ಉಚಿತವಾಗಿ Disney+ Hotstar ಚಂದಾದಾರಿಕೆ ಬೇಕೆ? ಹಾಗಿದ್ರೆ ಈ ಪ್ಲ್ಯಾನ್ ಸೂಕ್ತ!
ಏರ್‌ಟೆಲ್ ಬಳಕೆದಾರರೇ, ನಿಮಗೆ ಅಧಿಕ ಡೇಟಾ ಜೊತೆಗೆ ಓಟಿಟಿ (OTT) ಚಂದಾದಾರಿಕೆ ಬೇಕೆ? ಹಾಗೆಯೇ ಬಿಗ್ ವ್ಯಾಲಿಡಿಟಿ ಪ್ರಯೋಜನ ಬಯಸುತ್ತಿರಾ? ಅಲ್ಲದೇ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಕೂಡಾ ಬೇಕೆ? ಖಂಡಿತಾ ಈ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಆಯ್ಕೆ ಲಭ್ಯ ಇದೆ.
ಹೌದು, ದೇಶದ ಎರಡನೇ ದೊಡ್ಡ ಟೆಲಿಕಾಂ ಎನಿಸಿರುವ ಏರ್‌ಟೆಲ್ ಆಕರ್ಷಕ ಯೋಜನೆಗಳ ಮೂಲಕ ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಏರ್‌ಟೆಲ್‌ನ ಹಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳು ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ, ವಾಯಿಸ್ ಕರೆ, ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಒಳಗೊಂಡಿವೆ. ಅವುಗಳ ಪೈಕಿ ಕೆಲವು ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳು ಡೇಟಾ ಹಾಗೂ ಓಟಿಟಿ (OTT) ಸದಸ್ಯತ್ವದ ಆಯ್ಕೆ ಮೂಲಕ ಹೆಚ್ಚಿನ ಗಮನ ಸೆಳೆದಿವೆ.

ಏರ್‌ಟೆಲ್‌ನ ಟೆಲಿಕಾಂನ 549ರೂ, 1029ರೂ ಹಾಗೂ 3999ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಗಳು ಡೇಟಾ, ವ್ಯಾಲಿಡಿಟಿ, ವಾಯಿಸ್ ಕರೆಯ ಜೊತೆಗೆ ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ (Disney+ Hotstar) ಚಂದಾದಾರಿಕೆಯ ಪ್ರಯೋಜನ ಪಡೆದಿವೆ. ಹಾಗಾದರೆ ಡಿಸ್ನಿ+ ಹಾಟ್‌ಸ್ಟಾರ್ ಪ್ರಯೋಜನ ಪಡೆದ ಏರ್‌ಟೆಲ್‌ನ ಆಕರ್ಷಕ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಏರ್‌ಟೆಲ್‌ನ 549ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್
ಭಾರ್ತಿ ಏರ್‌ಟೆಲ್ ಟೆಲಿಕಾಂನ 549ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 3 GB ಡೇಟಾ ಸೌಲಭ್ಯ ಹಾಗೂ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ.
ಹಾಗೆಯೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ (Disney+ Hotstar) ಚಂದಾದಾರಿಕೆ ಸೌಲಭ್ಯ ಸಿಗಲಿದೆ. ಜೊತೆಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ ಪ್ರೀಮಿಯಂ ಸೇವೆ ಸಹ ದೊರೆಯುತ್ತದೆ. ಹಾಗೆಯೇ ಹೆಲೋ ಟ್ಯೂನ್ಸ್ ಸಹ ಲಭ್ಯ.
ಏರ್‌ಟೆಲ್‌ನ 1029ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್
ಭಾರ್ತಿ ಏರ್‌ಟೆಲ್ ಟೆಲಿಕಾಂನ 1029ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಪ್ರತಿದಿನ 2 GB ಡೇಟಾ ಸೌಲಭ್ಯ ಹಾಗೂ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ.
ಹಾಗೆಯೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ (Disney+ Hotstar) ಚಂದಾದಾರಿಕೆ ಸೌಲಭ್ಯ ಸಿಗಲಿದೆ. ಜೊತೆಗೆ ಉಚಿತ ಏರ್‌ಟೆಲ್ ಟಿವಿ ಶೋ, ಮ್ಯೂವಿಸ್ ಹಾಗೂ ಇತರೆ ಕಾರ್ಯಕ್ರಮ ಸೌಲಭ್ಯ ಲಭ್ಯ. ಹಾಗೆಯೇ ಸ್ಪಾಮ್ ಕರೆ ಮಾಹಿತಿ, ಹೆಲೋ ಟ್ಯೂನ್ಸ್ ಸಹ ಲಭ್ಯ.
ಏರ್‌ಟೆಲ್‌ನ 3999ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್
ಭಾರ್ತಿ ಏರ್‌ಟೆಲ್ ಟೆಲಿಕಾಂನ 3999ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಪ್ರಯೋಜನ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 2.5 GB ಡೇಟಾ ಸೌಲಭ್ಯ ಹಾಗೂ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ.
ಹಾಗೆಯೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ (Disney+ Hotstar) ಚಂದಾದಾರಿಕೆ ಸೌಲಭ್ಯ ಸಿಗಲಿದೆ. ಜೊತೆಗೆ ಉಚಿತ ಏರ್‌ಟೆಲ್ ಟಿವಿ ಶೋ, ಮ್ಯೂವಿಸ್ ಹಾಗೂ ಇತರೆ ಕಾರ್ಯಕ್ರಮ ಸೌಲಭ್ಯ ಲಭ್ಯ. ಹಾಗೆಯೇ ಸ್ಪಾಮ್ ಕರೆ ಮಾಹಿತಿ, ಹೆಲೋ ಟ್ಯೂನ್ಸ್ ಸಹ ಲಭ್ಯ.


Click it and Unblock the Notifications








