Subscribe to Gizbot

1 ರೂ.ಗೆ 1 GB ಆಫರ್ ಕೊಟ್ಟ ಏರ್‌ಟೆಲ್: 1000 GB ಬೋನಸ್! ಪಡೆದುಕೊಳ್ಳುವುದು ಹೇಗೆ..?

Written By:

ಭಾರತೀಯ ಟೆಲಿಕಾಂ ಲೋಕದಲ್ಲಿ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್, ಈ ಬಾರಿ ರಿಲಯನ್ಸ್ ಮಾಲೀಕತ್ವದ ಜಿಯೋವನ್ನು ಹೆಣೆಯುವ ಸಲುವಾಗಿ ದೊಡ್ಡ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ಈಗಾಗಲೇ ಜಿಯೋ ಬ್ರಾಡ್‌ಬ್ಯಾಂಡ್ ಲೋಕಕ್ಕೆ ಕಾಲಿಡಲಿದೆ ಎನ್ನುವ ಮಾಹಿತಿ ದೊರೆತಿರುವ ಹಿನ್ನಲೆಯಲ್ಲಿ ಹೊಸದೊಂದು ಆಫರ್ ನೀಡಿದೆ.

ಒಂದು ರೂ.ಗೆ 1 GB ಆಫರ್ ಕೊಟ್ಟ ಏರ್‌ಟೆಲ್: ಜೊತೆಗೆ 1000 GB ಬೋನಸ್.!

ಓದಿರಿ: ಕರ್ನಾಟಕಕ್ಕೆ ಮಾತ್ರವೇ ಆಚ್ಚರಿಯ ಆಫರ್ ನೀಡಿದ BSNL: ಬರೀ ಡೇಟಾವಲ್ಲ ಟಾಕ್‌ಟೈಮ್ ಸಹ ಇದೆ.!!

ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ 'ಬಿಗ್ ಬೈಟ್ ಆಫರ್' ನೀಡಿದ್ದು, ಇದು ತನ್ನ ಬಳಕೆದಾರರಿಗೆ ಬೋನಸ್ ಆಗಿ 1,000 GB ಹೈ ಸ್ವೀಡ್ ಡೇಟಾವನ್ನು ನೀಡಲು ಮುಂದಾಗಿದೆ. ಇದರ ಲಾಭವನ್ನು ಗ್ರಾಹಕರು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್ ಗಳಲ್ಲಿ ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾರಿಗೆ ಈ ಆಫರ್ ದೊರೆಯಲಿದೆ:

ಯಾರಿಗೆ ಈ ಆಫರ್ ದೊರೆಯಲಿದೆ:

ತಿಂಗಳಿಗೆ ರೂ. 599-1,999 ವರೆಗಿನ ಆಫರ್ ಹೊಂದಿರುವ ಗ್ರಾಹಕರಿಗೆ ಈ ಬೋನಸ್ ಡೇಟಾ ಆಫರ್ ದೊರೆಯಲಿದೆ ಎನ್ನಲಾಗಿದೆ. ಅದುವೇ ಅವರ ಪ್ಲಾನ್ ಆಧಾರದ ಮೇಲೆ 500-1000 GB ಡೇಟಾ ದೊರೆಯಲಿದೆ ಎಂದು ಏರ್‌ಟೆಲ್ ವೆಬ್‌ಸೈಟಿನಲ್ಲಿ ತಿಳಿಸಲಾಗಿದೆ.

ಸ್ಪೀಡ್ ಹೇಗಿದೆ..?

ಸ್ಪೀಡ್ ಹೇಗಿದೆ..?

ಏರ್‌ಟೆಲ್ ಬಿಗ್ ಬೈಟ್ ಆಫರ್' ನಲ್ಲಿ ಬಳಕೆದಾರಿಗೆ 8Mbps ನಿಂದ 100Mbps ವರೆಗೆ ಸ್ಪೀಡ್ ದೊರೆಯಲಿದೆ ಎನ್ನಲಾಗಿದೆ. ಇದರಿಂದ ಗ್ರಾಹಕರು ಸ್ಪೀಡ್ ಇಲ್ಲ ಎನ್ನುವ ಹಾಗೆ ಇಲ್ಲ.

ಎಂದಿನಿಂದ ಈ ಆಫರ್ ಜಾರಿ:

ಎಂದಿನಿಂದ ಈ ಆಫರ್ ಜಾರಿ:

ಏರ್‌ಟೆಲ್ ನೀಡಿರುವ ಬಿಗ್ ಬೈಟ್ ಆಫರ್' ಜೂನ್ 12 ರಿಂದ ನಂತರ ಸೇವೆಯನ್ನು ಪಡೆದವರಿಗೆ ಮಾತ್ರವೇ ಅನ್ವಯಿಸಲಿದ್ದು, ಕರ್ಮಷಿಯಲ್ ಬಳಕೆದಾರರು ಈ ಆಫರ್ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಎನ್ನಲಾಗಿದೆ.

ಎಂದಿಗೆ ಕೊನೆ:

ಎಂದಿಗೆ ಕೊನೆ:

ಏರ್‌ಟೆಲ್ ನೀಡುವ ಬಿಗ್ ಬೈಟ್ ಆಫರ್' ನಲ್ಲಿ ಬೋನಸರ್ ಡೇಟಾವು ಮಾರ್ಜ್ 31, 2018 ರ ವರೆಗೂ ಜಾರಿಯಲ್ಲಿರುತ್ತದೆ ಎನ್ನಲಾಗಿದೆ. ಹಾಗಾಗಿ ನಿಧಾನವಾಗಿ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಪಡೆದುಕೊಳ್ಳುವುದು ಹೇಗೆ..?

ಪಡೆದುಕೊಳ್ಳುವುದು ಹೇಗೆ..?

ಈ ಆಫರ್ ಪಡೆಯುವ ಅವಕಾಶ ಹೊಂದಿರುವವರು ಏರ್‌ಟೆಲ್ ಬ್ರಾಡ್ ಬ್ಯಾಂಡ್ ಪೇಜ್‌ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ನಂಬರ್ ಎಂಟ್ರಿ ಮಾಡಿ ಹೊಸ ಕನೆಕ್ಷನ್ ಪಡೆಯುವ ಸಲುವಾಗಿ ರಿಕ್ಚೆಸ್ಟ್ ಕಳುಹಿಸಿ ನಂತರ ಅಲ್ಲಿಂದಲೇ ನಿಮಗೆ ಕರೆ ಬರಲಿದೆ ಮತ್ತು ಕನೆಕ್ಷನ್ ಸಹ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Airtel's Broadband Big Byte Offer is available for customers subscribing to its DSL services on or after June 12, 2017. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot