Home
ಸುದ್ದಿಜಾಲ

Airtel: ಏರ್‌ಟೆಲ್‌ನಿಂದ ಹೊಸ ಡಿವೈಸ್‌: 99ರೂ.ಗಳಿಗೆ ಮನೆಯ ಮೂಲೆ ಮೂಲೆಗೂ ವೈ-ಫೈ ಸಂಪರ್ಕ

ಏರ್‌ಟೆಲ್‌ (Airtel) ಇತ್ತೀಚಿಗಂತೂ ಟೆಲಿಕಾಂ ವಲಯದಲ್ಲಿ ದೊಡ್ಡ ಸಂಚಲವನ್ನೇ ಉಂಟು ಮಾಡುತ್ತಿದೆ. ಈ ಮೂಲಕ ಗ್ರಾಹಕರು ಇತರೆ ಟೆಲಿಕಾಂ ನಲ್ಲಿ ಸಿಗದ ಸೇವೆಯನ್ನು ಇದರಲ್ಲಿ ಪಡೆಯುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಈಗ ಮಗದೊಂದು ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದು, ನೀವು ಕೇವಲ 99 ರೂ.ಗಳಲ್ಲಿ ನಿಮ್ಮ ಮನೆಯ ಮೂಲೆ ಮೂಲೆಗೂ ವೈ-ಫೈ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.

ಹೌದು, ಏರ್‌ಟೆಲ್ ಈಗ ಕೇವಲ 99ರೂ.ಗಳ ಬೆಲೆಯಲ್ಲಿ ಹೊಸ ವೈ-ಫೈ ಎಕ್ಸ್‌ಟೆಂಡರ್ ಡಿವೈಸ್‌ (airtel Wi-Fi extender device) ಅನ್ನು ಅನಾವರಣ ಮಾಡಿದ್ದು, ಇದು ಬರೋಬ್ಬರಿ 60 ಡಿವೈಸ್‌ಗಳನ್ನು ಸಂಪರ್ಕಿಸುವ ಸಾಮರ್ಥ್ಯ ಪಡೆದಿದೆ. ಇದನ್ನು ವೈ-ಫೈ ಸಿಗ್ನಲ್ ಬೂಸ್ಟ್ (Wi-Fi signal boost) ಅಂತಾನೂ ಕರೆಯಲಾಗುತ್ತದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡುತ್ತದೆ?, ಇದರ ಒಟ್ಟಾರೆ ಮೊತ್ತ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏರ್‌ಟೆಲ್‌ನಿಂದ ಹೊಸ ಡಿವೈಸ್‌: 99ರೂ.ಗಳಿಗೆ ಮನೆಯ ಮೂಲೆ ಮೂಲೆಗೂ ವೈ-ಫೈ ಸಂಪರ್ಕ

ಏರ್‌ಟೆಲ್‌ ವೈ-ಫೈ ಎಕ್ಸ್‌ಟೆಂಡರ್ ಡಿವೈಸ್‌: ಭಾರತದ ಪ್ರಮುಖ ಟೆಲಿಕಾಂ ಕಂಪನಿ ಆಗಿರುವ ಏರ್‌ಟೆಲ್ ಈಗಾಗಲೇ ಬಳಕೆದಾರರಿಗೆ ವಿಭಿನ್ನ ಸೇವೆಗಳನ್ನು ನೀಡುತ್ತಿದೆ. ಈಗ ಎಕ್ಸ್‌ಸ್ಟ್ರೀಮ್ ಫೈಬರ್ ಬಳಕೆದಾರರಿಗೆ ಹಾಗೂ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಬಳಕೆದಾರರಿಗೆ ಮತ್ತಷ್ಟು ಹೊಸ ಅನುಭವ ನೀಡುವ ಸಲುವಾಗಿ ವೈ-ಫೈ ಸಿಗ್ನಲ್ ಅನ್ನು 5G ವೈ-ಫೈ ರೂಟರ್‌ನೊಂದಿಗೆ ಪರಿಚಯಿಸಿದೆ.

ಅಂದರೆ ಈ ಹೊಸ ಏರ್‌ಟೆಲ್ ವೈ-ಫೈ ಎಕ್ಸ್‌ಟೆಂಡರ್ ಡಿವೈಸ್‌ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ (Airtel Extreme AirFiber) ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ವೈ-ಫೈ ರೂಟರ್‌ನಿಂದ ಲಭ್ಯವಿರುವ ಸಿಗ್ನಲ್ ಅನ್ನು ಮನೆಯಲ್ಲಿನ ಸಿಗ್ನಲ್ ಇಲ್ಲದ ಎಲ್ಲಾ ಸ್ಥಳಗಳಿಗೆ ವಿಸ್ತರಿಸುವ ಕೆಲಸ ಮಾಡುತ್ತದೆ. ಹಾಗೆಯೇ ನೀವು ಈ ಡಿವೈಸ್‌ಗೆ ತಿಂಗಳಿಗೆ 99 ರೂ.ಗಳನ್ನು ಪಾವತಿ ಮಾಡಬೇಕಿದೆ. ಈ ಡಿವೈಸ್‌ ಅನ್ನು ಪಡೆಯಲು 1000 ರೂ.ಗಳ ಒಂದು ಬಾರಿ ಮರುಪಾವತಿಸಬಹುದಾದ ಭದ್ರತಾ ಠೇವಣಿ ಅಗತ್ಯವಿದೆ. ಈ ಮೊತ್ತವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ.

ಏರ್‌ಟೆಲ್‌ನಿಂದ ಹೊಸ ಡಿವೈಸ್‌: 99ರೂ.ಗಳಿಗೆ ಮನೆಯ ಮೂಲೆ ಮೂಲೆಗೂ ವೈ-ಫೈ ಸಂಪರ್ಕ

ಈ ಹೊಸ ಏರ್‌ಟೆಲ್ ವೈ-ಫೈ ಎಕ್ಸ್‌ಟೆಂಡರ್ ಡಿವೈಸ್‌ ಏರ್‌ಟೆಲ್ ಕವರೇಜ್+ ಪ್ಲಾನ್ (Airtel Coverage+ Plan) ಅಡಿಯಲ್ಲಿ ಲಭ್ಯವಿದೆ. ದೊಡ್ಡ ಮನೆಗಳು ಅಥವಾ ಬಹು ಮಹಡಿಗಳನ್ನು ಹೊಂದಿರುವ ಮನೆಗಳಲ್ಲಿ ಸಾಮಾನ್ಯವಾಗಿ ನೆಟ್‌ವರ್ಕ್‌ ಕವರ್‌ ಆಗುವುದಿಲ್ಲ. ಪರಿಣಾಮ ಇದು ವೈ-ಫೈ ಸಿಗ್ನಲ್‌ಗಳನ್ನು ಯಾವುದೇ ಅಡೆತಡೆಯಿಲ್ಲದೆ ಮನೆಯ ಎಲ್ಲೆಡೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಜೊತೆಗೆ 60+ ಡಿವೈಸ್‌ಗಳನ್ನು ಸಂಪರ್ಕಿಸಲು ಅನುಮತಿಸುತ್ತದೆ.

ಇದನ್ನು ಖರೀದಿ ಮಾಡುವುದು ಹೇಗೆ?: ಇದನ್ನು ಆರ್ಡರ್ ಮಾಡಲು, ಏರ್‌ಟೆಲ್ ಥ್ಯಾಂಕ್ಸ್ ಮೊಬೈಲ್ ಆಪ್‌ (Airtel Thanks Mobile App) ಬಳಕೆ ಮಾಡಬೇಕಿದೆ. ಈ ಆಪ್‌ನಲ್ಲಿ ವೈ-ಫೈ ಎಕ್ಸ್‌ಟೆಂಡರ್ ಎಂದು ಸರ್ಚ್‌ ಮಾಡಿ ಅಥವಾ ನೀವು ನಿಮ್ಮ ಹತ್ತಿರದ ಏರ್‌ಟೆಲ್ ಶೋರೂಮ್ ಅಥವಾ ಏರ್‌ಟೆಲ್ ರಿಟೇಲ್ ಸ್ಟೋರ್ ಅನ್ನು ಸಂಪರ್ಕಿಸಿ ಖರೀದಿ ಮಾಡಬಹುದು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ವೈ ಫೈ ವಿಸ್ತರಣೆಗಳಿಗೆ ಹೆಚ್ಚಿನ ವೆಚ್ಚವಾಗುವುದರಿಂದ ಈ ಡಿವೈಸ್‌ ಉತ್ತಮ ಆಯ್ಕೆಯಾಗಿದೆ.

ಏರ್‌ಟೆಲ್‌ನಿಂದ ಹೊಸ ಡಿವೈಸ್‌: 99ರೂ.ಗಳಿಗೆ ಮನೆಯ ಮೂಲೆ ಮೂಲೆಗೂ ವೈ-ಫೈ ಸಂಪರ್ಕ

ಏರ್‌ಟೆಲ್‌ ಹೊಸ ಪ್ರಿಪೇಯ್ಡ್‌ ಪ್ಲ್ಯಾನ್‌: ಈ ನಡುವೆ ಏರ್‌ಟೆಲ್‌ ಕೆಲವು ದಿನಗಳ ಹಿಂದೆ ಪ್ರಿಪೇಯ್ಡ್‌ ಪ್ಲ್ಯಾನ್‌ವೊಂದನ್ನು ಪರಿಚಯಿಸಿದೆ. ಇದು ಓಟಿಟಿ ಆಧಾರಿತ ಪ್ಲ್ಯಾನ್‌ ಆಗಿದ್ದು, ಬಳಕೆದಾರರಿಗೆ ಮೂರು ತಿಂಗಳವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಿದ್ದು, ನಿತ್ಯವೂ 2GB ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರೊಂದಿಗೆ 84 ದಿನಗಳ ದೀರ್ಘ ಮಾನ್ಯತೆಯನ್ನು ಈ ಪ್ಲ್ಯಾನ್‌ ನೀಡಲಿದೆ. ನೀವು ಇದಕ್ಕೆ 869ರೂ.ಗಳನ್ನು ಪಾವತಿ ಮಾಡಬೇಕಿದೆ. ಉಳಿದಂತೆ ಅನಿಯಮಿತ ಕರೆ ಸೌಲಭ್ಯ ಹಾಗೂ ನಿತ್ಯ ನೂರು ಎಸ್‌ಎಮ್‌ಎಸ್‌ ಸೌಲಭ್ಯ ಸಹ ಇದ್ದು, ಹೆಚ್ಚಿನ ಡೇಟಾ ಹಾಗೂ ಓಟಿಟಿ ಪ್ರಿಯರು ಈ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Airtel has now introduced a new Wi-Fi extender device to its customers. This device will provide excellent connectivity to every corner of the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+