Home
ಸುದ್ದಿಜಾಲ

Airtel & Noise: ಇನ್ಮುಂದೆ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಸ್ಮಾರ್ಟ್‌ವಾಚ್‌ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್‌..

ಏರ್‌ಟೆಲ್‌(Airtel) ಕೇವಲ ಟೆಲಿಕಾಂ ಸೇವೆ ನೀಡಲಷ್ಟೇ ಅಲ್ಲದೆ ಇತರೆ ವಿಭಾಗದಲ್ಲೂ ಸಹ ಕೆಲಸ ಮಾಡುತ್ತಿದೆ. ಹಾಗೆಯೇ ನಾಯ್ಸ್‌ ಸಹ ಕೇವಲ ಸಾಮಾನ್ಯ ಬಳಕೆಯ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡುವುದರ ಬದಲಾಗಿ ವಿಶೇಷ ಫೀಚರ್ಸ್‌ ಇರುವ ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬಂದಿದೆ. ಅದರಂತೆ ಇವುಗಳ ಸಂಯೋಜನೆಯಿಂದ ಈಗ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಸ್ಮಾರ್ಟ್‌ವಾಚ್ (Airtel Payment Bank Smartwatch) ಘೋಷಣೆ ಆಗಿದೆ.

ಹೌದು, ಈ ಸ್ಮಾರ್ಟ್‌ವಾಚ್‌ ಕೇವಲ ಸ್ಮಾರ್ಟ್‌ವಾಚ್‌ ಅಲ್ಲ, ಬದಲಾಗಿ ಅತ್ಯಂತ ಸರಳವಾಗಿ ಬ್ಯಾಂಕಿಂಗ್‌ ವ್ಯವಹಾರ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಸ್ಮಾರ್ಟ್‌ವಾಚ್‌ನಲ್ಲಿ ಹೊಸ ಸೌಲಭ್ಯ ಪಡೆಯಬಹುದಾಗಿದೆ. ಈ ವಾಚ್‌ ನಿರ್ಮಾಣದಲ್ಲಿ ಮಾಸ್ಟರ್‌ಕಾರ್ಡ್‌ನ ಸಹಯೋಗವನ್ನೂ ಸಹ ಪಡೆಯಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ ಏನೆಲ್ಲಾ ವಿಶೇಷ ಫೀಚರ್ಸ್ ಪಡೆದಿದೆ?, ಎಷ್ಟು ಹಣ ಪಾವತಿ ಮಾಡಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್ಮುಂದೆ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಸ್ಮಾರ್ಟ್‌ವಾಚ್‌ನದ್ದೇ ಹವಾ!

ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಸ್ಮಾರ್ಟ್‌ವಾಚ್: ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಹೊಸ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಸ್ಮಾರ್ಟ್ ವಾಚ್ ಅನ್ನು ಅನಾವರಣಗೊಳಿಸಲು ಮಾಸ್ಟರ್‌ಕಾರ್ಡ್(MasterCard) ಹಾಗೂ ಸ್ಮಾರ್ಟ್ ವಾಚ್ ಮೇಕರ್ ನಾಯ್ಸ್ ಜೊತೆಗೆ ಸಹಯೋಗ ಪಡೆದಿದೆ. ಈ ವಾಚ್‌ ಕಾಂಟ್ಯಾಕ್ಟ್‌ ಲೆಸ್‌ ಪಾವತಿಗಳನ್ನು (Contactless payment) ಹೆಚ್ಚು ಸುಲಭವಾಗಿ ಮಾಡುವ ಗುರಿ ಹೊಂದಲಾಗಿದೆ. ಈವರೆಗೂ ಏರ್‌ಟೆಲ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಈ ರೀತಿಯ ಸಹಯೋಗ ಘೋಷಣೆ ಮಾಡುತ್ತಿತ್ತು. ಆದರೆ, ಈಗ ಸ್ಮಾರ್ಟ್‌ವಾಚ್‌ ಜೊತೆಗೂ ಸಹ ಸಹಯೋಗ ಪಡೆದಿದ್ದು ವಿಶೇಷ ಎನಿಸಿದೆ.

ಈ ಸಂಬಂಧ ಏರ್‌ಟೆಲ್‌ ಮಾಹಿತಿ ನೀಡಿದ್ದು, ಈ ರೀತಿಯ ಹೆಚ್ಚಿನ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ತರಲು ದೀರ್ಘಾವಧಿಯವರೆಗೆ ನಾಯ್ಸ್‌ನೊಂದಿಗೆ ಪಾಲುದಾರಿಕೆಯನ್ನು ಪಡೆಯಲಾಗಿದೆ. ಈ ಸ್ಮಾರ್ಟ್ ವಾಚ್‌ಗಳನ್ನು ನಾಯ್ಸ್ ಅಭಿವೃದ್ಧಿಪಡಿಸಿದ್ದು, ಅವುಗಳಲ್ಲಿ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಸಕ್ರಿಯಗೊಳಿಸಲಾಗುತ್ತದೆ. ಈ ಮೂಲಕ ಟ್ಯಾಪ್ ಮತ್ತು ಪೇ ಸಾಮರ್ಥ್ಯಗಳನ್ನು ಹೆಚ್ಚಿಗೆ ಮಾಡಲಾಗುತ್ತದೆ. ಜೊತೆಗೆ ಸ್ಮಾರ್ಟ್ ವೇರಬಲ್‌ಗಳ ಮೂಲಕ ಕಾಂಟ್ಯಾಕ್ಟ್‌ಲೆಸ್‌ ಪಾವತಿಗಳ ಅನುಕೂಲವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.

ದಿನಕ್ಕೆ ಎಷ್ಟು ಹಣ ಪಾವತಿ ಮಾಡಬಹುದು: ಕೇವಲ ಒಂದೇ ನಿಮಿಷದಲ್ಲಿ ಥ್ಯಾಂಕ್ಸ್ ಆಪ್ ಮೂಲಕ ತಮ್ಮ ಉಳಿತಾಯ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ವಾಚ್‌ ಆಕ್ಟಿವ್‌ ಆಗಲಲಿದೆ. ಒಮ್ಮೆ ಲಿಂಕ್ ಮಾಡಿದ ನಂತರ, ಪಾಯಿಂಟ್ ಆಫ್ ಸೇಲ್ ಡಿವೈಸ್‌ಗಳ ಬಳಿ ವಾಚ್ ಅನ್ನು ಟ್ಯಾಪ್ ಮಾಡುವ ಮೂಲಕ ಬಳಕೆದಾರರು ತಕ್ಷಣವೇ ಪಾವತಿಗಳನ್ನು ಪ್ರಾರಂಭಿಸಬಹುದು. ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಸ್ಮಾರ್ಟ್‌ವಾಚ್ ಅನ್ನು ಬಳಕೆ ಮಾಡಿಕೊಂಡು ಗ್ರಾಹಕರು ದಿನಕ್ಕೆ 1 ರಿಂದ 25,000ರೂ.ಗಳ ವರೆಗೆ ಪಾವತಿ ಮಾಡಬಹುದಾಗಿದೆ.

ಇನ್ಮುಂದೆ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಸ್ಮಾರ್ಟ್‌ವಾಚ್‌ನದ್ದೇ ಹವಾ!

ಇಷ್ಟೇ ಅಲ್ಲದೆ ಸ್ಮಾರ್ಟ್ ವಾಚ್‌ನ ಎನ್‌ಎಫ್‌ಸಿ ಚಿಪ್ ಅನ್ನು ಮಾಸ್ಟರ್‌ಕಾರ್ಡ್ ನೆಟ್‌ವರ್ಕ್ ಬೆಂಬಲಿಸುತ್ತದೆ. ಈ ಸ್ಮಾರ್ಟ್ ವಾಚ್‌ಗಳನ್ನು ರಿಟೇಲರ್‌ ಸ್ಟೋರ್‌ಗಳು, ಪಿಓಎಸ್‌ ಟರ್ಮಿನಲ್‌ಗಳು ಮತ್ತು ಇತರ ಹಲವಾರು ಟಚ್ ಪಾಯಿಂಟ್‌ಗಳಲ್ಲಿ ಕಾಂಟ್ಯಾಕ್ಟ್‌ಲೆಸ್‌ ಪಾವತಿಗಳನ್ನು ಮಾಡಬಹುದಾಗಿದೆ. ಇದರಿಂದ ನೀವು ಇನ್ಮುಂದೆ ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಮೊದಲು ನಿಮ್ಮ ಮುಂಗೈ ಮೇಲೆ ಇರುವ ವಾಚ್‌ ಮೂಲಕವೇ ಕ್ಷಣ ಮಾತ್ರದಲ್ಲಿ ಪೇ ಮಾಡಿ ನಿಮಗೆ ಬೇಕಾದದ್ದನ್ನು ಖರೀದಿ ಮಾಡಬಹುದಾಗಿದೆ.

ನಾಯ್ಸ್‌ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಸ್ಮಾರ್ಟ್‌ವಾಚ್ ಫೀಚರ್ಸ್‌: ಈ ಸ್ಮಾರ್ಟ್‌ 1.85 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 550 ನಿಟ್ಸ್‌ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 150 ಕ್ಲೌಡ್ ಆಧಾರಿತ ವಾಚ್ ಫೇಸ್‌, 130 ವಿವಿಧ ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಜೊತೆಗೆ ಉತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ IP68 ರೇಟಿಂಗ್‌ ಪಡೆದಿರುವುದರಿಂದ ನೀರಿಗೆ ಅಂಜುವ ಅವಶ್ಯಕತೆ ಇಲ್ಲ.

ಇದರ ಜೊತೆಗೆ ಬ್ಲೂಟೂತ್ ಕರೆ ಮಾಡುವ ಸಾಮರ್ಥ್ಯ, 24 x 7 ಹೃದಯ ಬಡಿತ ಮತ್ತು SpO2 ಮಾನಿಟರಿಂಗ್, ಉತ್ತಮ ಆರೋಗ್ಯ ಒಳನೋಟಗಳು ಮತ್ತು ಟ್ರ್ಯಾಕಿಂಗ್‌ಗಾಗಿ ರಕ್ತದ ಆಮ್ಲಜನಕದ ಶುದ್ಧತ್ವ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಬಳಕೆದಾರರಿಗೆ ಈ ಸ್ಮಾರ್ಟ್‌ವಾಚ್‌ ಅನುವು ಮಾಡಿಕೊಡುತ್ತದೆ. ಉಳಿದಂತೆ ಈ ವಾಚ್‌ ಅನ್ನು ಒಂದು ಬಾರಿ ಫೂರ್ಣವಾಗಿ ಚಾರ್ಜ್‌ ಮಾಡಿದ್ರೆ 10 ದಿನಗಳವರೆಗೆ ಬಳಕೆ ಮಾಡಬಹುದು.

ಇನ್ಮುಂದೆ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಸ್ಮಾರ್ಟ್‌ವಾಚ್‌ನದ್ದೇ ಹವಾ!

ನಾಯ್ಸ್‌ ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಹೊಸ ಸ್ಮಾರ್ಟ್ ವಾಚ್ ಭಾರತದಲ್ಲಿ 2,999 ರೂಗಳಲ್ಲಿ ಲಭ್ಯವಿದೆ. ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಿಂದ ಇದನ್ನು ಖರೀದಿಸಬಹುದು. ಹೊಸ ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿ ಡಿಜಿಟಲ್ ಖಾತೆಯನ್ನು ತೆರೆಯುವ ಮೂಲಕ ಈ ವಾಚ್‌ ಖರೀದಿ ಮಾಡಬಹುದಾಗಿದೆ. ಇದು ಬೂದು, ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.

Best Mobiles in India

English summary
Airtel Payments Bank has announced the new Airtel Payments Bank Smart Watch. For this, it has collaborated with MasterCard and smartwatch maker Noise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+