ಏರ್‌ಟೆಲ್ ಕನಿಷ್ಠ ರೀಚಾರ್ಜ್ ಪ್ಲ್ಯಾನ್: ವ್ಯಾಲಿಡಿಟಿ ಜೊತೆ ಟಾಕ್‌ಟೈಮ್ ಲಭ್ಯ!
ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಅದಾಗ್ಯೂ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ಲ್ಯಾನ್ ಪರಿಚಯಿಸುತ್ತಿವೆ. ಏರ್‌ಟೆಲ್ ಸಂಸ್ಥೆಯು ಹಲವು ರೀಚಾರ್ಜ್ ಆಯ್ಕೆಗಳನ್ನು ತನ್ನ ಚಂದಾದಾರರಿಗೆ ಒದಗಿಸಿದ್ದು, ಅವುಗಳಲ್ಲಿ ಅಗ್ಗದ ಬೆಲೆಯ ಪ್ಲ್ಯಾನ್‌ಗಳೊಂದಿಗೆ ದುಬಾರಿ ಬೆಲೆಯ ಪ್ಲ್ಯಾನ್‌ಗಳು ಸೇರಿವೆ. ಆದ್ರೆ ಬಜೆಟ್ ಪ್ರೈಸ್‌ನಲ್ಲಿನ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳು ಹೆಚ್ಚು ಗ್ರಾಹಕರನ್ನು ಸೆಳೆಯುತ್ತವೆ.

ಹೌದು, ಏರ್‌ಟೆಲ್ ಹಲವು ಕನಿಷ್ಠ ಬೆಲೆಯ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಆ ಪ್ಲ್ಯಾನ್‌ಗಳು ವ್ಯಾಲಿಡಿಟಿ, ವಾಯಿಸ್ ಕರೆ, ಎಸ್‌ಎಮ್‌ಎಸ್, ಹಾಗೂ ಡೇಟಾ ಸೌಲಭ್ಯಗಳನ್ನು ಒಳಗೊಂಡಿವೆ. ಹಾಗೆಯೇ ಇನ್ನು ಕೆಲವು ಪ್ಲ್ಯಾನ್‌ಗಳು ಸೀಮಿತ ಪ್ರಯೋಜನಗಳನ್ನು ಮಾತ್ರ ಒದಗಿಸುತ್ತವೆ. ಇನ್ನು ಏರ್‌ಟೆಲ್‌ನ ಆರಂಭಿಕ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 45ರೂ. ಆಗಿದೆ. ಸದ್ಯದ ಲಾಕ್‌ಡೌನ್ ಅವಧಿಯಲ್ಲಿ ಅಗ್ಗದ ರೀಚಾರ್ಜ್ ಪ್ಲ್ಯಾನ್‌ಗಳು ಉಪಯುಕ್ತ ಅನಿಸಲಿವೆ. ಹಾಗಾದರೆ ಏರ್‌ಟೆಲ್‌ನ ಕನಿಷ್ಠ ರೀಚಾರ್ಜ್ ಪ್ಲ್ಯಾನ್ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ ಕನಿಷ್ಠ ರೀಚಾರ್ಜ್ ಪ್ಲ್ಯಾನ್
ಬಹುತೇಕರು ಎರಡು ಸಿಮ್ ಬಳಕೆ ಮಾಡುತ್ತಿರುತ್ತಾರೆ. ಕರೆ ಮಾಡಲೊಂದು ಹಾಗೂ ಒಳಬರುವ ಕರೆಗಳಿಗಾಗಿ ಒಂದು ಸಿಮ್ ಉಳಿಸಿಕೊಂಡಿರುತ್ತಾರೆ. ಹೀಗಾಗಿ ಸಿಮ್ ಚಾಲ್ತಿ ಆಗಿ ಇಟ್ಟುಕೊಳ್ಳಬೇಕಿರುತ್ತದೆ. ಕನಿಷ್ಠ ರೀಚಾರ್ಜ್ ಮಾಡಿಸದೇ ಇದ್ದಾಗ ಸಿಮ್ ಆಕ್ಟಿವ್ ಹೋಗುತ್ತದೆ. ಈ ನಿಟ್ಟಿನಲ್ಲಿ ಏರ್‌ಟೆಲ್ ಚಂದಾದಾರರು ಅವರ ಸಿಮ್ ಆಕ್ಟಿವ್ ಆಗಿ ಮುಂದುವರೆಸಲು ಈ ಏರ್‌ಟೆಲ್ ಕನಿಷ್ಠ ರೀಚಾರ್ಜ್ ಪ್ಲ್ಯಾನ್‌ಗಳು ಅಗತ್ಯವಾಗಿವೆ.

ಏರ್‌ಟೆಲ್ 45ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಸ್ಥಳೀಯ ಹಾಗೂ ರಾಷ್ಟ್ರೀಯ ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಏರ್‌ಟೆಲ್ 49ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ರೀಚಾರ್ಜ್‌ನಲ್ಲಿ 64ರೂ. ಟಾಕ್‌ಟೈಮ್ ಲಭ್ಯವಾಗಲಿದ್ದು, 100MB ಡೇಟಾ ಸೌಲಭ್ಯವು ಸಿಗಲಿದೆ. ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಏರ್‌ಟೆಲ್ 79ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ರೀಚಾರ್ಜ್‌ನಲ್ಲ 64ರೂ. ಟಾಕ್‌ಟೈಮ್ ಲಭ್ಯವಾಗಲಿದ್ದು, 200MB ಡೇಟಾ ಸೌಲಭ್ಯವು ಸಿಗಲಿದೆ. ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.


Click it and Unblock the Notifications








