Home
ಸುದ್ದಿಜಾಲ

ತಿಂಗಳಿಗೆ 60 GB ಡೇಟಾ ಬೇಕೆ? ಹಾಗಿದ್ರೆ ಏರ್‌ಟೆಲ್‌ನ ಈ ಪ್ಲ್ಯಾನ್‌ ಬೆಸ್ಟ್‌!

ಏರ್‌ಟೆಲ್ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದ್ದು, ಎರಡನೇ ಸ್ಥಾನ ಪಡೆದುಕೊಂಡಿದೆ. ಈ ನಡುವೆ ವಿವಿಧ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಹೊಸ ಹೊಸ ಗ್ರಾಹಕರನ್ನು ಸೆಳೆಯುತ್ತಿರುವ ಏರ್‌ಟೆಲ್‌ ಈಗಾಗಲೇ ಸಾಕಷ್ಟು ಚಂದಾದಾರರನ್ನು ಪಡೆದಿದೆ. ಅದರಲ್ಲೂ ಏರ್‌ಟೆಲ್‌ನ ಯೋಜನೆಗಳು ಇತರ ಕಂಪನಿಗಳ ಟೆಲಿಕಾಂ ಯೋಜನೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿವೆ ಎಂಬುದು ಗಮನಿಸಬೇಕಾದ ವಿಷಯ.

ಹೌದು, ಏರ್‌ಟೆಲ್ ತನ್ನ ಬಳಕೆದಾರರಿಗೆ ಯಾವುದೇ ಪ್ಲ್ಯಾನ್‌ನಲ್ಲಾದರೂ ಸಹ ಉತ್ತಮ ಪ್ರಯೋಜನಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ಕಾರಣಕ್ಕಾಗಿಯೇ ಏರ್‌ಟೆಲ್‌ ಸಂಬಂಧ ಬಳಕೆದಾರರು ಹೆಚ್ಚು ದೂರುವುದಿಲ್ಲ. ಅದಾಗ್ಯೂ ಇತರ ಕಂಪನಿಗಳ ಯೋಜನೆಗಳಿಗಿಂತ ಸ್ವಲ್ಪ ದುಬಾರಿ ಬೆಲೆ ಹೊಂದಿದ್ದರೂ ಸಹ ಅದಕ್ಕೆ ತಕ್ಕ ಸೌಲಭ್ಯ ನೀಡುತ್ತಿರುವುದು ಗಮನಾರ್ಹ. ಈ ನಡುವೆ ನೀವು ಏರ್‌ಟೆಲ್‌ನ ಅತ್ಯುತ್ತಮವಾದ ಈ ರೀಚಾರ್ಜ್‌ ಪ್ಲ್ಯಾನ್‌ ಬಗ್ಗೆ ತಿಳಿಯಿರಿ.

ತಿಂಗಳಿಗೆ 60 GB ಡೇಟಾ ಬೇಕೆ? ಹಾಗಿದ್ರೆ ಏರ್‌ಟೆಲ್‌ನ ಈ ಪ್ಲ್ಯಾನ್‌ ಬೆಸ್ಟ್‌!

ಏರ್‌ಟೆಲ್‌ನ 509 ರೂ.ಗಳ ಪ್ಲ್ಯಾನ್‌: ಬಳಕೆದಾರರು ಈಗಾಗಲೇ ಸಾಕಷ್ಟು ಪ್ಲ್ಯಾನ್‌ಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅದರಲ್ಲೂ ಲಭ್ಯವಿರುವ ಅತ್ಯುತ್ತಮ ಸೇವೆಯ ಬೆಲೆಯನ್ನು ಪರಿಗಣಿಸಿ ಯಾವುದೇ ಹಿಂಜರಿಕೆಯಿಲ್ಲದೆ ಏರ್‌ಟೆಲ್‌ನ ಪ್ರೀಮಿಯಂ ಯೋಜನೆಗಳನ್ನು ಆಯ್ಕೆ ಮಾಡುವವರು ಅನೇಕರಿದ್ದಾರೆ. ಅವರಿಗಾಗಿಯೇ ಈ 509 ರೂ.ಗಳ ವಿಶೇಷ ಪ್ಲ್ಯಾನ್‌ ಭಾರೀ ಅನುಕೂಲ ನೀಡಲಿದೆ. ಹಾಗೆಯೇ ಟೆಲಿಕಾಂ ಅಗತ್ಯಗಳನ್ನು ಪೂರೈಸುವ ಅತ್ಯುತ್ತಮ ಏರ್‌ಟೆಲ್ ಪ್ಲ್ಯಾನ್‌ಗಳಲ್ಲಿ ಇದೂ ಸಹ ಪ್ರಮುಖವಾಗಿದೆ.

ಸಾಮಾನ್ಯವಾಗಿ ಒಂದು ತಿಂಗಳಿಗೆ ಯಾಕೆ 500 ರೂ.ಗಿಂತ ಹೆಚ್ಚು ಖರ್ಚು ಮಾಡಬೇಕು ಎಂಬ ಆಲೋಚನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಆದರೆ, ಇತರೆ ಅಗ್ಗದ ಪ್ಲ್ಯಾನ್‌ಗಿಂತ ಈ ಪ್ಲ್ಯಾನ್‌ನಲ್ಲಿ ಉತ್ತಮ ಡೇಟಾ ಹಾಗೂ ಇತರೆ ಪ್ರಯೋಜನಗಳು ಲಭ್ಯ ಇದ್ದು, ಅದಾಗ್ಯೂ ಇಷ್ಟು ಮೊತ್ತ ಜಾಸ್ತಿ ಆಯ್ತು ಎಂದಾದರೆ ನೀವು ಅಗ್ಗದ ಪ್ಲ್ಯಾನ್‌ಗಳ ಕಡೆ ಕೂಡ ಗಮನಹರಿಸಬಹದು. ಇನ್ನು ಆಸಕ್ತಿ ಇರುವವರು ಮಾತ್ರ ಹೆಚ್ಚಿನ ದರದ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ತಿಂಗಳಿಗೆ 60 GB ಡೇಟಾ ಬೇಕೆ? ಹಾಗಿದ್ರೆ ಏರ್‌ಟೆಲ್‌ನ ಈ ಪ್ಲ್ಯಾನ್‌ ಬೆಸ್ಟ್‌!

ಈ ಪ್ಲ್ಯಾನ್‌ನಲ್ಲಿ ಏನೆಲ್ಲಾ ಸೌಲಭ್ಯ ಲಭ್ಯ: ಏರ್‌ಟೆಲ್ 509 ರೂ.ಗಳ ಪ್ಲ್ಯಾನ್‌ ಒಂದು ತಿಂಗಳ ಮಾನ್ಯತೆ ಹೊಂದಿದ್ದು, ಇದರಲ್ಲಿ 60 GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅಂದರೆ ದಿನಕ್ಕೆ 2GB ಬಳಕೆ ಮಾಡಬಹುದು. ಇನ್ನು ಇದರ ಮಾನ್ಯತೆ ಅವಧಿ 30 ದಿನಗಳು. ಇದರೊಂದಿಗೆ ಅನಿಯಮಿತ ವಾಯಿಸ್‌ ಕಾಲ್‌ ಸೇವೆ ಹಾಗೂ 300 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದು.

ಈ ಪ್ಲ್ಯಾನ್‌ನಲ್ಲಿ ಮತ್ತೊಂದು ವಿಶೇಷ ಸೌಲಭ್ಯ ಎಂದರೆ ಅನಿಯಮಿತ 5G ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ನೀವು ಈ ಸೇವೆ ಪಡೆದುಕೊಳ್ಳಬೇಕು ಎಂದಾದರೆ ಏರ್‌ಟೆಲ್‌ನ 5G ಕವರೇಜ್ ಪ್ರದೇಶದಲ್ಲಿ ವಾಸ ಇರಬೇಕಾಗುತ್ತದೆ. ಇಷ್ಟೆಲ್ಲಾ ಪ್ರಯೋಜನಗಳ ಜೊತೆಗೆ ಕೆಲವು ಇತರೆ ವಿಭಾಗಗಳಿಗೆ ಉಚಿತ ಎಂಟ್ರಿ ಈ ಪ್ಲ್ಯಾನ್‌ನಲ್ಲಿ ಸಿಗಲಿದೆ. ಈ ಮೂಲಕ ಕರೆ ಹಾಗೂ ಇಂಟರ್ನೆಟ್‌ ಸೇವೆಯೊಂದಿಗೆ ಈ ಸೇವೆಯನ್ನೂ ಪಡೆಯಬಹುದು.

ಮುಖ್ಯವಾಗಿ ಬಳಕೆದಾರರು ಅಪೊಲೊ 24/7 ಸರ್ಕಲ್‌, ಉಚಿತ ಹಲೋ ಟ್ಯೂನ್ ಮತ್ತು ವಿಂಕ್‌ ಮ್ಯೂಸಿಕ್‌ ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಆದರೆ, ಈ ಪ್ಲಾನ್‌ನಲ್ಲಿ ಏರ್‌ಟೆಲ್ ಯಾವುದೇ ಓವರ್-ದಿ-ಟಾಪ್ (OTT) ಪ್ರಯೋಜನಗಳನ್ನು ಒದಗಿಸಿಲ್ಲ ಎಂಬ ವಿಷಯ ಖಂಡಿತಾ ಬಳಕೆದಾರರಿಗೆ ಬೇಸರ ಉಂಟುಮಾಡಬಹುದು.

ತಿಂಗಳಿಗೆ 60 GB ಡೇಟಾ ಬೇಕೆ? ಹಾಗಿದ್ರೆ ಏರ್‌ಟೆಲ್‌ನ ಈ ಪ್ಲ್ಯಾನ್‌ ಬೆಸ್ಟ್‌!

ಏರ್‌ಟೆಲ್ ಮತ್ತೊಂದು ಈ 509 ರೂ.ಗಳ ಪ್ಲ್ಯಾನ್‌ಗೆ ಸಮಾನವಾದ ಪ್ರಯೋಜನಗಳನ್ನು 489 ರೂ.ಗಳ ಪ್ಲ್ಯಾನ್‌ನಲ್ಲೂ ನೀಡುತ್ತದೆ. ಅಂದರೆ ಈ ಯೋಜನೆಯಲ್ಲಿ ಅನಿಯಮಿತ ವಾಯಿಸ್‌ ಕಾಲ್‌ ಸೌಲಭ್ಯ ಹಾಗೂ 300 ಎಸ್‌ಎಮ್‌ಎಸ್‌ ಪ್ರಯೋಜನ ನೀಡಲಾಗಿದ್ದು, 30 ದಿನಗಳ ಮಾನ್ಯತೆಯೊಂದಿಗೆ ಬಳಕೆದಾರರು ಒಟ್ಟು 50 GB ಡೇಟಾದ ಸೌಲಭ್ಯ ಬಳಸಿಕೊಳ್ಳಬಹುದು.

Best Mobiles in India

English summary
Airtel Rs 509 plan allows users to get more data and is valid for one month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+