ಕರ್ನಾಟಕದಲ್ಲಿ 4G VoLET ಸೇವೆ ಆರಂಭಿಸಿದ ಏರ್‌ಟೆಲ್: ಆರಂಭಿಕ ಕೊಡುಗೆ ..?

|

ಜಿಯೋ ವಿರುದ್ದ ತೊಡೆ ತಟ್ಟಿರುವ ಟೆಲಿಕಾಂ ದೈತ್ಯ ಕಂಪನಿ ಭಾರ್ತಿ ಏರ್‌ಟೆಲ್ ಈಗಾಗಲೇ ದೇಶದಲ್ಲಿ 4G VoLTE ಸೇವೆಯನ್ನು ಆರಂಭಿಸಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ 4G VoLTE ಸೇವೆಯನ್ನು ಪ್ರಾರಂಭಿಸಲು ಮುಂದಾಗಿದೆ. ಈ ಮೂಲಕ ನಮ್ಮ ರಾಜ್ಯದಲ್ಲಿನ ಏರ್‌ಟೆಲ್‌ ಗ್ರಾಹಕರಿಗೆ ಅತೀ ವೇಗದ ಇಂಟರ್ನೆಟ್ ಮತ್ತು HD ವಾಯ್ಸ್ ಕಾಲ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಕರ್ನಾಟಕದಲ್ಲಿ 4G VoLET ಸೇವೆ ಆರಂಭಿಸಿದ ಏರ್‌ಟೆಲ್: ಆರಂಭಿಕ ಕೊಡುಗೆ ..?

ಓದಿರಿ: ಠುಸ್ ಆಗುತ್ತಾ 'ಟೈಗರ್ ಕ್ಯಾಬ್': ಆಪ್‌ ಬಗ್ಗೆ ಚಕಾರ ಎತ್ತಿದ ಬಳಕೆದಾರರು! ತೊಂದರೆ ಏನು?

ಜಿಯೋ ದೊಂದಿಗೆ ಜಿದ್ದಿಗೆ ಬಿದ್ದ ಏರ್‌ಟೆಲ್ ಈ ಹಿಂದೆಯೇ ಭಾರತೀಯ ಮಾರುಕಟ್ಟೆಯಲ್ಲಿ 4G VoLTE ಸೇವೆಯನ್ನು ಆರಂಭಿಸಿತ್ತು. ಆದರೆ ಜಿಯೋನಷ್ಟು ದೊಡ್ಡ ಪ್ರಮಾಣದಲ್ಲಿ 4G VoLTE ಸೇವೆಯನ್ನು ನೀಡಲು ಏರ್‌ಟೆಲ್‌ನಿಂದ ಸಾಧ್ಯವಾಗದೆ ಇದ್ದರೂ, ಹಂತ ಹಂತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ.

HD ವಾಯ್ಸ್ ಕಾಲಿಂಗ್:

HD ವಾಯ್ಸ್ ಕಾಲಿಂಗ್:

ಏರ್‌ಟೆಲ್ 4G VoLTE ಸೇವೆಯಲ್ಲಿ ಗ್ರಾಹಕರು HD ವಾಯ್ಸ್ ಕಾಲಿಂಗ್ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಸಾಮಾನ್ಯ ನೆಟ್‌ವರ್ಕ್‌ನಂತೆ ಕರೆ ಕಡಿತಗೊಳ್ಳುವಂತಹ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನಲಾಗಿದೆ. ಉತ್ತಮವಾದ ದ್ವನಿಯನ್ನು ಆಲಿಸಬಹುದಾಗಿದೆ.

ವೇಗದ ಇಂಟರ್ನೆಟ್:

ವೇಗದ ಇಂಟರ್ನೆಟ್:

ಏರ್‌ಟೆಲ್ 4G VoLTE ಸೇವೆಯಲ್ಲಿ ಸಾಮಾನ್ಯ 4G ಗಿಂತಲೂ ವೇಗವಾದ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ. ಡೇಟಾ ದಿಂದಲೇ ಕಾಲ್ ಮಾಡಬಹುದಾಗಿದೆ. ಇದಕ್ಕಾಗಿ ಯಾವುದೇ ಹೆಚ್ಚಿನ ದರವನ್ನು ವಿಧಿಸುವುದಿಲ್ಲ ಎನ್ನಲಾಗಿದೆ. ಇಂದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ.

ಜಿಯೋ ಗೆ ಸೆಡ್ಡು ಹೊರೆಯುವ ಸಲುವಾಗಿ:

ಜಿಯೋ ಗೆ ಸೆಡ್ಡು ಹೊರೆಯುವ ಸಲುವಾಗಿ:

ದೇಶದಲ್ಲಿ ಉಚಿತ ಸೇವೆಯನ್ನು ನೀಡುತ್ತಲೇ ಗಮನ ಸೆಳೆದ ಜಿಯೋವನ್ನು ಮೀರಿಸುವ ಸಲುವಾಗಿ ಏರ್‌ಟೆಲ್ 4G VoLTE ಸೇವೆಯನ್ನು ದೇಶದಲ್ಲಿ ಆರಂಭಿಸಿದ್ದು, ಆರಂಭಿಕ ಕೊಡುಗೆಯಾಗಿ ಕರ್ನಾಟಕದಲ್ಲಿ ಏರ್‌ಟೆಲ್‌ ಸಹ ವಾಯ್ಸ್ ಕರೆಯನ್ನು ಉಚಿತ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

English summary
Airtel launches VoLTE services in Karnataka. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X