ಏರ್‌ಟೆಲ್‌ನ ಈ ಅಗ್ಗದ ರೀಚಾರ್ಜ್ ಗ್ರಾಹಕರಿಗೆ ಖಂಡಿತಾ ಇಷ್ಟ!..ಪ್ರಯೋಜನ ಏನಿವೆ?
ಭಾರ್ತಿ ಏರ್‌ಟೆಲ್ ಟೆಲಿಕಾಂ ಭಿನ್ನ ಶ್ರೇಣಿಯ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಏರ್‌ಟೆಲ್ ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆಯನ್ನು ತನ್ನ ಚಂದಾದಾರರಿಗೆ ನೀಡಿದೆ. ಇನ್ನು ಏರ್‌ಟೆಲ್ ಟೆಲಿಕಾಂನ ಪೋಸ್ಟ್‌ಪೇಯ್ಡ್ ಯೋಜನೆಗಳು ಭಿನ್ನ ಪ್ರೈಸ್ ಟ್ಯಾಗ್ ಹೊಂದಿದ್ದು, ಪ್ರಯೋಜನಗಳು ಸಹ ಆಕರ್ಷಕ ಆಗಿವೆ. ಆದ್ರೆ, ಕೆಲವು ಪ್ಲ್ಯಾನ್ ಅತ್ಯುತ್ತಮ ಎನಿಸಿವೆ.
ಹೌದು, ಏರ್‌ಟೆಲ್ ಟೆಲಿಕಾಂ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ಪೋಸ್ಟ್‌ಪೇಯ್ಡ್ ಯೋಜನೆಯ ಆಯ್ಕೆ ಹೊಂದಿದೆ. ಅವುಗಳಲ್ಲಿ ಬಹುತೇಕರು ಬಜೆಟ್ ದರದಲ್ಲಿನ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್‌ಗೆ ಮುಂದಾಗುತ್ತಾರೆ. ಆ ಪೈಕಿ ಭಾರ್ತಿ ಏರ್‌ಟೆಲ್ ಟೆಲಿಕಾಂನ 500ರೂ. ಒಳಗಿನ ಬೆಲೆಯ ಪೋಸ್ಟ್‌ಪೇಯ್ಡ್ ಯೋಜನೆಗಳು ಆಕರ್ಷಕ ಎನಿಸವೆ. ಹಾಗಾದರೆ 500ರೂ. ಒಳಗಿನ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್ಟೆಲ್ 399ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು ಹೀಗಿವೆ : ಭಾರ್ತಿ ಏರ್‌ಟೆಲ್ ಟೆಲಿಕಾಂನ 399ರೂ. ಫೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲ್ಯಾನಿನಲ್ಲಿ ಬಳಕೆದಾರರು ಒಟ್ಟು 40 GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಚಂದಾದಾರರಿಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯವು ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸೌಲಭ್ಯ ಸಹ ದೊರೆಯುತ್ತವೆ.
ಏರ್‌ಟೆಲ್ 499ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು ಹೀಗಿವೆ : ಭಾರ್ತಿ ಏರ್‌ಟೆಲ್ 499ರೂ. ಫೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು 75GB ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಹಾಗೆಯೇ ಚಂದಾದಾರರಿಗೆ ಇದರಲ್ಲಿ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸೌಲಭ್ಯ ಸಹ ದೊರೆಯುತ್ತವೆ. ಇಷ್ಟಲ್ಲದೆ ಹೆಚ್ಚುವರಿಯಾಗಿ ಜನಪ್ರಿಯ ಓಟಿಟಿ ಅಮೆಜಾನ್ ಪ್ರೈಮ್ ಆಕ್ಸಸ್, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಸದಸ್ಯತ್ವ ಸಿಗಲಿದೆ.
ಏರ್‌ಟೆಲ್ ಟೆಲಿಕಾಂನ ಇತರೆ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಮಾಹಿತಿ:
ಏರ್‌ಟೆಲ್ 599ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಸೌಲಭ್ಯದ ವಿವರ : ಏರ್‌ಟೆಲ್ 599ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಮಾದರಿಯ ಪ್ಲ್ಯಾನ್ ಆಗಿ ಕಾಣಿಸಿಕೊಂಡಿದೆ. ಈ ಯೋಜನೆಯಲ್ಲಿ ಚಂದಾದಾರರು ಒಟ್ಟು 75GB ಡೇಟಾ ಸೌಲಭ್ಯ ಅನ್ನು ಪಡೆಯುತ್ತಾರೆ. ಇಷ್ಟಲ್ಲದೆ ಇದರೊಂದಿಗೆ ಅನಿಯಮಿತ ಧ್ವನಿಯ ಕರೆ ಪ್ರಯೋಜನ ಸಿಗಲಿದೆ.
ಹಾಗೆಯೇ ಚಂದಾದಾರರಿಗೆ ಡೈಲಿ 100 ಎಸ್‌ಎಂಎಸ್ ದೊರೆಯುತ್ತವೆ. ಹೆಚ್ಚುವರಿಯಾಗಿ ಜನಪ್ರಿಯ ಓಟಿಟಿ ಗಳಾದ ಅಮೆಜಾನ್ ಪ್ರೈಮ್ ಆಕ್ಸಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಸದಸ್ಯತ್ವ ಸಹ ಇದೆ.
ಭಾರ್ತಿ ಏರ್‌ಟೆಲ್ 1199ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ : ಸಂಸ್ಥೆಯ ಈ 1199 ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಒಟ್ಟು 150 GB ಡೇಟಾ ಸೌಲಭ್ಯ ಅನ್ನು ನೀಡುತ್ತದೆ. ಜೊತೆಗೆ ಅನಿಯಮಿತ ಧ್ವನಿ ಕರೆಗಳ ಸೌಲಭ್ಯ ಒದಗಿಸಲಿದೆ. ಅಲ್ಲದೇ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ನೀಡುತ್ತದೆ. ಹಾಗೆಯೇ ಹೆಚ್ಚುವರಿ ಆಗಿ ಚಂದಾದಾರಿಗೆ ಈ ರೀಚಾರ್ಜ್‌ನಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್ ಅನ್ಲಿಮಿಟೆಡ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಪ್ರಯೋಜನಗಳು ಖಚಿತವಾಗಿ ಲಭ್ಯ.
ಭಾರ್ತಿ ಏರ್‌ಟೆಲ್ 999ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲ್ಯಾನ್ : ಸಂಸ್ಥೆಯ ಈ 999 ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಚಂದಾದಾರರಿಗೆ ಒಟ್ಟು 100 GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರ ಜೊತೆಗೆ ಅನಿಯಮಿತ ಧ್ವನಿ ಕರೆಗಳ ಹಾಗೂ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ಖಚಿತ ಲಭ್ಯ. ಇನ್ನು ಇದರಲ್ಲಿ ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಓಟಿಟಿ ಸದಸ್ಯತ್ವ ಸಿಗಲಿದೆ.


Click it and Unblock the Notifications








