Home
ಸುದ್ದಿಜಾಲ

Airtel: ಏರ್‌ಟೆಲ್ ಗ್ರಾಹಕರಿಗೆ ದೊಡ್ಡ ಶಾಕ್‌: ಈ ಜನಪ್ರಿಯ ಎರಡು ಪ್ಲ್ಯಾನ್‌ಗಳ ಬೆಲೆ ಏರಿಕೆ

ಟೆಲಿಕಾಂ ಕಂಪೆನಿಗಳಲ್ಲಿ (telecom company) ಅಗ್ರಸ್ಥಾನ ಪಡೆದಿರುವ ಏರ್‌ಟೆಲ್‌ (Airtel) ಆಗಾಗ್ಗೆ ಹೊಸ ಹೊಸ ಪ್ರಿಪೇಯ್ಡ್‌ ಪ್ಲ್ಯಾನ್ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತದೆ. ಆದರೆ, ಈಗ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ಎರಡು ಪ್ರಮುಖ ಪ್ಲ್ಯಾನ್‌ಗಳನ್ನು ತನ್ನ ಬತ್ತಳಿಕೆಯಿಂದ ಹೊರಹಾಕಿದೆ. ಬೇಸರದ ವಿಷಯ ಏನೆಂದರೆ ಈ ಪ್ಲ್ಯಾನ್‌ನಲ್ಲಿ ಲಭ್ಯವಾಗುತ್ತಿದ್ದ ಸೇವೆಗಳನ್ನು ಪಡೆಯಲು ಇನ್ಮುಂದೆ ಹೆಚ್ಚಿನ ಹಣ ಪಾವತಿ ಮಾಡಬೇಕಿದೆ.

ಹೌದು, ಏರ್‌ಟೆಲ್‌ ಇದೀಗ ಎರಡು ಪ್ರಮುಖ ಪ್ಲ್ಯಾನ್‌ಗಳನ್ನು ತೆಗೆದುಹಾಕಿದೆ. ಇದರ ಬದಲಾಗಿ ಹೊಸ ಎರಡು ಪ್ಲ್ಯಾನ್‌ಗಳನ್ನು ಪರಿಚಯಿಸಿದೆ ಅಥವಾ ಬೆಲೆ ಹೆಚ್ಚಳ ಮಾಡಿದೆ. ಹಾಗಿದ್ರೆ, ಯಾವುವು ಈ ಎರಡು ಪ್ಲ್ಯಾನ್‌ಗಳು?, ಹಾಗಿದ್ರೆ ಹೊಸ ಪ್ಲ್ಯಾನ್‌ಗಳ ಬೆಲೆ ಎಷ್ಟು?, ಇವುಗಳ ಮಾನ್ಯತೆ ದಿನಗಳು ಎಷ್ಟು ಎಂಬಿತ್ಯಾದಿ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏರ್‌ಟೆಲ್ ಗ್ರಾಹಕರಿಗೆ ದೊಡ್ಡ ಶಾಕ್‌: ಈ ಜನಪ್ರಿಯ ಎರಡು ಪ್ಲ್ಯಾನ್‌ಗಳ ಬೆಲೆ ಏರಿಕೆ

ಎರಡು ಪ್ಲ್ಯಾನ್‌ಗಳಿಗೆ ಗೇಟ್‌ಪಾಸ್: ಏರ್‌ಟೆಲ್‌ ಇದೀಗ ತನ್ನ ಪ್ರಿಪೇಯ್ಡ್ ಪಟ್ಟಿಯಿಂದ 118 ರೂ.ಗಳು ಮತ್ತು 289 ರೂ.ಗಳ ಪ್ಲ್ಯಾನ್ ಅನ್ನು ತೆಗೆದುಹಾಕಿದೆ. ಈಗ ಬಳಕೆದಾರರು ಅದೇ ಪ್ರಯೋಜನಗಳನ್ನು ಪಡೆಯಲು ಹೆಚ್ಚು ಪಾವತಿ ಮಾಡಬೇಕಿದೆ. ಅಂದರೆ ಕ್ರಮವಾಗಿ 129 ರೂ.ಗಳು ಹಾಗೂ 329 ರೂ.ಗಳ ಪ್ಲ್ಯಾನ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಮೂಲಕ ಹಳೆಯ ಪ್ಲ್ಯಾನ್‌ನಲ್ಲಿ ಸಿಗುತ್ತಿದ್ದ ಪ್ರಯೋಜನಗಳನ್ನು ಇದರಲ್ಲಿ ಪಡೆಯಬಹುದಾಗಿದೆ.

ಏರ್‌ಟೆಲ್ 129 ರೂ.ಗಳ ಪ್ಲ್ಯಾನ್‌: ಏರ್‌ಟೆಲ್‌ನ ಈ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಬಳಕೆದಾರರು ಒಟ್ಟಾರೆ 12GB ಡೇಟಾ ಬಳಕೆ ಮಾಡಿಕೊಳ್ಳಬಹುದು. ಬಳಕೆದಾರರು ಈ ರೀಚಾರ್ಜ್ ಅನ್ನು ಯಾವುದೇ ಸಕ್ರಿಯ ಯೋಜನೆಯೊಂದಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈ ಮೊದಲ 118 ರೂ. ಗಳ ಪ್ಲ್ಯಾನ್ ನಲ್ಲಿ 1GB ಡೇಟಾಗೆ 9.83 ರೂ.ಗಳೂ ಖರ್ಚಾಗುತ್ತಿತ್ತು. ಆದರೆ, ಈಗ 1GB ಡೇಟಾಗೆ ಗ್ರಾಹಕರು 10.75 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ.

ಏರ್‌ಟೆಲ್ ಗ್ರಾಹಕರಿಗೆ ದೊಡ್ಡ ಶಾಕ್‌: ಈ ಜನಪ್ರಿಯ ಎರಡು ಪ್ಲ್ಯಾನ್‌ಗಳ ಬೆಲೆ ಏರಿಕೆ

ಏರ್‌ಟೆಲ್ 329 ರೂ.ಗಳ ಪ್ಲ್ಯಾನ್‌: ಏರ್‌ಟೆಲ್‌ನ ಈ ಪ್ಲ್ಯಾನ್‌ 35 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಅನಿಯಮಿತ ವಾಯ್ಸ್‌ ಕರೆ, ಉಚಿತ ರಾಷ್ಟ್ರೀಯ ರೋಮಿಂಗ್, 300 ಉಚಿತ ಎಸ್‌ಎಮ್‌ಎಸ್‌ ಮತ್ತು ಒಟ್ಟು 4GB ಡೇಟಾದೊಂದಿಗೆ ಕಾಣಿಸಿಕೊಂಡಿದೆ. ಇದರ ಹೊರತಾಗಿ, ಈ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಬಳಕೆದಾರರು ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನ ಉಚಿತ ಚಂದಾದಾರಿಕೆ ಹಾಗೂ ಅಪೊಲೊ 24|7 ಸರ್ಕಲ್‌ನ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಗಮನಿಸಬೇಕಾದ ವಿಷಯ ಏನೆಂದರೆ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಈ ರೀತಿಯ ಶಾಕ್‌ ನೀಡುವುದು ಇದೇ ಮೊದಲಲ್ಲ. ಕಳೆದ ವರ್ಷ ಹಲವಾರು ರಾಜ್ಯಗಳಲ್ಲಿ 99 ರೂ.ಗಳ ಬೆಲೆಯ ತನ್ನ ಮೂಲ ಯೋಜನೆಯನ್ನು ಸ್ಥಗಿತಗೊಳಿಸಿತು, ತರುವಾಯ ಶೇಕಡಾ 57 ರಷ್ಟು ಶುಲ್ಕ ಹೆಚ್ಚಿಸಿತ್ತು. ಇದಾದ ನಂತರದಲ್ಲಿ ಬಳಕೆದಾರರು ತಮ್ಮ ಸಿಮ್ ಕಾರ್ಡ್‌ಗಳನ್ನು ಸಕ್ರಿಯವಾಗಿಡಲು ಕನಿಷ್ಠ 155 ರೂ.ಗಳ ಯೋಜನೆಯೊಂದಿಗೆ ರೀಚಾರ್ಜ್ ಮಾಡಬೇಕು ಎಂದು ಹೇಳಿತ್ತು.

ಏರ್‌ಟೆಲ್ ಗ್ರಾಹಕರಿಗೆ ದೊಡ್ಡ ಶಾಕ್‌: ಈ ಜನಪ್ರಿಯ ಎರಡು ಪ್ಲ್ಯಾನ್‌ಗಳ ಬೆಲೆ ಏರಿಕೆ

ಏರ್‌ಟೆಲ್‌ ಯಾಕೆ ಹೀಗೆ ಮಾಡುತ್ತಿದೆ?: ಕಂಪನಿಗಳ ಆದಾಯ ಮತ್ತು ಮಾರ್ಜಿನ್‌ಗಳ ಮೇಲೆ ಹೆಚ್ಚುತ್ತಿರುವ ಒತ್ತಡದಿಂದಾಗಿ ಏರ್‌ಟೆಲ್‌ ಸುಂಕ ಹೆಚ್ಚಳ ಮಾಡುತ್ತಿದೆ ಎಂದು ತಿಳಿದುಬಂದಿದೆ. ಈ ನಡುವೆ ಮೂರನೇ ತ್ರೈಮಾಸಿಕದಲ್ಲಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಜಿಯೋ ಮಧ್ಯಮ ಬೆಳವಣಿಗೆಯನ್ನು ಕಂಡಿದ್ದು, ಈಗ ಈ ಬೆಲೆ ಏರಿಕೆಯೊಂದಿಗೆ ARPU ಗಮನಾರ್ಹವಾದ ಬೆಳವಣಿಗೆಯನ್ನು ಕಾಣಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

30 ಕೋಟಿಗೂ ಹೆಚ್ಚು ಟೆಲಿಕಾಂ ಬಳಕೆದಾರರು: ಈ ನಡುವೆ ಏರ್‌ಟೆಲ್‌ಗೆ ದೇಶದಲ್ಲಿ 30 ಕೋಟಿಗೂ ಹೆಚ್ಚು ಟೆಲಿಕಾಂ ಬಳಕೆದಾರರು ಇದ್ದಾರೆ. ಏರ್‌ಟೆಲ್‌ನ ಈ ನಿರ್ಧಾರದಿಂದ ಕೆಲವರು ಜಿಯೋ ಅಥವಾ ವಿ ಟೆಲಿಕಾಂ ಕಡೆ ಹೋಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಏರ್‌ಟೆಲ್‌ ಒಂದು ಕೈಲಿ ಪಡೆದಿದ್ದನ್ನು ಇನ್ನೊಂದು ಕೈನಲ್ಲಿ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಏನೇ ಆದರೂ ಈ ದಿಢೀರ್ ಬೆಲೆ ಏರಿಕೆ ಮಾತ್ರ ಏರ್‌ಟೆಲ್‌ ಗ್ರಾಹಕರ ಕಣ್ಣನ್ನು ಕೆಂಪಾಗಿಸದೆ ಇರದು.

Best Mobiles in India

English summary
Airtel has now removed the Rs 118 and Rs 289 prepaid plans. Instead it has introduced two new plans or increased the price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+