Home
ಸುದ್ದಿಜಾಲ

Airtel Recharge Plan: 200ರೂ.ಒಳಗೆ ಇರುವ ಏರ್‌ಟೆಲ್‌ನ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಇಷ್ಟೆಲ್ಲಾ ಸೌಲಭ್ಯ!

ಏರ್‌ಟೆಲ್ (Airtel) ಈಗಾಗಲೇ ಬಳಕೆದಾರರಿಗೆ ಹಲವಾರು ಸೌಲಭ್ಯ ಇರುವ ವಿವಿಧ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ರೀಚಾರ್ಜ್‌ ಮಾಡಿಸಿಕೊಳ್ಳುತ್ತಿದ್ದು. ಈ ನಡುವೆ 200ರೂ.ಗಳ ಒಳಗೆ ಅಥವಾ ಈ ಬೆಲೆಯ ಆಸುಪಾಸಿನಲ್ಲಿ ಲಭ್ಯ ಇರುವ ಪ್ರಿಪೇಯ್ಡ್ ಪ್ಲ್ಯಾನ್‌ಗಳಿಗೆ ಭಾರೀ ಬೇಡಿಕೆ ಇದೆ.

ಹೌದು, ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‌ಟೆಲ್‌ ಹಲವಾರು ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದ್ದು, ಈ ನಡುವೆ 200ರೂ.ಗಳ ಒಳಗೆ ಇರುವ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಅನಿಯಮಿತ ಕರೆ, ಡೇಟಾ ಮತ್ತು ಇತರ ಪ್ರಯೋಜನಗಳನ್ನು ನೀಡುತ್ತದೆ. ಹಾಗಿದ್ರೆ, ನೀವು ಬಜೆಟ್ ಬೆಲೆಯ ರೀಚಾರ್ಜ್ ಪ್ಲ್ಯಾನ್‌ ಅನ್ನು ಹುಡುಕುತ್ತಿದ್ದರೆ ಅಥವಾ ಏರ್‌ಟೆಲ್ ಅನ್ನು ದ್ವಿತೀಯ ಸಂಖ್ಯೆಯಾಗಿ ಬಳಸುತ್ತಿದ್ದರೆ ಇಲ್ಲಿವೆ ನೋಡಿ ಪ್ರಮುಖ ರೀಚಾರ್ಜ್‌ ಪ್ಲ್ಯಾನ್.

200ರೂ.ಒಳಗೆ ಇರುವ ಏರ್‌ಟೆಲ್‌ನ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಇಷ್ಟೆಲ್ಲಾ ಸೌಲಭ್ಯ!

ಏರ್‌ಟೆಲ್ ತನ್ನ ಕನಿಷ್ಠ ರೀಚಾರ್ಜ್ ಪ್ಲ್ಯಾನ್‌ ಅನ್ನು ಇತ್ತೀಚೆಗಷ್ಟೇ ಪರಿಷ್ಕರಿಸಿದ್ದು, ಈಗ ಇದರ ಬೆಲೆ 99ರೂ.ಗಳ ಬದಲಿಗೆ 155ರೂ.ಗಳಾಗಿದೆ. ಈ ನಡುವೆ ಏರ್‌ಟೆಲ್ 239ರೂ. ಮತ್ತು ಅದಕ್ಕಿಂತ ಹೆಚ್ಚಿನ ಪ್ರಿಪೇಯ್ಡ್ ಪ್ಲ್ಯಾನ್‌ಗಳೊಂದಿಗೆ 5G ಪ್ರವೇಶವನ್ನು ನೀಡುತ್ತಿದ್ದು, ಈ ಮೂಲಕ ಬಳಕೆದಾರರು ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ 200ರೂ.ಗಳ ಒಳಗೆ ಇರುವ ಪ್ಲ್ಯಾನ್‌ಗಳ ಬಗ್ಗೆ ತಿಳಿಯೋಣ.

ಏರ್‌ಟೆಲ್‌ನ 155ರೂ.ಗಳ ಪ್ಲ್ಯಾನ್‌: ಈ ಹಿಂದೆ ಏರ್‌ಟೆಲ್‌ನ ಅತ್ಯಂತ ಕಡಿಮೆ ರೀಚಾರ್ಜ್ ಪ್ಲ್ಯಾನ್‌ ಬೆಲೆ 99 ಆಗಿತ್ತು. ಆದಾಗ್ಯೂ, ಟೆಲಿಕಾಂ ಆಪರೇಟರ್ ಹಲವಾರು ವಲಯಗಳಿಂದ ಈ ಯೋಜನೆಯನ್ನು ರದ್ದುಗೊಳಿಸಿದ್ದು, 56 ರಷ್ಟು ಬೆಲೆಯನ್ನು ಹೆಚ್ಚಿಗೆ ಮಾಡುವ ಮೂಲಕ 155ರೂ.ಗಳ ಪ್ಲ್ಯಾನ್ ಘೋಷಣೆ ಮಾಡಿದೆ. ಈ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆ 24 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ, 300 ಎಸ್‌ಎಮ್‌ಎಸ್‌ ಮತ್ತು ಒಟ್ಟು 1GB ಡೇಟಾವನ್ನು ನೀಡುತ್ತದೆ. ಇದರೊಂದಿಗೆ ಹಲೋ ಟ್ಯೂನ್ಸ್ ಮತ್ತು ವಿಂಕ್‌ಗೆ ಪ್ರವೇಶ ನೀಡುತ್ತದೆ.

200ರೂ.ಒಳಗೆ ಇರುವ ಏರ್‌ಟೆಲ್‌ನ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಇಷ್ಟೆಲ್ಲಾ ಸೌಲಭ್ಯ!

ಏರ್‌ಟೆಲ್‌ನ 179ರೂ.ಗಳ ಪ್ಲ್ಯಾನ್‌: ಈ ರೀಚಾರ್ಜ್ ಪ್ಲ್ಯಾನ್‌ 28 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಇದರಲ್ಲಿ ಬಳಕೆದಾರರು ಅನಿಯಮಿತ ವಾಯಿಸ್‌ ಕಾಲ್‌, 300 ಎಸ್‌ಎಮ್‌ಎಸ್‌ ಮತ್ತು ಒಟ್ಟು 2GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಹೆಚ್ಚುವರಿ ಪ್ರಯೋಜನಗಳಾದ ಉಚಿತ ಹಲೋಟ್ಯೂನ್‌ ಮತ್ತು ವಿಂಗ್ ಮ್ಯೂಸಿಕ್‌ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌ನ 199ರೂ.ಗಳ ಪ್ಲ್ಯಾನ್‌: ಈ ವಿಶೇಷ ಪ್ಲ್ಯಾನ್‌ 30 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದ್ದು, ಎಸ್‌ಟಿಡಿ ಮತ್ತು ರೋಮಿಂಗ್ ನೆಟ್‌ವರ್ಕ್ ಹಾಗೂ 300 ಎಸ್‌ಎಂಎಸ್‌ ನೊಂದಿಗೆ ಅನಿಯಮಿತ ವಾಯಿಕ್‌ ಕರೆ ಸೌಲಭ್ಯ ಸಿಗುತ್ತದೆ. ಜೊತೆಗೆ ಒಟ್ಟು 3GB ಡೇಟಾ ಪ್ರಯೋಜನ ಸಹ ಈ ಪ್ಲ್ಯಾನ್‌ನಲ್ಲಿದ್ದು, ಉಳಿದಂತೆ ವಿಂಕ್ ಮತ್ತು ಹಲೋ ಟ್ಯೂನ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.

ಏರ್‌ಟೆಲ್‌ನ 209ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ ಬಜೆಟ್‌ಗಿಂತ ಸ್ವಲ್ಪ ಹೆಚ್ಚಾಗಿದೆ ಅಷ್ಟೇ. ಆದರೆ ನೀವು ದೈನಂದಿನ ಡೇಟಾ ಪ್ರಯೋಜನ ಬೇಕು ಎಂದರೆ ಇದು ಉತ್ತಮ ಪ್ಲ್ಯಾನ್‌ ಆಗಿದೆ. ಯಾಕೆಂದರೆ ಈ ಪ್ಲ್ಯಾನ್‌ನಲ್ಲಿ 1GB ದೈನಂದಿನ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಮ್‌ಎಸ್‌ ಮತ್ತು 21 ದಿನಗಳವರೆಗೆ ಹಲೋ ಟ್ಯೂನ್‌ ಮತ್ತು ವಿಂಕ್‌ ಮ್ಯೂಸಿಕ್‌ ಪ್ರಯೋಜನ ಸಿಗಲಿದೆ.

ಇನ್ನೂ ಜಿಯೋದಲ್ಲೂ ಸಹ 200ರೂ.ಗಳ ಒಳಗೆ ಅತ್ಯುತ್ತಮ ರೀಚಾರ್ಜ್‌ ಪ್ಲ್ಯಾನ್‌ ಆಯ್ಕೆ ಇದ್ದು, ಅದರಲ್ಲಿ199ರೂ.ಗಳ ಪ್ಲ್ಯಾನ್‌ ಹೆಚ್ಚು ಗಮನಸೆಳೆಯುತ್ತದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 23 ದಿನಗಳ ಮಾನ್ಯತೆಯೊಂದಿಗೆ ನಿತ್ಯವೂ 1.5 GB ಡೇಟಾ ಸೌಲಭ್ಯ ಪಡೆದುಕೊಳ್ಳಬಹುದು.ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಹಾಗೂ ಮೆಸೆಜ್‌ ಆಯ್ಕೆ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ, ಜಿಯೋ ಕ್ಲೌಡ್ ಸೇವೆ ಪಡೆದುಕೊಳ್ಳಬಹುದು.

200ರೂ.ಒಳಗೆ ಇರುವ ಏರ್‌ಟೆಲ್‌ನ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಇಷ್ಟೆಲ್ಲಾ ಸೌಲಭ್ಯ!

ಹಾಗೆಯೇ ಮತ್ತೊಂದು ಪ್ಲ್ಯಾನ್‌ ಆಗಿರುವ 119 ರೂ.ಗಳಲ್ಲಿ ಬಳಕೆದಾರರು 14 ದಿನಗಳ ಮಾನ್ಯತೆಯೊಂದಿಗೆ ಒಟ್ಟು 21GB ಡೇಟಾ ಲಭ್ಯ ಆಗಲಿದೆ. ಅಂದರೆ ನಿತ್ಯವೂ ನೀವು 1.5 GB ಬಳಕೆ ಮಾಡಬಹುದು. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ ಹಾಗೂ 300 ಎಸ್‌ಎಮ್‌ಎಸ್‌ ಪ್ರಯೋಜನ ನೀಡಲಾಗಿದೆ. ಇನ್ನುಳಿದಂತೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ, ಜಿಯೋ ಕ್ಲೌಡ್ ಸೌಲಭ್ಯ ಸಹ ಲಭ್ಯ.

Best Mobiles in India

English summary
Airtel one of the leading telecom companies, has been introducing several recharge plans, including unlimited calling, data and other benefits in a recharge plan under Rs 200.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+