Subscribe to Gizbot

ಏರ್‌ಟೆಲ್‌ನಿಂದ ವಿಶೇಷ 'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು ಲಾಂಚ್‌

Written By:

ತಮಿಳು ಭಾಷೆಯ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಯಾವುದು ಅಂತ ಕೇಳಿದ್ರೆ ಎಲ್ಲರೂ ಸಿನಿಮಾ ಹೆಸರಿಗಿಂತ ಚೆನ್ನಾಗಿ 'ಕಬಾಲಿಡಾ' ಎಂದೇ ಹೇಳುತ್ತಾರೆ. ಅಂದಹಾಗೆ 'ಪ. ರಂಜಿತ್‌' ರವರು ಆಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಇದೇ ತಿಂಗಳ (ಜುಲೈ 22) ರಂದು ಬಿಡುಗಡೆಯಾಗುತ್ತಿದ್ದು ಪ್ರಚಾರ ಆಂದೋಲನ ಹೆಚ್ಚಾಗೆ ನಡೆಯುತ್ತಿದೆ.

ವಿಶೇಷ ಅಂದ್ರೆ 'ಕಬಾಲಿ' ಜೊತೆಗೆ ಏರ್‌ಟೆಲ್‌ ಟೈಯಪ್‌ ಮಾಡಿಕೊಂಡಿದ್ದು, ತನ್ನ ಬಳಕೆದಾರರಿಗೆ ವಿಶೇಷ ಪ್ರಾಡಕ್ಟ್‌ ಮತ್ತು ಸೇವೆಗಳನ್ನು ಆಫರ್‌ ಮಾಡುತ್ತಿದೆ. ಈ ಬಗ್ಗೆ ವಿಶೇಷ ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳಲ್ಲಿನ ಮಾಹಿತಿ ಓದಿರಿ.

ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತಿ ಏರ್‌ಟೆಲ್‌

ಭಾರತಿ ಏರ್‌ಟೆಲ್‌

ಭಾರತಿ ಏರ್‌ಟೆಲ್‌ ಮಂಗಳವಾರ (ಜುಲೈ 13) 'ಕಬಾಲಿ' ಎಕ್ಸ್‌ ಕ್ಲೂಸಿವ್‌ ಪ್ರಾಡಕ್ಟ್‌ ಮತ್ತು ಸೇವೆಗಳ ಲಾಂಚ್‌ ಬಗ್ಗೆ ಪ್ರಕಟಿಸಿದೆ.

 'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು

'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು

ಏರ್‌ಟೆಲ್‌ನ ಕಬಾಲಿ ಪ್ರಾಡಕ್ಟ್ ಮತ್ತು ಸೇವೆಗಳಲ್ಲಿ 'ಕಬಾಲಿ' ವಿಶೇಷ ರಿಚಾರ್ಜ್‌ ಪ್ಯಾಕ್ಸ್‌ ಜೊತೆಗೆ ಅನ್‌ಲಿಮಿಟೆಡ್‌ 2G ಇಂಟೆರ್ನೆಟ್, 'ಕಬಾಲಿ' ಹೆಲೋ ಟ್ಯೂನ್ಸ್‌ ಮತ್ತು 'ಕಬಾಲಿ' ಬ್ರ್ಯಾಂಡೆಡ್‌ ಸಿಮ್‌ ಪ್ಯಾಕ್ಸ್‌ಗಳು ಇರಲಿವೆ.

ಏರ್‌ಟೆಲ್‌ ಬಳಕೆದಾರರು

ಏರ್‌ಟೆಲ್‌ ಬಳಕೆದಾರರು

ವಿಶೇಷವಾಗಿ ಎಸ್‌ಎಂಎಸ್‌ ಮೂಲಕ ಏರ್‌ಟೆಲ್‌ ಬಳಕೆದಾರರು ಜುಲೈ 22 ರಂದು ರಿಲೀಸ್‌ ಆಗಲಿರುವ 'ಕಬಾಲಿ' ಸಿನಿಮಾ ಪ್ರಯುಕ್ತ ಸೂಪರ್‌ಸ್ಟಾರ್‌ ರಜಿನಿಕಾಂತ್'ರವರಿಗೆ ಶುಭ ಕೋರಬಹುದು. ಮೇಸೇಜ್‌ ಸ್ವೀಕಾರದ ವಿಶೇಷತೆ ಏನು ಮುಂದಿನ ಸ್ಲೈಡರ್‌ನಲ್ಲಿ ತಿಳಿಯಿರಿ.

ವಿಶೇಷ ಎಸ್‌ಎಂಎಸ್‌ಗಳು

ವಿಶೇಷ ಎಸ್‌ಎಂಎಸ್‌ಗಳು

ಏರ್‌ಟೆಲ್‌ ಬಳಕೆದಾರರು ಸೆಂಡ್‌ ಮಾಡುವ ವಿಶೇಷ ಎಸ್‌ಎಂಎಸ್‌ಗಳು ಹೆಸರುಗಳ ಸಹಿತ ಒಟ್ಟಿಗೆ ಕಾಫಿ ಟೇಬಲ್‌ ಬುಕ್‌ನಲ್ಲಿ ಸಂಗ್ರಹಿಸವಾಗುತ್ತವೆ ಮತ್ತು ಸೂಪರ್‌ಸ್ಟಾರ್‌ಗೆ ಚಿರಸ್ಮರಣೀಯ ನೆನಪಾಗಿ ಪ್ರಸ್ತುತಪಡಿಸಲಾಗುತ್ತದೆ.

ಬಹುನಿರೀಕ್ಷಿತ ಸಿನಿಮಾ

ಬಹುನಿರೀಕ್ಷಿತ ಸಿನಿಮಾ

ಈ ವರ್ಷದ (2016) ಬಹುನಿರೀಕ್ಷಿತ ತಮಿಳು ಸಿನಿಮಾ 'ಕಬಾಲಿ' ಯೊಂದಿಗೆ ತಮ್ಮ ಪ್ರಾಡಕ್ಟ್‌ಗಳನ್ನು ನೀಡಲು ಹೆಚ್ಚು ಸಂತೋಷದಾಯಕವಾಗಿದ್ದೇವೆ. 'ಕಬಾಲಿ'ಯೊಂದಿಗೆ ತಮ್ಮ ವಿಶೇಷ ಪ್ರಾಡಕ್ಟ್‌ ಮತ್ತು ಸೇವೆಗಳನ್ನು ನೀಡಿ ರಜಿನಿ ಅಭಿಮಾನಿಗಳಿಗೆ ಏರ್‌ಟೆಲ್‌ ಉತ್ತಮ ಬಳಕೆಯ ಅನುಭವವನ್ನು ನಿರೀಕ್ಷಿಸಿರುವುದಾಗಿ 'ಕೇರಳ ಮತ್ತು ತಮಿಳು ನಾಡು' ಭಾಗದ ಭಾರತಿ ಏರ್‌ಟೆಲ್‌ ಸಿಇಓ 'ಜಾರ್ಜ್‌ ಮಥೆನ್' ಹೇಳಿದ್ದಾರೆ.

ವಿಶ್‌ ರಜಿನಿ

ವಿಶ್‌ ರಜಿನಿ

'ವಿಶ್‌ ರಜಿನಿ' ಆಂದೋಲನ ಕಾರ್ಯಕ್ರಮವು ವಿಶಾಲ ಫಾರ್ಮ್ಯಾಟ್‌ 'ಕಬಾಲಿ' ಫಲಕಗಳ ಮೂಲಕ ವ್ಯಾಪಕ ಪ್ರಚಾರವನ್ನು ತಮಿಳು ನಾಡು ರಾಜ್ಯ ಮತ್ತು ರೇಡಿಯೋಗಳಲ್ಲಿ ಪಡೆಯಲಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಏರ್‌ಟೆಲ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಏರ್‌ಟೆಲ್ ಉಚಿತ 3ಜಿಯನ್ನು ಬಳಸುವುದು ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Airtel launches special 'Kabali' products and services. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot