ಜಿಯೋಗೆ ಸೆಡ್ಡು: ಏರ್‌ಟೆಲ್‌ನಿಂದ 199 ಆಫರ್..!!
ಏರ್‌ಟೆಲ್ ಸಹ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದ್ದು, ರೂ. 199ಕ್ಕೆ ಹೊಸ ಆಫರ್ ನೀಡಿದೆ. ಇದರಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಜಿಯೋ ಮಾದರಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಇರುವ ಗ್ರಾಹಕರನ್ನು ಉಳಿಸಿಕೊಳ್ಳಲಿ ಏರ್‌ಟೆಲ್ ಸಹ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದ್ದು, ರೂ. 199ಕ್ಕೆ ಹೊಸ ಆಫರ್ ನೀಡಿದೆ. ಇದರಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಓದಿರಿ: ಜಿಯೋ ಬಳಕೆದಾರರಿಗೆ ಹಬ್ಬ: 149ಕ್ಕೆ ಅನ್‌ಲಿಮಿಟೆಡ್ ಡೇಟಾ ಅಂತೆ!
ಜಿಯೋ ಸದ್ಯ ರೂ.149ಕ್ಕೆ ಹೊಸ ಆಫರ್ ನೀಡಿದ ಸಂದರ್ಭದಲ್ಲಿ ಏರ್‌ಟೆಲ್ ಈ ಹೊಸ ಆಫರ್ ಘೋಷಣೆ ಮಾಡಿದ್ದು, ಟೆಲಿಕಾಂ ಲೋಕದಲ್ಲಿ ಭಾರಿ ಸಂಚಲನವನ್ನು ಹುಟ್ಟಿಹಾಕಿದೆ. ಏರ್‌ಟೆಲ್ ಮತ್ತು ಜಿಯೋ ಎರಡು ಹೊಸ ಹೊಸ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಭರ್ಜರಿ ಆಯ್ಕೆಯನ್ನು ನೀಡುತ್ತಿವೆ.

28 ದಿನಗಳಿಗೆ 1GB ಡೇಟಾ:
ಏರ್‌ಟೆಲ್ ರೂ.199 ಆಫರ್ ನಲ್ಲಿ ಗ್ರಾಹಕರಿಗೆ 1 GB ಡೇಟಾವನ್ನು ಬಳಕೆಗೆ ನೀಡಲಿದ್ದು, ಇದು 2G/3G/4G ಬಳಕೆದಾರಿಗೆ ಒಂದೇ ಮಾದರಿಯಲ್ಲಿ ಇರಲಿದ್ದು, ಮೊಬೈಲ್ ಸಪೋರ್ಟ್ ಮಾಡುವ ಸ್ಪೀಡ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಆನ್‌ಲಿಮಿಟೆಡ್ ಕರೆಗಳು:
ಇದಲ್ಲದೇ ಈ ಆಫರ್ ನಲ್ಲಿ ಗ್ರಾಹಕರು ಆನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು ಪಡೆಯಲಿದ್ದಾರೆ. ಇದರಲ್ಲಿ ಪ್ರತಿ ನಿತ್ಯ 300 ನಿಮಿಷಗಳ ಕಾಲ ಮಾತನಾಡಬಹುದಾಗಿದೆ. ಅಲ್ಲದೇ ಪ್ರತಿ ವಾರಕ್ಕೆ 1200 ನಿಮಿಷಗಳು ಮಾತ್ರವೇ ಬಳಕೆಗೆ ದೊರೆಯಲಿದೆ.

ಹೊಸ ಗ್ರಾಹಕರಿಗೆ ರೂ. 178ಕ್ಕೆ ಲಭ್ಯ:
ಈ ಆಫರ್ ಹೊಸ ಗ್ರಾಹಕರಿಗೆ ರೂ. 178ಕ್ಕೆ ಲಭ್ಯವಿದ್ದು, ಅವರಿಗೂ ಇದು ಮೊದಲ ಮತ್ತು ಎರಡನೇ ರಿಚಾರ್ಜ್ ಗಳಿಗೆ ಮಾತ್ರವೇ ದೊರೆಯಲಿದೆ. ಇದನ್ನು ಬಿಟ್ಟರೇ ಮುಂದೆ ರೂ. 199 ಪಾವತಿ ಮಾಡಬೇಕಾಗಿದೆ.


Click it and Unblock the Notifications








