ಏರ್‌ಟೆಲ್‌ನ ಈ ಎರಡು ಪ್ಲ್ಯಾನ್‌ಗಳಲ್ಲಿ ಈಗ ಭರ್ಜರಿ ಡೇಟಾ ಮತ್ತು ವ್ಯಾಲಿಡಿಟಿ!
ದೇಶದ ಟೆಲಿಕಾಂ ವಲಯದಲ್ಲಿ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಲಾಂಚ್ ಮಾಡಿದೆ. ಏರ್‌ಟೆಲ್ ಟೆಲಿಕಾಂ ಪ್ರೀಪೇಯ್ಡ್ ಯೋಜನೆಗಳಂತೆ ಬಜೆಟ್ ದರದಲ್ಲಿ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸಿ ಸೈ ಅನಿಸಿಕೊಂಡಿದೆ. ಆದರೆ ಇದೀಗ ಏರ್‌ಟೆಲ್ ತನ್ನ ಎರಡು ಪ್ರೀಪೇಯ್ಡ್ ಪ್ಲ್ಯಾನ್ ಗಳಲ್ಲಿ ಬದಲಾವಣೆ ಮಾಡಿದ್ದಯ, ಅಧಿಕ ಪ್ರಯೋಜನ ಸೇರಿಸಿದೆ.

ಹೌದು, ಏರ್‌ಟೆಲ್ ಟೆಲಿಕಾಂ ತನ್ನ 349ರೂ ಮತ್ತು 299ರೂ. ಪ್ರೀಪೇಯ್ಡ್ ಯೋಜನೆಗಳಲ್ಲಿ ಪರಿಷ್ಕರಣೆ ಮಾಡಿದ್ದು, ಅಧಿಕ ಡೇಟಾ, ವ್ಯಾಲಿಡಿಟಿ ಸೌಲಭ್ಯ ಸೇರಿಸಿದೆ. ಈ ಎರಡು ಯೋಜನೆಗಳು ದೈನಂದಿನ ಡೇಟಾ, ಎಸ್‌ಎಮ್‌ಎಸ್, ಅನಿಯಮಿತ ವಾಯಿಸ್ ಕರೆ ಹಾಗೂ ಭಿನ್ನ ವ್ಯಾಲಿಡಿಟಿ ಪ್ರಯೋಜನಗಳನ್ನು ಹೊಂದಿದ್ದವು. ಇದೀಗ ಈ ಸೌಲಭ್ಯಗಳಿಗೆ ಸಂಸ್ಥೆಯು ಹೆಚ್ಚುವರಿಯಾಗಿ ಡೇಟಾ ಹಾಗೂ ವ್ಯಾಲಿಡಿಟಿ ಒದಗಿಸಿದ್ದು, ಈ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಹಾಗಾದರೇ ಏರ್‌ಟೆಲ್‌ನ 349ರೂ ಮತ್ತು 299ರೂ. ಯೋಜನೆಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 349ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್‌ನ 349ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಹೊಂದಿತ್ತು. ಆದ್ರೆ ಇದೀಗ ಕಂಪನಿಯು ಬದಲಾವಣೆ ಮಾಡಿದ್ದರಿಂದಾಗಿ ಪ್ರತಿದಿನ 2GB ಡೇಟಾ ಬದಲಿ, 2.5GB ಡೇಟಾ ಸೌಲಭ್ಯ ಸಿಗಲಿದೆ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 70GB ಡೇಟಾ ಸಿಗಲಿದೆ. ಹಾಗೆಯೇ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್ 299ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್‌ನ 299ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿತ್ತು. ಆದರೆ ಪ್ಲ್ಯಾನ್ ಪರಿಷ್ಕರಣೆಯಿಂದಾಗಿ ಇದೀಗ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯದಲ್ಲಿ ಲಭ್ಯವಾಗಲಿದೆ. ಇನ್ನು ಈ ವ್ಯಾಲಿಡಿಟಿ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಹೊಂದಿತ್ತು. ಹಾಗೆಯೇ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್ 456ರೂ. ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್ 456ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 50GB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹೊಂದಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಏರ್‌ಟೆಲ್ 456ರೂ. ಪ್ರೀಪೇಯ್ಡ್ ಯೋಜನೆ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ 30 ದಿನಗಳ ಉಚಿತ ಟ್ರಾಯಲ್ ಹೊಂದಿದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್‌ಗೆ ಆಕ್ಸ್ ಹೊಂದಿದೆ. ಹಾಗೆಯೇ ಈ ಯೋಜನೆಯ ರೀಚಾರ್ಜ್‌ನೊಂದಿಗೆ ಗ್ರಾಹಕರಿಗೆ ಫಾಸ್ಟ್ಯಾಗ್‌ನಲ್ಲಿ 100 ಕ್ಯಾಶ್‌ಬ್ಯಾಕ್ ಸಿಗಲಿದೆ. ಇದಲ್ಲದೆ, ಶಾ ಅಕಾಡೆಮಿ ನೀಡುವ ಆನ್‌ಲೈನ್ ಕೋರ್ಸ್‌ಗಳಿಗೆ ಒಂದು ವರ್ಷದ ಉಚಿತ ಆಕ್ಸಸ್ ಇದೆ.


Click it and Unblock the Notifications








