ಏರ್‌ಟೆಲ್‌ನ ಈ ಪ್ಲ್ಯಾನ್‌ಗಳಲ್ಲಿ ಡೇಟಾ ಜೊತೆಗೆ ಫ್ರೀ ಇನ್ಶೂರೆನ್ಸ್ ಸಿಗುತ್ತೆ!
ಕೊರೊನಾ ವೈರಸ್ ಉಪಟಳ ಹೆಚ್ಚಾಗಿದ್ದು, ಇಡೀ ಜಗತ್ತೇ ಭೀತಿಯಲ್ಲಿ ಮುಳುಗಿದೆ. ಈ ಸಾಂಕ್ರಾಮಿಕವನ್ನು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಬಹುತೇಕ ವಲಯಗಳ ಸ್ಥಿತಿ ಏರುಪೇರಾಗಿದೆ. ಇದಕ್ಕೆ ಟೆಲಿಕಾಂ ಕ್ಷೇತ್ರವು ಹೊರತಾಗಿಲ್ಲ. ತಮ್ಮ ಚಂದಾದಾರರ ಅನುಕೂಲಕ್ಕಾಗಿ ಟೆಲಿಕಾಂ ಸಂಸ್ಥೆಗಳು ಆಕರ್ಷಕ ಕೊಡುಗೆಗಳನ್ನು ಈಗಾಗಲೆ ಘೋಷಿಸಿವೆ. ಈ ನಡುವೆ ಏರ್‌ಟೆಲ್‌ನ ಕೆಲವು ಪ್ಲ್ಯಾನ್‌ಗಳು ಗಮನಸೆಳೆದಿವೆ.

ಹೌದು, ಏರ್‌ಟೆಲ್ ಅಧಿಕ ಡೇಟಾ ಪ್ಲ್ಯಾನ್‌ಗಳನ್ನು ಹೊಂದಿದೆ, ದೀರ್ಘಾವಧಿ ವ್ಯಾಲಿಡಿಟಿಯ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಕೆಲವು ಪ್ರೀಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಡಬಲ್ ಧಮಾಕಾ ಒದಗಿಸಲಿವೆ. ಏರ್‌ಟೆಲ್‌ನ ಮೂರು ಪ್ಲ್ಯಾನ್‌ಗಳು ಡೇಟಾ, ವಾಯಿಸ್‌ಕರೆ, ಎಸ್‌ಎಮ್‌ಎಸ್, ವ್ಯಾಲಿಡಿಟಿ ಹಾಗೂ ಉಚಿತ ಜೀವ ವಿಮೆಯ ಸೌಲಭ್ಯಗಳನ್ನು ಪಡೆದಿವೆ. ಜೊತೆಗೆ ಅಮೆಜಾನ್ ಪ್ರೈಮ್ ಸೇವೆಯನ್ನು ದೊರೆಯುತ್ತದೆ. ಮುಂದೆ ಓದಿರಿ.

ಏರ್‌ಟೆಲ್ 179ರೂ. ಪ್ಲ್ಯಾನ್
ಏರ್‌ಟೆಲ್‌ನ ನೂತನ 179ರೂ. ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಭಾರತದಾದ್ಯಂತ ಅನಿಯಮಿತ ಕರೆಗಳ ಸೌಲಭ್ಯ ಇದೆ. ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್ಎಮ್ಎಸ್ ಹಾಗೂ 2GB ಡಾಟಾ 4G/3G/2G ಪ್ರಯೋಜನವನ್ನು ಒಳಗೊಂಡಿದೆ. ಇದರೊಂದಿಗೆ ಭಾರ್ತಿ ಆಕ್ಸಾ ಲೈಫ್ ಇನ್ಶೂರೆನ್ಸ್‌ನಿಂದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಹ ಪಡೆದಿದೆ.

ಏರ್‌ಟೆಲ್ 279ರೂ. ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 279ರೂ. ಪ್ಲ್ಯಾನ್ ಸಹ ಲೈಫ್ ಇನ್ಶೂರೆನ್ಸ್ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB (4G/3G/2G ) ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ಗಳು ಪ್ರಯೋಜನ ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಇದರೊಂದಿಗೆ 4ಲಕ್ಷದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಿಗಲಿದೆ.

ಏರ್‌ಟೆಲ್ 349ರೂ. ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 349ರೂ. ಪ್ಲ್ಯಾನ್ ಸಹ ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಲೈಫ್ ಇನ್ಶೂರೆನ್ಸ್ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB (4G/3G/2G ) ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ಗಳು ಪ್ರಯೋಜನ ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಇದರೊಂದಿಗೆ 4ಲಕ್ಷದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಿಗಲಿದೆ. ಹಾಗೂ ಅಮೆಜಾನ್ ಪ್ರೈಮ್ ಸದಸ್ಯತ್ವ ದೊರೆಯುತ್ತೆ ಉಚಿತ ಹೆಲೊ ಟ್ಯೂನ್ಸ್, Wynk ಮ್ಯೂಸಿಕ್ ಸೇವೆಗಳು ದೊರೆಯುತ್ತವೆ.

ಏರ್‌ಟೆಲ್‌ನ ಪ್ರತಿದಿನ 2GB ಡೇಟಾ ಪ್ಲ್ಯಾನ್‌ಗಳು
ಏರ್‌ಟೆಲ್‌ನ 298ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್‌ನ 349ರೂ. ಪ್ಲ್ಯಾನ್
ಏರ್‌ಟೆಲ್‌ನ 349ರೂ. ಪ್ರೀಪೇಡ್ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್ 449ರೂ. ಪ್ಲ್ಯಾನ್
ಏರ್‌ಟೆಲ್‌ನ 449ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.


Click it and Unblock the Notifications








