ಏರ್‌ಟೆಲ್ ಗ್ರಾಹಕರಿಗೆ ಸಿಹಿಸುದ್ದಿ!..ಅನಿಯಮಿತ 5G ಡೇಟಾ ಕೊಡುಗೆ ಈಗ ಲಭ್ಯ!
ಭಾರತದಲ್ಲಿ 5G ನೆಟ್‌ವರ್ಕ್ ಸೇವೆಯು ಶರವೇಗದಲ್ಲಿ ವಿಸ್ತರಣೆ ಆಗುತ್ತಿದೆ. ಮುಂಚೂಣಿಯ ಟೆಲಿಕಾಂಗಳಾಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ದೇಶದ ಹಲವು ಪ್ರದೇಶಗಳಲ್ಲಿ 5G ಸೇವೆಯನ್ನು ನೀಡುತ್ತಿವೆ. ಏರ್‌ಟೆಲ್ ಇತ್ತೀಚಿಗೆ ತನ್ನ ಚಂದಾದಾರರಿಗೆ ಅನಿಯಮಿತ 5G ಡೇಟಾವನ್ನು ಬಳಸುವ ಕೊಡುಗೆಯನ್ನು ಪರಿಚಯಿಸಿದ್ದು, ಭಾರೀ ಗಮನ ಸೆಳೆದಿದೆ.
ಹೌದು, ಭಾರತೀಯ ಏರ್‌ಟೆಲ್ 5G ಡೇಟಾ ಬಳಕೆ ಮಾಡುವ ಆಫರ್ ಲಭ್ಯ ಮಾಡಿದ್ದು, ಗ್ರಾಹಕರು ಈ ಕೊಡುಗೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಕೊಡುಗೆ ಪಡೆಯಲು ಚಂದಾದಾರರು 5G ಬೆಂಬಲಿತ ಫೋನ್ ಹಾಗೂ 5G ಲಭ್ಯ ಇರುವ ಪ್ರದೇಶದಲ್ಲಿ ಇರಬೇಕು. ಅಂದಹಾಗೆ ಏರ್‌ಟೆಲ್ 5G ಪ್ಲಸ್ ಸೇವೆಯು ದೇಶದ 270 ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಏರ್‌ಟೆಲ್ 5G ರೀಚಾರ್ಜ್ ಪ್ಲ್ಯಾನ್ : ಏರ್‌ಟೆಲ್ 239ರೂ. ಹಾಗೂ ಇದಕ್ಕಿಂತ ಅಧಿಕ ಮೊತ್ತದ ರೀಚಾರ್ಜ್ ಮಾಡುವ ಏರ್‌ಟೆಲ್‌ನ ಎಲ್ಲ ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಚಂದಾದಾರರು ಈ ಕೊಡುಗೆ ಪಡೆಯಬಹುದಾಗಿದೆ. ಆದರೆ ಏರ್‌ಟೆಲ್ 5G ಲಭ್ಯತೆಯ ಪ್ರದೇಶದಲ್ಲಿರಬೇಕು, ಅಲ್ಲದೇ 5G ಡಿವೈಸ್ ಹೊಂದಿರಬೇಕು.

ಏರ್‌ಟೆಲ್ 5G ಪರಿಚಯಾತ್ಮಕ ಕೊಡುಗೆ : ಏರ್‌ಟೆಲ್ 5G ಪ್ಲಸ್ ಚಂದಾದಾರರು ಇದೀಗ ಪರಿಚಯಾತ್ಮಕ ಕೊಡುಗೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದು 5G ಸಪೋರ್ಟ್ ಇರುವ ಫೋನ್‌ಗಳಲ್ಲಿ ಅನಿಯಮಿತ ಹೆಚ್ಚಿನ ವೇಗದ ಡೇಟಾವನ್ನು ಬಳಸಲು ಅನುಮತಿಸುತ್ತದೆ. ಅಂದಹಾಗೆ ಬಳಕೆದಾರರು ಅಗತ್ಯ ಅರ್ಹತಾ ಅವಶ್ಯಕತೆಗಳನ್ನು ಹೊಂದಿದ್ದಾರೆಯೇ ಎಂದು ಚೆಕ್ ಮಾಡಲು ಏರ್‌ಟೆಲ್ ಥ್ಯಾಂಕ್ಸ್ ಆಪ್ (Airtel Thanks app) ಬಳಸುವುದು.

ಆಫರ್ ಲಭ್ಯವೇ?..ಹೀಗೆ ಚೆಕ್ ಮಾಡಿ : ಚಂದಾದಾರರ ಮೊಬೈಲ್ ಸಂಖ್ಯೆಗೆ ಆಫರ್ ಲಭ್ಯವಿದ್ದರೆ, ಆನ್‌ನ ಮ್ಯಾನೇಜ್ ವಿಭಾಗದಲ್ಲಿ 'Claim Unlimited 5G data' ಟ್ಯಾಬ್ ಅನ್ನು ಕಾಣುವ ಸಾಧ್ಯತೆಯಿದೆ. ನಂತರ ಆ ಆಯ್ಕೆ ಮೇಲೆ ಟ್ಯಾಪ್ ಮಾಡಿದಾಗ, ಮತ್ತೊಂದು ವಿಂಡೋ ತೆರೆದುಕೊಳ್ಳುತ್ತದೆ. ಆ ನಂತರ ಪೇಜ್‌ನ ಕೆಳಭಾಗದಲ್ಲಿ Claim Now ಬಟನ್ ಅನ್ನು ಕಾಣುವಿರಿ. ಬಳಿಕ ಆ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಡೇಟಾ ಕೊಡುಗೆ ಸಕ್ರಿಯ ಮಾಡಬಹುದು.

ಏರ್‌ಟೆಲ್‌ನ 239ರೂ. ಪ್ರೀಪೇಯ್ಡ್ ಯೋಜನೆ ಪ್ರಯೋಜನ : ಏರ್‌ಟೆಲ್ ಈ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಒಟ್ಟು ಪ್ರತಿದಿನ 1 GB ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ ಹೆಲೊ ಟ್ಯೂನ್ ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್‌ನ 265ರೂ. ಪ್ರೀಪೇಯ್ಡ್ ಯೋಜನೆ ಪ್ರಯೋಜನ : ಏರ್‌ಟೆಲ್ ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಒಟ್ಟು ಪ್ರತಿದಿನ 1 GB ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ ಹೆಲೊ ಟ್ಯೂನ್ ಸೇವೆಯನ್ನು ಒದಗಿಸುತ್ತದೆ.
ಏರ್‌ಟೆಲ್‌ನ 299ರೂ. ಪ್ರೀಪೇಯ್ಡ್ ಯೋಜನೆ ಪ್ರಯೋಜನ : ಏರ್‌ಟೆಲ್ ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಒಟ್ಟು ಪ್ರತಿದಿನ 1.5 GB ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ ಹೆಲೊ ಟ್ಯೂನ್ ಸೇವೆಯನ್ನು ಒದಗಿಸುತ್ತದೆ.


Click it and Unblock the Notifications








