Airtel ಗ್ರಾಹಕರಿಗೆ ಗುಡ್‌ನ್ಯೂಸ್; ಈ ಪ್ಲ್ಯಾನ್ ಜೊತೆಗೆ ಅಪಘಾತ ವಿಮೆ ಲಭ್ಯ!
ಭಾರ್ತಿ ಏರ್‌ಟೆಲ್ ಟೆಲಿಕಾಂ ಹಲವು ಆಕರ್ಷಕ ಯೋಜನೆಗಳ ಮೂಲಕ ಈಗಾಗಲೇ ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಏರ್‌ಟೆಲ್ ಸಂಸ್ಥೆಯು ಅಲ್ಪಾವಧಿಯ ಯೋಜನೆಗಳ ಜೊತೆಗೆ ದೀರ್ಘಾವಧಿಯ ಪ್ಲ್ಯಾನ್‌ಗಳ ಆಯ್ಕೆಯನ್ನು ಒಳಗೊಂಡಿದೆ. ಹಾಗೆಯೇ ಅಧಿಕ ದೈನಂದಿನ ಡೇಟಾ ಪ್ರಯೋಜನ ನೀಡುವ ಕೆಲವು ಅತ್ಯುತ್ತಮ ಏರ್‌ಟೆಲ್ ಯೋಜನೆಗಳನ್ನು ಕೂಡಾ ಒಳಗೊಂಡಿದೆ. ಇದೀಗ ಸಂಸ್ಥೆಯು ತನ್ನ ಮೂರು ಯೋಜನೆಗಳ ಜೊತೆಗೆ ಅಪಘಾತ ವಿಮೆ (Accidental Insurance) ಅನ್ನು ನೀಡುತ್ತದೆ.
ಹೌದು, ಭಾರ್ತಿ ಏರ್‌ಟೆಲ್ ಟೆಲಿಕಾಂ ತನ್ನ ಏರ್‌ಟೆಲ್ 969ರೂ. ಏರ್‌ಟೆಲ್ 399ರೂ ಮತ್ತು ಏರ್‌ಟೆಲ್ 239ರೂ. ರೀಚಾರ್ಜ್ ಯೋಜನೆಗಳ ಜೊತೆಗೆ ಆಕ್ಸಿಡೆಂಟಲ್ ಇನ್ಶುರೆನ್ಸ್ ನೀಡುತ್ತದೆ ಎಂದು ಟೆಲಿಕಾಂ ಟಾಕ್ ವರದಿ ಮಾಡಿದೆ. ವರದಿ ಪ್ರಕಾರ ಸಂಸ್ಥೆಯ ಈ ಮುರು ಯೋಜನೆಗಳ ಬಳಕೆದಾರರಿಗೆ ಅಪಘಾತ ವಿಮೆ (Accidental Insurance) ಯನ್ನು ಒದಗಿಸಲು ICICI ಲೊಂಬಾರ್ಡ್ ( ICICI Lombard ) ಜೊತೆಗೆ ಪಾಲುದಾರಿಕೆ ಹೊಂದಿದೆ ಎಂದು ವರದಿಯಾಗಿದೆ.

ಇನ್ನು ಏರ್‌ಟೆಲ್‌ನ ಈ ಮೂರು ಯೋಜನೆಗಳ ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಐಸಿಐಸಿಐ ಲೊಂಬಾರ್ಡ್ ಜೊತೆಗೆ ಗ್ರೂಪ್ ಸೇಫ್‌ಗಾರ್ಡ್‌ಗಾಗಿ ಶೇರ್ ಮಾಡಲು ಏರ್‌ಟೆಲ್‌ನಿಂದ ಅವಕಾಶ ಲಭ್ಯವಾಗಲಿದೆ. ಅಂದಹಾಗೆ ಸದ್ಯ, ಭಾರ್ತಿ ಏರ್‌ಟೆಲ್ ಈ ಮೂರು ಪ್ಲ್ಯಾನ್‌ಗಳು ಮಾತ್ರ ಅಪಘಾತ ವಿಮೆ ( Accidental Insurance) ಸೌಲಭ್ಯ ಪಡೆದಿವೆ. ಹಾಗಾದರೇ ಏರ್‌ಟೆಲ್‌ನ ಈ ಯೋಜನೆಗಳ ಪ್ರಯೋಜನಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಏರ್‌ಟೆಲ್ 239ರೂ. ಪ್ಲ್ಯಾನ್ ಮಾಹಿತಿ
ಏರ್‌ಟೆಲ್ (Airtel) ಟೆಲಿಕಾಂನ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ವೇಳೆ ಪ್ರತಿದಿನ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಪಡೆದಿದ್ದು, ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇನ್ನು ಅಪಘಾತ ವಿಮೆ ಸೌಲಭ್ಯ, ರೀಚಾರ್ಜ್‌ನಿಂದ 30 ದಿನಗಳ ಅವಧಿಯಲ್ಲಿ ಮರಣಕ್ಕೆ ಅಥವಾ ಅಂಗವೈಕಲ್ಯಕ್ಕೆ 1,00,000ರೂ. ವರೆಗೆ ಮತ್ತು ಆಸ್ಪತ್ರೆಗೆ ದಾಖಲಾಗುವ ಮೊತ್ತವು 25,000ರೂ. ಗಳ ವರೆಗೆ ಅಪಘಾತ ವಿಮೆ ಪ್ರಯೋಜನ ಪಡೆದಿದೆ.
ಏರ್‌ಟೆಲ್ 399ರೂ. ಪ್ಲ್ಯಾನ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ವೇಳೆ ಪ್ರತಿದಿನ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಪಡೆದಿದ್ದು, ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇನ್ನು ಅಪಘಾತ ವಿಮೆ ಸೌಲಭ್ಯದ ವ್ಯಾಲಿಡಿಟಿಯು ರೀಚಾರ್ಜ್‌ನಿಂದ 30 ದಿನಗಳ ಅವಧಿಯಲ್ಲಿ ಮರಣಕ್ಕೆ ಅಥವಾ ಅಂಗವೈಕಲ್ಯಕ್ಕೆ 1,00,000ರೂ. ವರೆಗೆ ಮತ್ತು ಆಸ್ಪತ್ರೆಗೆ ದಾಖಲಾಗುವ ಮೊತ್ತವು 25,000ರೂ. ಗಳ ವರೆಗೆ ಅಪಘಾತ ವಿಮೆ ಪ್ರಯೋಜನ ಪಡೆದಿದೆ.
ಏರ್‌ಟೆಲ್ 969ರೂ. ಪ್ಲ್ಯಾನ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯ ಸಿಗಲಿದೆ. ಅಲ್ಲದೇ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇನ್ನು ರೀಚಾರ್ಜ್‌ನಿಂದ 90 ದಿನಗಳ ಅವಧಿಯಲ್ಲಿ ಮರಣಕ್ಕೆ ಅಥವಾ ಅಂಗವೈಕಲ್ಯಕ್ಕೆ 1,00,000ರೂ. ವರೆಗೆ ಮತ್ತು ಆಸ್ಪತ್ರೆಗೆ ದಾಖಲಾಗುವ ಮೊತ್ತವು 25,000ರೂ. ಗಳ ವರೆಗೆ ಅಪಘಾತ ವಿಮೆ ಪ್ರಯೋಜನ ಪಡೆದಿದೆ.


Click it and Unblock the Notifications








