Home
ಸುದ್ದಿಜಾಲ

ಏರ್‌ಟೆಲ್‌ನ ಈ ಅಗ್ಗದ ಪ್ಲ್ಯಾನ್‌ ಮುಂದೆ ಜಿಯೋದ 199ರೂ. ಪ್ಲ್ಯಾನ್‌ ಠುಸ್‌!

ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಭರದಲ್ಲಿ ಆಕರ್ಷಕ ಯೋಜನೆಗಳನ್ನು ನೀಡುತ್ತ ಮುಂದೆ ಸಾಗಿವೆ. ಆ ಪೈಕಿ ಸದ್ಯ ಜಿಯೋ ಟೆಲಿಕಾಂ ಮುಂಚೂಣಿಯ ಟೆಲಿಕಾಂ ಆಗಿ ಗುರುತಿಸಿಕೊಂಡಿದೆ. ಎರಡನೇ ದೊಡ್ಡ ಟೆಲಿಕಾಂ ಪೂರೈಕೆದಾರ ಸಂಸ್ಥೆಯಾಗಿ ಭಾರ್ತಿ ಏರ್‌ಟೆಲ್‌ ಸಾಗಿದೆ. ಆದ್ರೆ ಅಗ್ಗದ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಏರ್‌ಟೆಲ್‌ ಈ ಒಂದು ಪ್ಲ್ಯಾನ್‌ ಜಿಯೋ ಟೆಲಿಕಾಂಗೆ ಟಾಂಗ್ ನೀಡುವಂತಿದೆ.

ಏರ್‌ಟೆಲ್‌ನ ಈ ಅಗ್ಗದ ಪ್ಲ್ಯಾನ್‌ ಮುಂದೆ ಜಿಯೋದ 199ರೂ. ಪ್ಲ್ಯಾನ್‌ ಠುಸ್‌!

ಹೌದು, ಏರ್‌ಟೆಲ್ ಟೆಲಿಕಾಂ ಭಿನ್ನ ದರ ಶ್ರೇಣಿಯ ಪ್ರೀಪೇಯ್ಡ್‌ ಯೋಜನೆಯು ಲಿಸ್ಟ್‌ ಒಳಗೊಂಡಿದೆ. ಅವುಗಳಲ್ಲಿ 199ರೂ. ರೀಚಾರ್ಜ್‌ ಪ್ಲ್ಯಾನ್ ಅಗ್ಗದ ಬೆಲೆಯಲ್ಲಿ ಉತ್ತಮ ಪ್ಲ್ಯಾನ್‌ ಎನ್ನವಂತಿದೆ. ಈ ಯೋಜನೆಯು ಡೇಟಾ, ವಾಯಿಸ್‌ ಕರೆಯ ಹಾಗೂ ಆಕರ್ಷಕ ವ್ಯಾಲಿಡಿಟಿ ಪ್ರಯೋಜನಗಳನ್ನು ಒಳಗೊಂಡಿದೆ. ಇನ್ನು ಬೆಲೆಯಲ್ಲಿ ಲಭ್ಯವಿರುವ ಜಿಯೋ ಟೆಲಿಕಾಂನ ಪ್ರೀಪೇಯ್ಡ್‌ ಪ್ಲ್ಯಾನ್‌, ಏರ್‌ಟೆಲ್‌ನ 199ರೂ. ಗಿಂತ ಹೆಚ್ಚು ಆಕರ್ಷಕ ಎನಿಸದು. ಹಾಗಾದರೇ ಏರ್‌ಟೆಲ್‌ನ 199ರೂ. ಮತ್ತು ಜಿಯೋದ 199ರೂ. ರೀಚಾರ್ಜ್‌ ಪ್ಲ್ಯಾನ್‌ಗಳ ನಡುವಿನ ಭಿನ್ನತೆಗಳೇನು? ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಭಾರ್ತಿ ಏರ್‌ಟೆಲ್‌ ಟೆಲಿಕಾಂನ 199ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ ನೂತನ 199ರೂ. ಪ್ರಿಪೇಯ್ಡ್‌ ಪ್ಲಾನ್‌ 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 3 GB ಡೇಟಾ ಪ್ರಯೋಜನ ದೊರೆಯಲಿದೆ. ಇದಲ್ಲದೆ ಅನಿಯಮಿತ ವಾಯಿಸ್‌ ಕರೆ ಹಾಗೂ ದೈನಂದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಸುಮಾರು ಒಂದು ತಿಂಗಳ ವ್ಯಾಲಿಡಿಟಿಯನ್ನು ಬಯಸುವ ಬಳಕೆದಾರರಿಗಾಗಿ ಈ ಯೋಜನೆ ಸೂಕ್ತ ಎನಿಸಲಿದೆ. ಜೊತೆಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮತ್ತು ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನ ಹೆಚ್ಚುವರಿ ಪ್ರಯೋಜನಗಳನ್ನು ಸಹ ಹೊಂದಿದೆ.

ಏರ್‌ಟೆಲ್‌ನ ಈ ಅಗ್ಗದ ಪ್ಲ್ಯಾನ್‌ ಮುಂದೆ ಜಿಯೋದ 199ರೂ. ಪ್ಲ್ಯಾನ್‌ ಠುಸ್‌!

ಜಿಯೋದ 199ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

ರಿಲಾಯನ್ಸ್‌ ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 23 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5 GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 34.5 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದೆ. ಹಾಗೆಯೇ ಜಿಯೋ ಸಿನಿಮಾ, ಜಿಯೋ ಟೆಲಿಕಾಂನ ಇತರೆ ಆಪ್ಸ್‌ ಲಭ್ಯವಾಗಲಿವೆ.

ಏರ್‌ಟೆಲ್‌ನ ಈ ಅಗ್ಗದ ಪ್ಲ್ಯಾನ್‌ ಮುಂದೆ ಜಿಯೋದ 199ರೂ. ಪ್ಲ್ಯಾನ್‌ ಠುಸ್‌!

ಎರಡು ಪ್ಲ್ಯಾನ್‌ಗಳ ನಡುವೆ ಏನು ವ್ಯತ್ಯಾಸ ಇದೆ?

ರಿಲಯನ್ಸ್‌ ಜಿಯೋ ಹಾಗೂ ಭಾರ್ತಿ ಏರ್‌ಟೆಲ್‌ ಸಂಸ್ಥೆಗಳ ಬಹುತೇಕ ಯೋಜನೆಗಳಲ್ಲಿ ಒಂದಕ್ಕೊಂದು ಸಾಮ್ಯತೆ ಕಾಣಿಸುತ್ತವೆ. ಹಾಗೆಯೇ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂನ 199 ರೂ. ಬೆಲೆಯ ಪ್ರೀಪೇಯ್ಡ್‌ ಯೋಜನೆ ಒಂದೇ ರೀತಿ ಎನಿಸಿದರೂ, ಕೆಲವು ಭಿನ್ನ ಪ್ರಯೋಜನಗಳು ಕಾಣಿಸುತ್ತವೆ. ಸದ್ಯ 199ರೂ. ಅಗ್ಗದ ಬೆಲೆಯ ರೀಚಾರ್ಜ್‌ ಯೋಜನೆಯಲ್ಲಿ ಎರಡು ಟೆಲಿಕಾಂಗಳು ಡೇಟಾ ಪ್ರಯೋಜನ ಹೊಂದಿವೆ. ಎಸ್‌ಎಮ್‌ಎಸ್‌ ಸೌಲಭ್ಯ ನೀಡಿವೆ. ಆದರೆ ವ್ಯಾಲಿಡಿಟಿ ಹಾಗೂ ಡೇಟಾ ಪ್ರಯೋಜನಗಳಲ್ಲಿ ಭಿನ್ನತೆ ಕಾಣಬಹುದಾಗಿದೆ.

ಏರ್‌ಟೆಲ್‌ನ ಈ ಅಗ್ಗದ ಪ್ಲ್ಯಾನ್‌ ಮುಂದೆ ಜಿಯೋದ 199ರೂ. ಪ್ಲ್ಯಾನ್‌ ಠುಸ್‌!

ರೀಚಾರ್ಜ್‌ ಮಾಡಿಸಲು ಏರ್‌ಟೆಲ್‌ ಪ್ಲ್ಯಾನ್‌ ಬೆಸ್ಟ್

199ರೂ. ಬೆಲೆಯ ರೀಚಾರ್ಜ್‌ ಯೋಜನೆಯಲ್ಲಿ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ ಟೆಲಿಕಾಂಗಳು ಉತ್ತಮ ಪ್ರಯೋಜನ ನೀಡಿವೆ. ದೈನಂದಿನ ಡೇಟಾ ಪ್ರಯೋಜನ ಬಯಸುವ ಗ್ರಾಹಕರಿಗೆ ಜಿಯೋದ 199ರೂ. ಪ್ಲ್ಯಾನ್ ಆಯ್ಕೆ ಸರಿ ಎನಿಸಬಹುದು. ಆದರೆ ನಿಗದಿತ ಡೇಟಾ ಜೊತೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಏರ್‌ಟೆಲ್‌ ಟೆಲಿಕಾಂನ 199 ರೂ. ಪ್ಲ್ಯಾನ್ ಖಂಡಿತಾ ಬೆಸ್ಟ್‌ ಎನಿಸುತ್ತದೆ. ಏಕೆಂದರೆ ಏರ್‌ಟೆಲ್‌ 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಆದರೆ ಜಿಯೋ ಯೋಜನೆಯು 23 ದಿನಗಳ ವ್ಯಾಲಿಡಿಟಿ ಪಡೆದಿದೆ.

Best Mobiles in India

English summary
Airtel's Rs 199 plan offers a total of 3GB of data and 30 days validity. Read More Details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+