ಏರ್‌ಟೆಲ್‌ನ ಹೊಸ ಆರಂಭಿಕ ಪ್ಲ್ಯಾನ್‌ಗಳ ಪ್ರಯೋಜನಗಳು

|

ಇತ್ತೀಚಿಗೆ ಖಾಸಗಿ ಟೆಲಿಕಾಂ ಆಪರೇಟರ್‌ಗಳು ತಮ್ಮ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಬೆಲೆಯನ್ನು ಸುಮಾರು 40% ಹೆಚ್ಚಿಸಿವೆ. ಜನಪ್ರಿಯ ಭಾರ್ತಿ ಏರ್‌ಟೆಲ್‌ ಸಹ ಪ್ಲ್ಯಾನ್‌ಗಳ ಶುಲ್ಕವನ್ನು ಏರಿಕೆ ಮಾಡಿದ್ದು, ತನ್ನ ಗ್ರಾಹಕರಿಗೆ ಹೊರೆ ತಂದಿದೆ. ಆದರೆ ಏರ್‌ಟೆಲ್‌ನ ಹೊಸ ಪ್ರೀಪೇಡ್ ಪ್ಲ್ಯಾನ್‌ಗಳು ಅಗತ್ಯ ಪ್ರಯೋಜನಗಳನ್ನು ಒಳಗೊಂಡಿದ್ದು, ಆರಂಭಿಕ ಹೊಸ ಪ್ರೀಪೇಡ್ ಪ್ಲ್ಯಾನ್‌ 200ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿದೆ.

ಏರ್‌ಟೆಲ್‌ ಟೆಲಿಕಾಂ

ಹೌದು, ಏರ್‌ಟೆಲ್‌ ಟೆಲಿಕಾಂನ ಹೊಸ ಆರಂಭಿಕ ಪ್ರೀಪೇಡ್ ಪ್ಲ್ಯಾನ್‌ಗಳು 197 ರೂ.ಗಳಿಂದ ಪ್ರಾರಂಭವಾಗಿ 647 ರೂ.ಗಳವರೆಗೆ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿವೆ. ಇದರೊಂದಿಗೆ ಏರ್‌ಟೆಲ್‌ ಆಕರ್ಷಕ ವಾರ್ಷಿಕ ವ್ಯಾಲಿಡಿಟಿ ಅವಧಿಯ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಆರಂಭಿಕ ಪ್ಲ್ಯಾನ್‌ಗಳು 28 ದಿನಗಳ ವ್ಯಾಲಿಡಿಟಿಯಿಂದ 84 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿವೆ. ಹಾಗಾದರೇ ಏರ್‌ಟೆಲ್‌ನ ಆರಂಭಿಕ ನಾಲ್ಕು ಪ್ರೀಪೇಡ್ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ.

ಏರ್‌ಟೆಲ್ 197ರೂ. ಪ್ಲ್ಯಾನ್

ಏರ್‌ಟೆಲ್ 197ರೂ. ಪ್ಲ್ಯಾನ್

ಏರ್‌ಟೆಲ್‌ನ 197 ರೂ. ಆರಂಭಿಕ ರೀಚಾರ್ಜ್ ಪ್ಲ್ಯಾನ್ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿವೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 2GB ಡೇಟಾವನ್ನು ಹೊಂದಿದೆ. ಹಾಗೆಯೇ ಅನಿಯಮಿತ ಕರೆಗಳ ಸೌಲಭ್ಯವನ್ನು ಪಡೆದಿದ್ದು, ಪ್ರತಿದಿನ 100 ಎಸ್‌ಎಂಎಸ್ ಪ್ರಯೋಜನವನ್ನು ಸಹ ಲಭ್ಯವಾಗಿಸಿದೆ.

ಏರ್‌ಟೆಲ್ 297ರೂ. ಪ್ಲ್ಯಾನ್

ಏರ್‌ಟೆಲ್ 297ರೂ. ಪ್ಲ್ಯಾನ್

ಏರ್‌ಟೆಲ್‌ನ 297ರೂ. ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಆದರೆ ಹೆಚ್ಚಿನ ಪ್ರಯೋಜನ ಸಿಗಲಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡಾಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಉಚಿತವಾಗಿ ಲಭ್ಯ ಇವೆ. ಹಾಗೇಯೆ ಅನಿಯಮಿತ ಕರೆಗಳ ಪ್ರಯೋಜನದ ಜೊತೆಗೆ ಏರ್‌ಟೆಲ್‌ ಮ್ಯೂಸಿಕ್ ಆಪ್ ಸಪೋರ್ಟ್‌ ಸಹ ಸಿಗಲಿದೆ. ಪ್ರತಿದಿನ 1.5GB ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಸೂಕ್ತ.

ಏರ್‌ಟೆಲ್ 497ರೂ. ಪ್ಲ್ಯಾನ್

ಏರ್‌ಟೆಲ್ 497ರೂ. ಪ್ಲ್ಯಾನ್

ಏರ್‌ಟೆಲ್‌ನ 497ರೂ. ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಇನ್ನು ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡಾಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಉಚಿತವಾಗಿ ಸಿಗಲಿವೆ. ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಹಾಗೂ ರೋಮಿಂಗ್ ಪ್ರಯೋಜನ ಸಹ ಇದೆ.

ಏರ್‌ಟೆಲ್ 647ರೂ. ಪ್ಲ್ಯಾನ್

ಏರ್‌ಟೆಲ್ 647ರೂ. ಪ್ಲ್ಯಾನ್

ಸುಮಾರು ಮೂರು ತಿಂಗಳ ಕಾಲದ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಬೆಸ್ಟ್‌ ಅನಿಸುತ್ತದೆ. ಏಕೆಂದರೇ ಏರ್‌ಟೆಲ್‌ನ 647ರೂ. ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡಾಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಲಭ್ಯಇವೆ. ಇದರೊಂದಿಗೆ ಅನಿಯಮಿತ ಕರೆಗಳ ಪ್ರಯೋಜನಗಳು ದೊರೆಯುತ್ತದೆ.

Most Read Articles
Best Mobiles in India

English summary
Airtel came up with four new First/Second Recharge plans to the new customers and they start at Rs 197. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X