ನೀವು ಏರ್‌ಟೆಲ್‌ ಗ್ರಾಹಕರಾಗಿದ್ದರೇ ಈ ಪ್ಲ್ಯಾನ್‌ಗಳಲ್ಲಿ ಒಂದನ್ನು ಆಯ್ದುಕೊಳ್ಳಿ!

|

ದೇಶದ ಟೆಲಿಕಾಂ ವಲಯದಲ್ಲಿ ಸದ್ಯ ಜಿಯೋಗೆ ಸ್ಟ್ರಾಂಗ್‌ ಪೈಪೋಟಿ ನೀಡುತ್ತಿರುವ ಟೆಲಿಕಾಂ ಸಂಸ್ಥೆಯೆಂದರೇ ಅದುವೇ ಭಾರ್ತಿ ಏರ್‌ಟೆಲ್ ಆಗಿದೆ. ಈಗಾಗಲೇ ತನ್ನ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಅಲ್ಪಾವಧಿಯ ಪ್ಲ್ಯಾನ್‌ಗಳಿಂದ, ದೀರ್ಘಾವಧಿಯ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಏರ್‌ಟೆಲ್ ಮ್ಯೂಸಿಕ್ ಸೇವೆಯ ಚಂದಾದಾರತ್ವ ನೀಡುತ್ತಿದೆ.

ಏರ್‌ಟೆಲ್ ಪ್ಲ್ಯಾನ್‌

ಹೌದು, ಏರ್‌ಟೆಲ್ ಕಂಪನಿಯು ಇತ್ತೀಚಿಗೆ ವಾರ್ಷಿಕ ಅವಧಿಯ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದ್ದು, ಇದರೊಂದಿಗೆ ಕಡಿಮೆ ಅವಧಿಯ ಪ್ಲ್ಯಾನ್‌ಗಳಲ್ಲಿಯೂ ಸಹ ಹೆಚ್ಚುವರಿ ಡೇಟಾ, ಉಚಿತ ಕರೆ, ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ನೀಡುತ್ತಿದೆ. ಹಾಗಾದರೇ ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್‌ ಪ್ಲ್ಯಾನ್‌ಗಳು ಯಾವುವು ಮತ್ತು ಅವುಗಳ ಸೌಲಭ್ಯಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

1699ರೂ. ಪ್ಲ್ಯಾನ್

1699ರೂ. ಪ್ಲ್ಯಾನ್

ಏರ್‌ಟೆಲ್ ಸಂಸ್ಥೆಯು ಇತ್ತೀಚಿಗೆ 1699ರೂ. ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ರಾಷ್ಟ್ರೀಯ ಮತ್ತು ಲೋಕಲ್ ಕರೆಗಳು, ಪ್ರತಿದಿನ 100ಎಸ್‌ಎಮ್‌ಎಸ್‌ಗಳು ಹಾಗೂ ಪ್ರತಿದಿನ 1.4GB ಡೇಟಾ ಸೌಲಭ್ಯ ಇರಲಿದೆ. ಇದರೊಂದಿಗೆ ಏರ್‌ಟೆಲ್ Wynk ಮ್ಯೂಸಿಕ್ ಚಂದಾದಾರತ್ವವು ಸಿಗಲಿದೆ.

499ರೂ. ಪ್ಲ್ಯಾನ್‌

499ರೂ. ಪ್ಲ್ಯಾನ್‌

ಏರ್‌ಟೆಲ್‌ 499ರೂ.ಗಳ ವಿಶೇಷ ಪ್ಲ್ಯಾನ್‌ ಅನ್ನು ಪರಿಚಯಿಸಿದ್ದು, ಈ ಪ್ಲ್ಯಾನ್‌ 82 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ವಿಶೇಷವೆಂದರೇ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಉಳಿದಂತೆ ಅನಿಯಮಿತ ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿವೆ. ಹಾಗೆಯೇ ಈ ಪ್ಲ್ಯಾನಿನೊಂದಿಗೂ ಸಹ ಏರ್‌ಟೆಲ್ Wynk ಮ್ಯೂಸಿಕ್ ಚಂದಾದಾರತ್ವವು ಸಿಗಲಿದೆ.

299ರೂ. ಪ್ಲ್ಯಾನ್

299ರೂ. ಪ್ಲ್ಯಾನ್

ಇದೊಂದು ಶಾರ್ಟ್‌ ಟರ್ಮ್ ಪ್ಲ್ಯಾನ್ ಆಗಿದ್ದು, 28ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2.5GB ಡೇಟಾ, ಅನಿಯಮಿತ ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿವೆ. ಇದರೊಂದಿಗೆ ಅಮೆಜಾನ್ ಪ್ರೈಮ್‌ ಬೇನಿಫಿಟ್ಸ್‌ ಸಹ ಸಿಗಲಿದ್ದು, ಜೊತೆಗೆ ಏರ್‌ಟೆಲ್ Wynk ಮ್ಯೂಸಿಕ್ ಚಂದಾದಾರತ್ವವು ದೊರೆಯಲಿದೆ.

ಯಾವ ಪ್ಲ್ಯಾನ್ ಸೂಕ್ತ

ಯಾವ ಪ್ಲ್ಯಾನ್ ಸೂಕ್ತ

ಬಹುತೇಕ ಬಳಕೆದಾರರು ವಾರ್ಷಿಕ ಪ್ಲ್ಯಾನ್‌ಗಳನ್ನು ಹೆಚ್ಚು ಬಯಸುತ್ತಾರೆ. ಅಂತಹ ಗ್ರಾಹಕರಿಗೆ ಏರ್‌ಟೆಲ್‌ನ 1699ರೂ.ವಾರ್ಷಿಕ ಪ್ಲ್ಯಾನ್‌ ಸೂಕ್ತ ಎನಿಸುತ್ತದೆ. ಹಾಗೆಯೇ ಬಿಎಸ್‌ಎನ್‌ಎಲ್, ವೊಡಾಫೋನ್ ಮತ್ತು ಜಿಯೋ ಸಹ ಅದೇ ಬೆಲೆಯ ವಾರ್ಷಿಕ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ವಾರ್ಷಿಕ ಪ್ಲ್ಯಾನ್‌ ಜೊತೆಗೆ ಹಲವು ಪ್ರಯೋಜನಗಳನ್ನು ಸಹ ಕಂಪನಿಯುಗಳು ಗ್ರಾಹಕರಿಗೆ ನೀಡುತ್ತವೆ.

Best Mobiles in India

English summary
Bharti Airtel has prepaid plans which offer 28 days, 82 days and even 365 days validity. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X