ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, ಏರ್‌ಟೆಲ್ ಗ್ರಾಹಕರಿಗೆ ಡೇಟಾ ಟೆನ್ಷನ್ ಇರಲ್ಲ!
ದೇಶದ ಟೆಲಿಕಾಂ ಸಂಸ್ಥೆಗಳ ಪೈಕಿ ಎರಡನೇ ಸ್ಥಾನದ ಟೆಲಿಕಾಂ ಕಂಪನಿಯಾಗಿ ಗುರುತಿಸಿಕೊಂಡಿರುವ ಏರ್‌ಟೆಲ್ (Airtel) ತನ್ನ ಚಂದಾದಾರರಿಗೆ ಹಲವು ಭಿನ್ನ ಶ್ರೇಣಿಯ ಪ್ರೀಪೇಯ್ಡ್ ರೀಚಾರ್ಜ್ ಆಯ್ಕೆಗಳ್ನು ಪರಿಚಯಿಸಿದೆ. ಆ ಪೈಕಿ ಕೆಲವು ರೀಚಾರ್ಜ್ ಯೋಜನೆಗಳು ಆಕರ್ಷಕ ಡೇಟಾ ಪ್ರಯೋಜನ ಪಡೆದಿದ್ದು, ಇನ್ನ ಕೆಲ ಪ್ಲ್ಯಾನ್‌ಗಳು ಬೆಸ್ಟ್ ವ್ಯಾಲಿಡಿಟಿ ಹಾಗೂ ಅಧಿಕ ಡೇಟಾ ಸೌಲಭ್ಯ ಒಳಗೊಂಡಿವೆ.
ಹೌದು, ಭಾರ್ತಿ ಏರ್‌ಟೆಲ್ ಕಂಪನಿಯು ಅಧಿಕ ಪ್ರತಿದಿನ ಡೇಟಾ ಸೌಲಭ್ಯ ಪಡೆದಿರುವ ರೀಚಾರ್ಜ್ ಪ್ಲ್ಯಾನ್ ಆಯ್ಕೆಗಳನ್ನು ಒಳಗೊಂಡಿದೆ. ಅದಾಗ್ಯೂ, ದೈನಂದಿನ 2.5 GB ಡೇಟಾ ಸೌಲಭ್ಯದ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಆಕರ್ಷಕ ಎನಿಸಿವೆ. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ಒಳಗೊಂಡಿವೆ. ಹಾಗಾದರೇ ಏರ್‌ಟೆಲ್ ಟೆಲಿಕಾಂನ ದೈನಂದಿನ 2.5 GB ಡೇಟಾ ಸೌಲಭ್ಯದ ಪ್ಲ್ಯಾನ್‌ಗಳ ಬಗ್ಗೆ ಹಾಗೂ ಇತರೆ ಬೆಸ್ಟ್ ಯೋಜನೆಗಳ ಕುರಿತು ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 429ರೂ. ರೀಚಾರ್ಜ್ ಯೋಜನೆ ಮಾಹಿತಿ
ಏರ್‌ಟೆಲ್ ಟೆಲಿಕಾಂನ 429ರೂ. ರೀಚಾರ್ಜ್ ಯೋಜನೆ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಈ ಪ್ಲ್ಯಾನ್ ನಿತ್ಯ 2.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯ. ಅನಿಯಮಿತ ವಾಯಿಸ್ ಕರೆ ಪ್ರಯೋಜನ ಗಳನ್ನು ಪಡೆದಿದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ. ಅಲ್ಲದೇ ಈ ಯೋಜನೆಯಲ್ಲಿ ಹೆಚ್ಚುವರಿ ಯಾಗಿ ಏರ್‌ಟೆಲ್ ಆಪ್ಸ್ ಸೇವೆ ಸಹ ಸಿಗಲಿವೆ.
ಏರ್‌ಟೆಲ್ 1199ರೂ. ರೀಚಾರ್ಜ್ ಯೋಜನೆ ಮಾಹಿತಿ
ಏರ್‌ಟೆಲ್ ಟೆಲಿಕಾಂನ 1199ರೂ. ರೀಚಾರ್ಜ್ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಈ ಪ್ಲ್ಯಾನ್ ನಿತ್ಯ 2.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯ. ಅನಿಯಮಿತ ವಾಯಿಸ್ ಕರೆ ಪ್ರಯೋಜನ ಗಳನ್ನು ಪಡೆದಿದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ. ಅಲ್ಲದೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ಲಭ್ಯ.
ಏರ್‌ಟೆಲ್ 3999ರೂ. ರೀಚಾರ್ಜ್ ಯೋಜನೆ ಮಾಹಿತಿ
ಏರ್‌ಟೆಲ್ ಟೆಲಿಕಾಂನ 3999ರೂ. ರೀಚಾರ್ಜ್ ಯೋಜನೆ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಈ ಪ್ಲ್ಯಾನ್ ನಿತ್ಯ 2.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯ. ಅನಿಯಮಿತ ವಾಯಿಸ್ ಕರೆ ಪ್ರಯೋಜನ ಗಳನ್ನು ಪಡೆದಿದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ. ಅಲ್ಲದೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಸದಸ್ಯತ್ವ ಸಹ ಲಭ್ಯ.


Click it and Unblock the Notifications