Home
ಸುದ್ದಿಜಾಲ

ಏರ್‌ಟೆಲ್‌ನ ಈ ಪ್ಲ್ಯಾನ್‌ಗಳಲ್ಲಿ ಭರ್ಜರಿ ಕೊಡುಗೆ; ಸಿಗಲಿದೆ 6GB ಡೇಟಾ ಎಕ್ಸ್‌ಟ್ರಾ!

ದೇಶದ ಟೆಲಿಕಾಂ ವಲಯದಲ್ಲಿ ಜಿಯೋಗೆ ನೇರ ಪೈಪೋಟಿ ನೀಡುತ್ತಾ ಸಾಗಿರುವ ಏರ್‌ಟೆಲ್‌ ಭಿನ್ನ ಯೋಜನೆಗಳ ಮೂಲಕ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಏರ್‌ಟೆಲ್‌ ಟೆಲಿಕಾಂನ ಬಹುತೇಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಅಧಿಕ ಡೇಟಾ, ದೀರ್ಘ ವ್ಯಾಲಿಡಿಟಿ ಅವಧಿ ಹಾಗೂ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿವೆ. ಆದ್ರೇ ಇದೀಗ ಕಂಪನಿಯು ಆಯ್ದ ಪ್ಲ್ಯಾನ್‌ಗಳಿಗೆ ಹೆಚ್ಚುವರಿ ಡೇಟಾ ಕೊಡುಗೆ ನೀಡಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ 219ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಪ್ಲ್ಯಾನ್‌ರಗಳ ರೀಚಾರ್ಜ್‌ ಮಾಡಿಸಿದರೇ ಹೆಚ್ಚುವರಿ ಡೇಟಾ ಕೋಪನ್‌ ಲಭ್ಯವಾಗಲಿದೆ ಎಂದಿದೆ. ಈ ಕೊಡುಗೆಯು 28 ದಿನಗಳ (ಆರಂಭಿಕ ಕನಿಷ್ಠ 219ರೂ. ಪ್ಲ್ಯಾನ್‌), 56 ದಿನಗಳ (ಆರಂಭಿಕ ಕನಿಷ್ಠ 399ರೂ. ಪ್ಲ್ಯಾನ್‌) ಮತ್ತು 84 ದಿನಗಳ (ಆರಂಭಿಕ ಕನಿಷ್ಠ 598ರೂ. ಪ್ಲ್ಯಾನ್‌) ವ್ಯಾಲಿಡಿಟಿಯ ಯೋಜನೆಗಳಿಗೆ ಕ್ರಮವಾಗಿ 2, 4 ಮತ್ತು 6 ಕೋಪನ್‌ ಲಭ್ಯವಾಗಲಿದೆ. ಇನ್ನು ಏರ್‌ಟೆಲ್‌ನ ಥ್ಯಾಂಕ್ಸ್‌ ಆಪ್‌ ಮೂಲಕ ರೀಚಾರ್ಜ್ ಮಾಡಿಸಿದರೇ ಈ ಕೊಡುಗೆ ಸಿಗಲಿದೆ. ಇನ್ನುಳಿದಂತೆ ಏರ್‌ಟೆಲ್‌ನ ಈ ಯೋಜನೆಗಳ ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್‌ 219ರೂ. ಯೋಜನೆ

ಏರ್‌ಟೆಲ್‌ನ 219ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ವೆಂಕ್ ಮ್ಯೂಸಿಕ್ ಹಾಗೂ ಹೆಲೊ ಟ್ಯೂನ್ ಸೇವೆ ಲಭ್ಯ.

ಏರ್‌ಟೆಲ್‌ 558ರೂ. ಯೋಜನೆ

ಏರ್‌ಟೆಲ್‌ 558ರೂ. ಯೋಜನೆ

ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್‌ ಪ್ಯಾನ್‌ಗಳಲ್ಲಿ ಒಂದಾಗಿರುವ 558ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಉಚಿತ ಡೇಟಾ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ.

ಏರ್‌ಟೆಲ್‌ 598ರೂ. ಯೋಜನೆ

ಏರ್‌ಟೆಲ್‌ 598ರೂ. ಯೋಜನೆ

ಏರ್‌ಟೆಲ್‌ 598ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರೀ ಹೆಲೋ ಟ್ಯೂನ್‌ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

Best Mobiles in India

English summary
Airtel Offering 6GB Data Coupons On Recharge Of Rs 219 Or More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+