯೇ ಕೆಲವೊಂದು ಪ್ರೀಪೇಯ್ಡ್ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿ ಓಟಿಟಿ ಪ್ರಯೋಜನ ಒದಗಿಸಿದೆ. ಅದೇ ರೀತಿ ಇದೀಗ ಜಿಯೋ ಟೆಲಿಕಾಂಗೆ ಟಾಂಗ್ ನೀಡಲು, ಮತ್ತೆ ಎರಡು ಹೊಸ ಯೋಜನೆಗಳನ್ನು ಪರಿಚಯಿಸಿದೆ.

ಯೋಜನೆಗಳನ್ನು

ಹೌದು, ಏರ್‌ಟೆಲ್ ಟೆಲಿಕಾಂ ನೂತನವಾಗಿ ಏರ್‌ಟೆಲ್‌ 519ರೂ. ಮತ್ತು ಏರ್‌ಟೆಲ್‌ 779ರೂ. ಪ್ರಿಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಒಳಗೊಂಡಿದೆ. ಹಾಗೆಯೇ ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಸಹ ಪಡೆದಿದ್ದು, ದೈನಂದಿನ ಡೇಟಾ ಸೌಲಭ್ಯ ಸಹ ಪಡೆದಿದೆ. ಹಾಗೆಯೇ ಹೆಚ್ಚುವರಿಯಾಗಿ ಓಟಿಟಿ ಹಾಗೂ ಏರ್‌ಟೆಲ್‌ ಸಂಸ್ಥೆಯ ಆಪ್‌ಗಳ ಪ್ರಯೋಜನ ಸಹ ಲಭ್ಯ ಆಗಲಿದೆ. ಹಾಗಾದರೆ ಏರ್‌ಟೆಲ್‌ 519ರೂ. ಮತ್ತು ಏರ್‌ಟೆಲ್‌ 779ರೂ. ಪ್ರಿಪೇಯ್ಡ್‌ ಯೋಜನೆಯ ಇತರೆ ಪ್ರಯೋಜನಗಳ ಹಾಗೂ ಇತರೆ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ನ 519ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ನ 519ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ ನೂತನ 519ರೂ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 60 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 135 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್‌ಟೆಲ್‌ ಆಪ್‌ಗಳ ಸೌಲಭ್ಯ ದೊರೆಯುತ್ತದೆ.

ಏರ್‌ಟೆಲ್‌ನ 779ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ನ 779ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ ನೂತನ 779ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 90 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್‌ಟೆಲ್‌ ಆಪ್‌ಗಳ ಸೌಲಭ್ಯ ದೊರೆಯುತ್ತದೆ.

ಏರ್‌ಟೆಲ್‌ 399 ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 399 ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 399 ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2.5 GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಜನಪ್ರಿಯ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಮೂರು ತಿಂಗಳ ಚಂದಾದಾರಿಕೆ ಸಿಗಲಿದ್ದು, ಏರ್‌ಟೆಲ್‌ನ Wynk Music ಸೇವೆ ಸಹ ದೊರೆಯುತ್ತದೆ. ಇದರೊಂದಿಗೆ ಹೆಲೊಟೂನ್ಸ್ ಮತ್ತು 100 ರೂ. ಫಾಸ್ಟ್‌ಟ್ಯಾಗ್ ಕ್ಯಾಶ್ ಬ್ಯಾಕ್ ಸಹ ಸಿಗಲಿದೆ.

ಏರ್‌ಟೆಲ್‌ 839 ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 839 ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 839 ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2 GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್‌ ಅಮೆಜಾನ್‌ ಪ್ರೈಮ್‌ನ ಒಂದು ತಿಂಗಳ ಚಂದಾದಾರಿಕೆ ಸಿಗಲಿದ್ದು, ಏರ್‌ಟೆಲ್‌ನ Wynk Music ಸೇವೆ ಸಹ ದೊರೆಯುತ್ತದೆ.

Best Mobiles in India

English summary
Airtel Launches Rs 519 and Rs 779 Prepaid Recharge Plans with Up to 90 Days Validity Benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+