ಏರ್‌ಟೆಲ್‌ ಆಪ್‌ ಮೂಲಕ ಕೇವಲ 1 ರೂ.ಗೆ ಚಿನ್ನ ಖರೀದಿಸಬಹುದು!

|

ಪ್ರಸ್ತುತ ಹಬ್ಬದ ಅಂಗವಾಗಿ ನೀವೇನಾದರೂ ಬಂಗಾರ ಖರೀದಿಗೆ ಮಾಡಲು ಬಯಸಿದರೇ, ಅದಕ್ಕೆ ಏರ್‌ಟೆಲ್‌ ಸೂಕ್ತ ವ್ಯವಸ್ಥೆ ಮಾಡಿದೆ. ಭಾರತಿ ಏರ್‌ಟೆಲ್‌ನ ಅಂಗಸಂಸ್ಥೆಯಾದ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್, ಬಳಕೆದಾರರು ನೇರವಾಗಿ ಡಿಜಿಟಲ್ ಗೋಲ್ಡ್‌ ಅನ್ನು ಕಂಪನಿಯ 'ಏರ್‌ಟೆಲ್ ಥ್ಯಾಂಕ್ಸ್' ಮೊಬೈಲ್ ಆಪ್‌ ಮೂಲಕ ಖರೀದಿಸಬಹುದು ಎಂದು ಘೋಷಿಸಿತ್ತು. ಈ ಹಬ್ಬದ ಪ್ರಯುಕ್ತ ನೀವೆನಾದರೂ ಚಿನ್ನ ಖರೀದಿ ಮಾಡಲು ಬಯಸಿದರೇ, ಏರ್‌ಟೆಲ್ ಥ್ಯಾಂಕ್ಸ್ ಆಪ್ ಉತ್ತಮ.

ಪಾಲುದಾರಿಕೆಯಲ್ಲಿ

ಹೌದು, ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್ ಈ ಹಿಂದೆ 'ಡಿಜಿಗೋಲ್ಡ್' ಆರಂಭಿಸುವುದಾಗಿ ಘೋಷಿಸಿತ್ತು. ನಂತರ ಡಿಜಿಟಲ್ ಗೋಲ್ಡ್‌ನ ಪ್ರಮುಖ ಪೂರೈಕೆದಾರ 'ಸೇಫ್‌ಗೋಲ್ಡ್' ಜೊತೆ ಪಾಲುದಾರಿಕೆಯಲ್ಲಿ ಕಂಪನಿಯು 'ಡಿಜಿಗೋಲ್ಡ್' ಅನ್ನು ಆರಂಭಿಸಿತ್ತು. ಈ ಡಿಜಿಗೋಲ್ಡ್ ಸಹಾಯದಿಂದ, ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು 24K ಡಿಜಿಟಲ್ ಚಿನ್ನದಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಅರ್ಹ ಗ್ರಾಹಕರು ಚಿನ್ನದ ಹೂಡಿಕೆ ಮಾಡಲು ನಿಗದಿತ ಕನಿಷ್ಠ ಮೊತ್ತವನ್ನು ನೀಡುವ ಬಗ್ಗೆ ಚಿಂತಿಸಬೇಕಾಗಿಲ್ಲ. ಬರೀ 1ರೂ, ಬೆಲೆಯ ಮೊತ್ತಕ್ಕೂ ಚಿನ್ನ ಖರೀದಿಸಬಹುದು.

ಮಾಡಲು

ಆದರೆ ಗ್ರಾಹಕರು ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೇ, ಉಳಿತಾಯ ಖಾತೆ ಹೊಂದಿರುವ ಏರ್‌ಟೆಲ್ ಪಾವತಿ ಬ್ಯಾಂಕ್ ಗ್ರಾಹಕರು ಡಿಜಿಗೋಲ್ಡ್‌ನಲ್ಲಿ ಮಾತ್ರ ಹೂಡಿಕೆ ಮಾಡಬಹುದು. ಹೂಡಿಕೆ ಮಾಡಲು ಅರ್ಹತೆ ಹೊಂದಿರುವ ಜನರು ತಮ್ಮ ಹೂಡಿಕೆಯನ್ನು ಮಾಡಲು ಕಂಪನಿಗೆ ನಿಗದಿತ ಕನಿಷ್ಠ ಮೊತ್ತವನ್ನು ನೀಡುವ ಬಗ್ಗೆ ಚಿಂತಿಸಬೇಕಾಗಿಲ್ಲ. ಕಂಪನಿಯು ಗ್ರಾಹಕರಿಗೆ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಶುದ್ಧ ಚಿನ್ನವನ್ನು ಮಾತ್ರ ನೀಡುವುದಾಗಿ ಭರವಸೆ ನೀಡಿದೆ.

ಪೇಮೆಂಟ್‌

ಏರ್‌ಟೆಲ್‌ ಆಪ್‌ನಲ್ಲಿ ಗ್ರಾಹಕರ ಚಿನ್ನವನ್ನು ಸುರಕ್ಷಿತವಾಗಿಡಲು ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಈ ಹಬ್ಬದ ಸಂದರ್ಭದಲ್ಲಿ ನೀವೇನಾದರೂ 24K ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಮಾಡಿ.

ಏರ್‌ಟೆಲ್‌ ಟೆಲಿಕಾಂನ ಕೆಲವು ಅಗ್ಗದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಲಿಸ್ಟ್‌ ಇಲ್ಲಿದೆ

ಏರ್‌ಟೆಲ್‌ ಟೆಲಿಕಾಂನ ಕೆಲವು ಅಗ್ಗದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಲಿಸ್ಟ್‌ ಇಲ್ಲಿದೆ

ಏರ್‌ಟೆಲ್‌ 149ರೂ. ಪ್ರೀಪೇಡ್‌ ಯೋಜನೆ
ಏರ್‌ಟೆಲ್‌ನ 149ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ದೀರ್ಘಾವಧಿಯ ವ್ಯಾಲಿಡಿಟಿ ಪಡೆದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 28 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಒಟ್ಟಾರೇ 2GB ಡೇಟಾ ಹಾಗೂ ಒಟ್ಟಾರೇ 300 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ವಾಯಿಸ್‌ ಕರೆಯ ಸೌಲಭ್ಯ ಹಾಗೂ ಹೆಚ್ಚುವರಿಯಾಗಿ ಡಿಸ್ನಿ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಸಹ ಲಭ್ಯವಾಗಲಿದೆ.

ಏರ್‌ಟೆಲ್ 169ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್ 169ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್ 169ರೂ. ಪ್ರಿಪೇಯ್ಡ್ ಯೋಜನೆಯು ಸ್ವಲ್ಪ ಭಿನ್ನವಾಗಿದೆ. ಈ ಯೋಜನೆಯು ದಿನಕ್ಕೆ 1 ಜಿಬಿ ಡೇಟಾವನ್ನು ಚಂದಾದಾರರಿಗೆ ನೀಡುತ್ತದೆ. ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಅಲ್ಲದೆ, ಚಂದಾದಾರರಿಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಸೌಲಭ್ಯವನ್ನು ನೀಡುತ್ತದೆ ಜೊತೆಗೆ ಏರ್‌ಟೆಲ್‌ನ ವಿಂಕ್ ಮ್ಯೂಸಿಕ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಸಹ ದೊರೆಯುತ್ತವೆ.

ಏರ್‌ಟೆಲ್‌ 199ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 199ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ನ 199ರೂ. ಪ್ರಿಪೇಯ್ಡ್ ಯೋಜನೆಯು ಸಹ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ, 100 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಲಭ್ಯವಾಗಲಿದೆ. ಆದರೆ ಈ ಯೋಜನೆಯು ಇದೀಗ ಪರಿಷ್ಕರಣೆ ಆಗಿದ್ದು, ಕೆಲವು ಚಂದಾದಾರರಿಗೆ ಈ ಯೋಜನೆಯಲ್ಲಿ 1.5GB ಡೇಟಾ ಪ್ರಯೋಜನದ ಆಯ್ಕೆ ಇದೆ.

ಏರ್‌ಟೆಲ್‌ 219ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 219ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ನ 219ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ವೆಂಕ್ ಮ್ಯೂಸಿಕ್ ಹಾಗೂ ಹೆಲೊ ಟ್ಯೂನ್ ಸೇವೆ ಲಭ್ಯ.

Best Mobiles in India

English summary
Airtel Payments Bank Let Users to Invest in Gold For Just Rs 1.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X