Home
ಸುದ್ದಿಜಾಲ

ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ನಿತ್ಯವೂ ಉಚಿತ 3GB ಡೇಟಾದೊಂದಿಗೆ ಸಾಕಷ್ಟು ಪ್ರಯೋಜನ!

ಏರ್‌ಟೆಲ್ ತನ್ನ ಗ್ರಾಹಕರಿಗೆ ವಿವಿಧ ರೀತಿಯ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಹೆಚ್ಚಿನ ಚಂದಾದಾರರನ್ನು ಗಳಿಸಿಕೊಂಡಿದೆ. ಈ ನಡುವೆ ಹೊಸ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಸಹ ಬಳಕೆದಾರರಿಗೆ ಭಿನ್ನ ಸೇವೆ ನೀಡುತ್ತಿದ್ದು, ಇದರೊಂದಿಗೆ ಏರ್‌ಟೆಲ್ ಪ್ರತಿದಿನ 3GB ಲಭ್ಯ ಇರುವ ಪ್ರಿಪೇಯ್ಡ್ ಪ್ಲ್ಯಾನ್‌ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ.

ಹೌದು, ಏರ್‌ಟೆಲ್ ವಿವಿಧ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರ ವೈವಿಧ್ಯಮಯ ಡೇಟಾ ಬಳಕೆಯ ಅಗತ್ಯಗಳನ್ನು ಪೂರೈಸುತ್ತಾ ಬರುತ್ತಿದೆ. ಅಂದರೆ ಬಳಕೆದಾರರು ತಮ್ಮ ವರ್ಕ್‌ ಫ್ರಂ ಹೋಮ್ ಕೆಲಸಕ್ಕೆ, ಬ್ರೌಸಿಂಗ್ ಮಾಡಲು ಹಾಗೂ ಮನರಂಜನಾ ಉದ್ದೇಶಗಳಿಗಾಗಿ ಡೇಟಾವನ್ನು ಹೆಚ್ಚಾಗಿ ಅವಲಂಭಿಸಿದ್ದಾರೆ. ಅದರಂತೆ ಏರ್‌ಟೆಲ್‌ ಸಹ ಬಳಕೆದಾರರಿಗೆ ಏನು ಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದು, ಅದರಂತೆ ನಿತ್ಯವೂ 3GB ಡೇಟಾ ಸೌಲಭ್ಯ ಒದಗಿಸುತ್ತಿದೆ. ಹಾಗಿದ್ರೆ, ಬನ್ನಿ ಯಾವ ಪ್ಲ್ಯಾನ್‌ನಲ್ಲಿ ನಿತ್ಯ 3GB ಡೇಟಾ ಲಭ್ಯ ಇದೆ ಎಂದು ತಿಳಿಯೋಣ.

ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ನಿತ್ಯವೂ ಉಚಿತ 3GB ಡೇಟಾ....

ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳ ಸೇವೆ ಪಡೆದುಕೊಳ್ಳಬಹುದು. ಇದರೊಂದಿಗೆ 3GB ಡೇಟಾ ಬಳಕೆ ಮಾಡಿಕೊಳ್ಳಬಹುದು. ದೈನಂದಿನ ಡೇಟಾ ಕೋಟಾ ಮುಗಿದ ಬಳಿಕ ಇಂಟರ್ನೆಟ್‌ ವೇಗವು 64 Kbps ವರೆಗೆ ಕಡಿಮೆಯಾಗುತ್ತದೆ. ಇಷ್ಟು ಮಾತ್ರವಲ್ಲದೆ ನಿತ್ಯ 100 ಎಸ್‌ಎಮ್‌ಎಸ್‌ ಆಯ್ಕೆ ಇದ್ದು, ಇದು 28 ದಿನಗಳ ಮಾನ್ಯತೆ ಹೊಂದಿದೆ. ಇದರೊಂದಿಗೆ ಈ ಕೆಳಗಿನ ಪ್ರಯೋಜನ ಸಹ ಲಭ್ಯ.

ಅನಿಯಮಿತ 5G ಡೇಟಾ: 5G ನೆಟ್‌ವರ್ಕ್ ಕವರೇಜ್ ಲಭ್ಯವಿರುವ ಪ್ರದೇಶಗಳಲ್ಲಿ, ಬಳಕೆದಾರರು ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಅನಿಯಮಿತ 5G ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ತಡೆರಹಿತ ಮತ್ತು ವೇಗದ ಬ್ರೌಸಿಂಗ್ ಅನುಭವವನ್ನು ಪಡೆಯಬಹುದು ಹಾಗೂ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ: ಸೋನಿ ಲಿವ್, ಹೋಯ್ಚೊಯ್, ಲಯನ್ಸ್‌ಗೇಟ್ ಪ್ಲೇ, ಫ್ಯಾನ್‌ಕೋಡ್, ಎರೋಸ್ ನೌ, ಮನೋರಮಾಮ್ಯಾಕ್ಸ ಸೇರಿದಂತೆ 15 ಕ್ಕೂ ಹೆಚ್ಚು ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ ಸೇವೆ ಪಡೆಯಬಹುದು.

ಹಾಗೆಯೇ ಬಳಕೆದಾರರು ಈ ಪ್ಲ್ಯಾನ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 149 ಮೌಲ್ಯದ ಪೂರಕ ಮೂರು ತಿಂಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಲೈವ್ ಕ್ರೀಡೆಗಳು, ಸಿನಿಮಾ, ವಿಶೇಷ ಹಾಟ್‌ಸ್ಟಾರ್ ಫೀಚರ್ಸ್‌ ಮತ್ತು ಇನ್ನೂ ಹೆಚ್ಚಿನ ಸೌಲಭ್ಯ ಇದರಿಂದ ಸಿಗುತ್ತದೆ. ಹಾಗೂ ಅಪೊಲೊ 24|7 ಸರ್ಕಲ್‌ಗೆ ಮೂರು ತಿಂಗಳ ಚಂದಾದಾರಿಕೆಯನ್ನು ಸಹ ಪಡೆದುಕೊಳ್ಳಬಹುದು. ಈ ಮೂಲಕ ಗುಣಮಟ್ಟದ ವೈದ್ಯಕೀಯ ಸಹಾಯ ಪಡೆದುಕೊಳ್ಳಬಹುದು. ಮತ್ತು ವಿಂಕ್‌ ಮ್ಯೂಸಿಕ್‌ ಸೇವೆ ಸಹ ಲಭ್ಯ.

ಏರ್‌ಟೆಲ್‌ನ 699 ರೂ.ಗಳ ಪ್ಲ್ಯಾನ್‌: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ನಿತ್ಯವೂ 3GB ಡೇಟಾ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳ ಸೇವೆ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ದೈನಂದಿನ ಡೇಟಾ ಕೋಟಾವನ್ನು ಮುಗಿದ ನಂತರ 64 Kbps ವೇಗದಲ್ಲಿ ಇಂಟರ್ನೆಟ್‌ ಲಭ್ಯ ಇರುತ್ತದೆ. ಉಳಿದಂತೆ ನಿತ್ಯವೂ 100 ಎಸ್‌ಎಮ್‌ಎಸ್‌ ಆಯ್ಕೆ ಇದ್ದು, ಇದರ ಮಾನ್ಯತೆ 56 ದಿನಗಳಾಗಿದೆ. ಈ ಸೇವೆಗಳೊಂದಿಗೆ ಈ ಕೆಳಗಿನ ಪ್ರಯೋಜನ ಸಹ ಲಭ್ಯ.

ಬಳಕೆದಾರರು 5G ನೆಟ್‌ವರ್ಕ್ ಕವರೇಜ್ ಹೊಂದಿರುವ ಪ್ರದೇಶಗಳಲ್ಲಿ ಅನಿಯಮಿತ 5G ಡೇಟಾ ಸೇವೆ ಪಡೆದುಕೊಳ್ಳಬಹುದಾಗಿದ್ದು, ಈ ಮೇಲಿನ ಪ್ಲ್ಯಾನ್‌ನಲ್ಲಿ ಇರುವಂತೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ: ಸೋನಿ ಲಿವ್‌, ಲಯನ್ಸ್‌ಗೇಟ್ ಪ್ಲೇ, ಫ್ಯಾನ್‌ಕೋಡ್, ಎರೋಸ್ ನೌ, ಹೋಯ್ಚೋಯ್, ಮನೋರಮಾಮ್ಯಾಕ್ಸ್ ಸೇವೆ ಸಹ ಲಭ್ಯ. ಜೊತೆಗೆ 15ಕ್ಕೂ ಹೆಚ್ಚು ಓಟಿಟಿ ಸೇವೆ ಇದರಲ್ಲಿ ಲಭ್ಯ ಇದ್ದು, ಚಂದಾದಾರರು 56 ದಿನಗಳ ಉಚಿತ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ನಿತ್ಯವೂ ಉಚಿತ 3GB ಡೇಟಾ....

ಇದರೊಂದಿಗೆ ಈ ಪ್ಲ್ಯಾನ್‌ನಲ್ಲಿ 56 ದಿನದ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ನೀಡುತ್ತದೆ. ಈ ಪ್ಲ್ಯಾನ್‌ನಲ್ಲಿ ವಿಶೇಷ ಡೀಲ್‌ಗಳು, ಪ್ರೈಮ್ ವಿಡಿಯೋ ಕಂಟೆಂಟ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದ್ದು, ಅಪೊಲೊ 24|7 ಸರ್ಕಲ್‌ನ ಮೂರು ತಿಂಗಳ ಚಂದಾದಾರಿಕೆಯಾಗಿದೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಹೊಂದಿದೆ. ಇದಿಷ್ಟು ಮಾತ್ರವಲ್ಲದೆ ಬಳಕೆದಾರರು ತಮ್ಮ ಮೆಚ್ಚಿನ ಹಾಡುಗಳನ್ನು ಹಲೋಟ್ಯೂನ್‌ ಆಗಿ ಸೆಟ್‌ ಮಾಡಿಕೊಳ್ಳಬಹುದು.

ಇನ್ನುಳಿದಂತೆ ವಿಂಕ್ ಮ್ಯೂಸಿಕ್‌ನೊಂದಿಗೆ ಬಳಕೆದಾರರು ಅನಿಯಮಿತ ಮ್ಯೂಸಿಕ್‌ ಸೇವೆ, ಹೆಲೋಟ್ಯೂನ್‌ಗಳು, ಲೈವ್ ಕನ್ಸರ್ಟ್‌ಗಳು ಮತ್ತು ಪಾಡ್‌ಕಾಸ್ಟ್‌ಗಳ ಸೇವೆ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಉಚಿತ 2GB ಡೇಟಾ ಕೂಪನ್ ಆಯ್ಕೆ ಸಹ ಇದ್ದು, ಇದನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದೆಲ್ಲವನ್ನೂ ಒಳಗೊಂಡಂತೆ ಸಾಕಷ್ಟು ಡೇಟಾ ಮತ್ತು ವ್ಯಾಪಕ ಶ್ರೇಣಿಯ ಬಹುಮಾನಗಳನ್ನು ಸಹ ಈ ಮೂಲಕ ಪಡೆದುಕೊಳ್ಳಬಹುದು.

Best Mobiles in India

English summary
Airtel's Rs 499 and Rs 699. It offers two prepaid plans in the price, users can avail 3GB of data per day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+