ಏರ್‌ಟೆಲ್ ಗ್ರಾಹಕರೇ, ಈ ಪ್ಲ್ಯಾನ್‌ಗಳಲ್ಲಿ ಸಿಗಲಿದೆ 84 ದಿನಗಳ ವ್ಯಾಲಿಡಿಟಿ!
ಜನಪ್ರಿಯ ಏರ್‌ಟೆಲ್ ಟೆಲಿಕಾಂ ಚಂದಾದಾರರಿಗೆ ಹಲವು ಭಿನ್ನ ಶ್ರೇಣಿಯ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಆ ಪೈಕಿ ಕೆಲವು ಯೋಜನೆಗಳು ಬೊಂಬಾಟ್ ಡೇಟಾ ಪ್ರಯೋಜನ ಹೊಂದಿದ್ದು, ಅವುಗಳಲ್ಲಿ ಮತ್ತೆ ಕೆಲ ಪ್ಲ್ಯಾನ್‌ಗಳು ಬಿಗ್ ವ್ಯಾಲಿಡಿಟಿಯ ಪ್ರಯೋಜನ ಪಡೆದಿವೆ. ಅದೇ ರೀತಿ ಮತ್ತೆ ಕೆಲವು ಪ್ಲ್ಯಾನ್‌ಗಳು ಅಧಿಕ ಡೇಟಾ ಹಾಗೂ ಅತ್ಯುತ್ತಮ ವ್ಯಾಲಿಡಿಟಿ ಸೌಲಭ್ಯ ಸಹ ಹೊಂದಿವೆ.
ಹೌದು, ಭಾರ್ತಿ ಏರ್‌ಟೆಲ್ ಸಂಸ್ಥೆಯು ಪ್ರತಿದಿನ ಅಧಿಕ ಡೇಟಾ ಪ್ರಯೋಜನದ ಹಾಗೂ ಬಿಗ್ ವ್ಯಾಲಿಡಿಟಿ ಇರುವ ಪ್ಲ್ಯಾನ್ ಇದ್ದು, ಹೆಚ್ಚು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಅದಾಗ್ಯೂ, 84 ದಿನಗಳ ವ್ಯಾಲಿಡಿಟಿ ಸೌಲಭ್ಯದ ಪ್ಲ್ಯಾನ್‌ಗಳು ಆಕರ್ಷಕ ಎನಿಸಿವೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಸಹ ಪಡೆದಿವೆ. ಹಾಗಾದರೇ 84 ದಿನಗಳ ವ್ಯಾಲಿಡಿಟಿ ಸೌಲಭ್ಯದ ಕೆಲವು ಬೆಸ್ಟ್ ಏರ್‌ಟೆಲ್ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಏರ್‌ಟೆಲ್ 719ರೂ. ಯೋಜನೆ
ಏರ್‌ಟೆಲ್ 719ರೂ. ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯು ಪ್ರತಿದಿನ 1.5GB ಡೇಟಾ ಪ್ರಯೋಜನ ಪಡೆದಿದ್ದು, ಅನಿಯಮಿತ ವಾಯಿಸ್ ಕರೆ ಪ್ರಯೋಜನಗಳನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ.
ಏರ್‌ಟೆಲ್ 839ರೂ. ಯೋಜನೆ
ಏರ್‌ಟೆಲ್ 839ರೂ. ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಸಹ ಸಿಗಲಿದೆ. ಅಲ್ಲದೇ ನಿತ್ಯ 2 GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್ ಸೌಲಭ್ಯಗಳು ಸಿಗುತ್ತವೆ.
ಏರ್‌ಟೆಲ್ 869ರೂ. ಯೋಜನೆ
ಏರ್‌ಟೆಲ್ ಟೆಲಿಕಾಂನ ಈ ಪ್ಲ್ಯಾನ್ ಸಹ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಸಹ ಸಿಗಲಿದೆ. ಅಲ್ಲದೇ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ, Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್ ಸೌಲಭ್ಯಗಳು ಸಿಗುತ್ತವೆ.
ಏರ್‌ಟೆಲ್ 999ರೂ. ಯೋಜನೆ
ಏರ್‌ಟೆಲ್ ಸಂಸ್ಥೆಯ 999ರೂ. ಪ್ಲ್ಯಾನಿನಲ್ಲಿ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಸಹ ಸಿಗಲಿದೆ. ಅಲ್ಲದೇ ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್, Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್ ಸೌಲಭ್ಯಗಳು ಸಿಗುತ್ತವೆ.
ಏರ್‌ಟೆಲ್ 1499ರೂ. ಯೋಜನೆ
ಏರ್‌ಟೆಲ್ ಕಂಪನಿಯ 1499ರೂ. ಪ್ಲ್ಯಾನಿನಲ್ಲಿ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಸಹ ಸಿಗಲಿದೆ. ಅಲ್ಲದೇ ಪ್ರತಿದಿನ 3 GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆ, Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್ ಸೌಲಭ್ಯಗಳು ಸಿಗುತ್ತವೆ.


Click it and Unblock the Notifications








