Home
ಸುದ್ದಿಜಾಲ

ಏರ್‌ಟೆಲ್‌ನ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿಸಿದ ಬಳಕೆದಾರರಿಗೆ ಉಚಿತ 6GB ಡೇಟಾ!

ದೇಶದಲ್ಲಿ ಜಿಯೋ ಟೆಲಿಕಾಂಗೆ ನೇರ ಪೈಪೋಟಿ ನೀಡುವ ಪ್ರಮುಖ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ಏರ್‌ಟೆಲ್‌ ಈಗಾಗಲೇ ಹಲವು ಆಕರ್ಷಕ ಡೇಟಾ ಯೋಜನೆಗಳಿಂದ ಗ್ರಾಹಕರನ್ನು ಸೆಳೆದಿದೆ. ಇದೀಗ ಕೆಲವು ಆಯ್ದ ಬಳಕೆದಾರರಿಗೆ ಹೆಚ್ಚುವರಿಯಾಗಿ ಉಚಿತ 6GB ಡೇಟಾ ಪ್ರಯೋಜನವನ್ನು ಏರ್‌ಟೆಲ್‌ ತಿಳಿಸಿದ್ದು, ಚಂದಾದಾರರಿಗೆ ಭಾರೀ ಖುಷಿ ತಂದಿದೆ.

ಏರ್‌ಟೆಲ್ ಟೆಲಿಕಾಂ

ಹೌದು, ಏರ್‌ಟೆಲ್ ಟೆಲಿಕಾಂ ಇದೀಗ ಆಯ್ದ ಬಳಕೆದಾರರಿಗೆ ಕಾಂಪ್ಲಿಮೆಂಟರಿ ಆಗಿ 6GB ಡೇಟಾ ವರೆಗೂ ಉಚಿತ ಡೇಟಾ ನೀಡುವ ಕೊಡುಗೆ ಪರಿಚತಿಸಿದೆ. ಮೈ ಏರ್‌ಟೆಲ್‌ ಆಪ್‌ ಮೂಲಕ ಕನಿಷ್ಠ ಏರ್‌ಟೆಲ್‌ನ 219ರೂ. ಯೋಜನೆಯ ಮತ್ತು ಅದಕ್ಕೂ ಮೇಲ್ಪಟ್ಟ ಯೋಜನೆಗಳನ್ನು ರೀಚಾರ್ಜ್‌ ಮಾಡಿಕೊಂಡ ಗ್ರಾಹಕರು ಈ ಕೊಡುಗೆಗೆ ಅರ್ಹ ಎನ್ನಲಾಗಿದೆ. ಆಯ್ದ ಗ್ರಾಹಕರಿಗೆ ಡೇಟಾ ಕೂಪನ್‌ ಲಭ್ಯವಾಗಲಿದೆ.

219ರೂ,

ಏರ್‌ಟೆಲ್‌ನ 219ರೂ, 249ರೂ, 279ರೂ, 298ರೂ, 349ರೂ ಅಥವಾ 398ರೂ. ಪ್ಲ್ಯಾನ್‌ ರೀಚಾರ್ಜ್ ಮಾಡುವ ಬಳಕೆದಾರರು 1GB ಡೇಟಾದ ಎರಡು ಕೂಪನ್‌ಗಳನ್ನು ಸ್ವೀಕರಿಸುತ್ತಾರೆ. ಪ್ರತಿಯೊಂದು 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಎಂದು ಏರ್‌ಟೆಲ್ ತಿಳಿಸಿದೆ. ಆದಾಗ್ಯೂ, ಬಳಕೆದಾರರು ಹೇಳಿಕೊಳ್ಳುವ ಕೂಪನ್‌ಗಳು ಅದರ ಬಳಕೆಯ ಹೊರತಾಗಿಯೂ ಅದೇ ದಿನ ರಾತ್ರಿ 11.59 ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

ರೀಚಾರ್ಜ್

ಏರ್‌ಟೆಲ್‌ನ 399ರೂ, 449ರೂ ಮತ್ತು 558ರೂ ಪ್ಯಾಕ್‌ಗಳಿಗೆ ರೀಚಾರ್ಜ್ ಮಾಡುವ ಬಳಕೆದಾರರು ನಾಲ್ಕು 1GB ಡೇಟಾ ಕೂಪನ್‌ಗಳನ್ನು ಸ್ವೀಕರಿಸುತ್ತಾರೆ, ಪ್ರತಿಯೊಂದು 56 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಅಂತೆಯೇ, 598ರೂ ಮತ್ತು 698ರೂ. ಪ್ಯಾಕ್‌ಗಳಿಗೆ ರೀಚಾರ್ಜ್ ಮಾಡುವ ಬಳಕೆದಾರರು ಆರು 1GB ಡೇಟಾ ಕೂಪನ್‌ಗಳನ್ನು ಸ್ವೀಕರಿಸುತ್ತಾರೆ, ಪ್ರತಿಯೊಂದು ಕೂಪನ್ 84 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಏರ್‌ಟೆಲ್‌ನ ಮೈ ಏರ್‌ಟೆಲ್‌ ಅಪ್ಲಿಕೇಶನ್‌ನಲ್ಲಿ ಮೈ ಕೂಪನ್ಸ್‌ ಆಯ್ಕೆಯಲ್ಲಿ ಕಾಣಬಹುದಾಗಿದೆ.

ಏರ್‌ಟೆಲ್ 298ರೂ. ಪ್ಲ್ಯಾನ್

ಏರ್‌ಟೆಲ್ 298ರೂ. ಪ್ಲ್ಯಾನ್

ಏರ್‌ಟೆಲ್‌ನ 298ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ.

ಏರ್‌ಟೆಲ್‌ನ 349ರೂ. ಪ್ಲ್ಯಾನ್‌

ಏರ್‌ಟೆಲ್‌ನ 349ರೂ. ಪ್ಲ್ಯಾನ್‌

ಏರ್‌ಟೆಲ್‌ನ 349ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ.

ಏರ್‌ಟೆಲ್ 449ರೂ. ಪ್ಲ್ಯಾನ್

ಏರ್‌ಟೆಲ್ 449ರೂ. ಪ್ಲ್ಯಾನ್

ಏರ್‌ಟೆಲ್‌ನ 449ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ.

Best Mobiles in India

English summary
Airtel offering free data coupons scheme to its users recharging for specific packs priced Rs 219 and above.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+