Home
ಸುದ್ದಿಜಾಲ

ಏರ್‌ಟೆಲ್‌ನ ಈ ಎರಡು ಪ್ಲ್ಯಾನ್‌ನಲ್ಲಿ, ಡೇಟಾ, ಓಟಿಟಿ, ಉಚಿತ ಕರೆ ಎಲ್ಲವೂ ಸಿಗುತ್ತೆ!

ದೇಶದ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಈ ನಿಟ್ಟಿನಲ್ಲಿ ದೇಶದ ಎರಡನೇ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ಏರ್‌ಟೆಲ್‌ ಸಹ ಕೆಲವು ಅತ್ಯುತ್ತಮ ಪ್ಲ್ಯಾನ್‌ಗಳ ಮೂಲಕ ಅಧಿಕ ಗ್ರಾಹಕ ಬಳಗ ಹೊಂದಿದೆ. ಸಂಸ್ಥೆಯು ಗ್ರಾಹಕರಿಗಾಗಿ ಪ್ರೀಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆ ಒದಗಿಸಿದ್ದು, ಅವುಗಳಲ್ಲಿ ಎರಡು ಪ್ಲ್ಯಾನ್‌ ಮಾತ್ರ ಗ್ರಾಹಕರು ಬಯಸುವ ಎಲ್ಲ ಪ್ರಯೋಜನ ಪಡೆದು ಗಮನ ಸೆಳೆದಿವೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂನ ಭಿನ್ನ ಯೋಜನೆಗಳ ಲಿಸ್ಟ್‌ನಲ್ಲಿ, ಏರ್‌ಟೆಲ್‌ 1199ರೂ ಮತ್ತು ಏರ್‌ಟೆಲ್‌ 1499ರೂ. ಯೋಜನೆಗಳು ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆಯನ್ನು ಒಳಗೊಂಡಿರುವ ಜೊತೆಗೆ ಡೇಟಾ ಸೌಲಭ್ಯ ಪಡೆದಿವೆ. ಅಂದಹಾಗೆ ಈ ಎರಡು ಯೋಜನೆಗಳು ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಾಗಿದ್ದು, ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆದಿವೆ. ಹಾಗಾದರೆ ಏರ್‌ಟೆಲ್‌ 1199ರೂ ಮತ್ತು ಏರ್‌ಟೆಲ್‌ 1499ರೂ. ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ 1199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 1199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 1199 ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ 1 ಬಳಕೆದಾರ ಮತ್ತು 3 ಕುಟುಂಬ ಆಡ್-ಆನ್ ಕನೆಕ್ಷನ್ ಪಡೆಯಬಹುದಾಗಿದೆ. ಇನ್ನು ಈ ಯೋಜನೆಯು ಪ್ರತಿ ಆಡ್-ಆನ್ ಕನೆಕ್ಷನ್‌ಗೆ 150GB + 30GB ಅನ್ನು ನೀಡುತ್ತದೆ. ಇದಲ್ಲದೇ ಡೇಟಾ ರೋಲ್‌ಓವರ್ 200GB ಗೆ ಸೀಮಿತವಾಗಿದೆ. ಹಾಗೆಯೇ ಗ್ರಾಹಕರು ವಾಯಿಸ್‌ ಕರೆಯ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ದೊರೆಯಲಿದೆ.

ನೆಟ್‌ಫ್ಲಿಕ್ಸ್‌

ಇದರೊಂದಿಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌ ಬೇಸಿಕ್ ಅನ್ಲಿಮಿಟೆಡ್ ಪ್ರವೇಶ, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. ಇನ್ನು ಈ ಪೋಸ್ಟ್‌ಪೇಯ್ಡ್ ಯೋಜನೆಗಳು ಇದೀಗ ಏರ್‌ಟೆಲ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡಲು ಲಭ್ಯವಿದೆ.

ಏರ್‌ಟೆಲ್‌ 1499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ 1499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 1499 ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ 1 ಬಳಕೆದಾರ ಮತ್ತು 3 ಕುಟುಂಬ ಆಡ್-ಆನ್ ಕನೆಕ್ಷನ್ ಪಡೆಯಬಹುದಾಗಿದೆ. ಇನ್ನು ಈ ಯೋಜನೆಯು 200GB ಡೇಟಾ ಒಳಗೊಂಡಿದ್ದು, ಜೊತೆಗೆ ಪ್ರತಿ ಆಡ್-ಆನ್ ಕನೆಕ್ಷನ್‌ಗೆ 30GB ಅನ್ನು ನೀಡುತ್ತದೆ. ಇದಲ್ಲದೇ ಡೇಟಾ ರೋಲ್‌ಓವರ್ 200GB ಗೆ ಸೀಮಿತವಾಗಿದೆ. ಹಾಗೆಯೇ ಗ್ರಾಹಕರು ವಾಯಿಸ್‌ ಕರೆಯ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ದೊರೆಯಲಿದೆ.

ಹಾಟ್‌ಸ್ಟಾರ್

ಇದರೊಂದಿಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌ ಬೇಸಿಕ್ ಅನ್ಲಿಮಿಟೆಡ್ ಪ್ರವೇಶ, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. ಇನ್ನು ಈ ಪೋಸ್ಟ್‌ಪೇಯ್ಡ್ ಯೋಜನೆಗಳು ಇದೀಗ ಏರ್‌ಟೆಲ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡಲು ಲಭ್ಯವಿದೆ.

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಏರ್‌ಟೆಲ್ 399ರೂ. ಯೋಜನೆ ಆರಂಭಿಕ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಆಗಿದೆ. ಈ ಯೋಜನೆಯಲ್ಲಿ ಬಳಕೆದಾರರು 4G/3G ಬೆಂಬಲಿತ 40GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಯ ಚಂದಾದಾರಿಕೆಗಳ ಜೊತೆಗೆ ಒಂದು ವರ್ಷದವರೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ. ಫಾಸ್ಟ್ಯಾಗ್ ವಹಿವಾಟಿನಲ್ಲಿ ರಿಯಾಯಿತಿ ಹಾಗೂ ಉಚಿತ ಹೆಲೋಟೂನ್ಸ್ ಲಭ್ಯ.

Best Mobiles in India

English summary
Airtel Mobile Plans with Netflix, Amazon Prime Video, and Disney+ Hotstar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+