Home
ಸುದ್ದಿಜಾಲ

ಪ್ರತಿದಿನ 2GB ಡೇಟಾ ಸೌಲಭ್ಯದ ಅತ್ಯುತ್ತಮ ಏರ್‌ಟೆಲ್‌ ಪ್ಲ್ಯಾನ್‌ಗಳ ಲಿಸ್ಟ್‌!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಎರಡನೇಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್‌ ಸಂಸ್ಥೆಯು ಭಿನ್ನ ಪ್ರೈಸ್‌ಟ್ಯಾಗ್‌ನ ಪ್ರಿಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆಯನ್ನು ಒದಗಿಸಿದೆ. ಆ ಪೈಕಿ ಪ್ರತಿದಿನ 2 GB ಡೇಟಾ ಪ್ರಯೋಜನ ನೀಡುವ ಏರ್‌ಟೆಲ್‌ ರೀಚಾರ್ಜ್‌ ಯೋಜನೆಗಳು ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಬೊಂಬಾಟ್‌ ಎನಿಸಿವೆ. ಈ ಯೋಜನೆಗಳಲ್ಲಿ ದೈನಂದಿನ ಡೇಟಾ ಜೊತೆಗೆ ಇತರೆ ಹೆಚ್ಚುವರಿ ಪ್ರಯೋಜನಗಳು ಕೂಡಾ ಲಭ್ಯ ಆಗಲಿವೆ. ಹಾಗೆಯೇ ಈ ರೀಚಾರ್ಜ್‌ ಯೋಜನೆಗಳು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಲಭ್ಯ ಇವೆ.

ಹೌದು, ಭಾರ್ತಿ ಏರ್‌ಟೆಲ್‌ ಕಂಪನಿಯು ಭಿನ್ನ ಡೇಟಾ ಪ್ರಯೋಜನಗಳ ಆಯ್ಕೆ ಪಡೆದಿದೆ. ಅವುಗಳಲ್ಲಿ ದೈನಂದಿನ 1 GB ಡೇಟಾ ಸೌಲಭ್ಯ, 2 GB ಡೇಟಾ ಸೌಲಭ್ಯ ಮತ್ತು 3 GB ಡೇಟಾ ಸೌಲಭ್ಯ ಪ್ರಯೋಜನದ ಯೋಜನೆಗಳ ಆಯ್ಕೆ ಇದೆ. ಹಾಗೆಯೇ ಕೆಲವು ಯೋಜನೆಗಳು 2 GB ಗೂ ಅಧಿಕ ಡೇಟಾ ಪ್ರಯೋಜನ ಪಡೆದಿವೆ. ಅವುಗಳಲ್ಲಿ 1000ರೂ. ಒಳಗೆ ಲಭ್ಯ ಇರುವ ಕೆಲವು ಯೋಜನೆಯು ಹೆಚ್ಚಿನ ಜನಪ್ರಿಯತೆ ಹೊಂದಿವೆ. ಹಾಗಾದರೇ 2GB ಡೇಟಾ ಪ್ರಯೋಜನ ಪಡೆದ ಏರ್‌ಟೆಲ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಪ್ರತಿದಿನ 2GB ಡೇಟಾ ಸೌಲಭ್ಯದ ಅತ್ಯುತ್ತಮ ಏರ್‌ಟೆಲ್‌ ಪ್ಲ್ಯಾನ್‌ಗಳ ಲಿಸ್ಟ್‌!

ಏರ್‌ಟೆಲ್‌ 319ರೂ. ರೀಚಾರ್ಜ್‌ ಯೋಜನೆ

ಏರ್‌ಟೆಲ್‌ ಸಂಸ್ಥೆಯ ಈ 319ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಚಂದಾದಾರರಿಗೆ ಪ್ರತಿದಿನ 2 GB ಡೇಟಾ ಸೌಲಭ್ಯ ಲಭ್ಯ ಆಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಲಭ್ಯವಾಗಲಿದ್ದು, ಹೆಚ್ಚುವರಿಯಾಗಿ ಹೆಲೋ ಟ್ಯೂನ್ ಹಾಗೂ ವೆಂಕ್ ಮ್ಯೂಸಿಕ್ ಸೌಲಭ್ಯ ಲಭ್ಯ.

ಏರ್‌ಟೆಲ್‌ 549ರೂ. ರೀಚಾರ್ಜ್‌ ಯೋಜನೆ

ಏರ್‌ಟೆಲ್‌ ಸಂಸ್ಥೆಯ ಈ 549 ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ವೇಳೆ ಚಂದಾದಾರರಿಗೆ ದಿನವೂ 2 GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ಸಿಗಲಿದೆ. ಇನ್ನು ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಲಭ್ಯವಾಗಲಿದ್ದು, ಹೆಚ್ಚುವರಿಯಾಗಿ ಹೆಲೋ ಟ್ಯೂನ್ ಹಾಗೂ ವೆಂಕ್ ಮ್ಯೂಸಿಕ್ ಸೌಲಭ್ಯ ಸಿಗಲಿವೆ.

ಏರ್‌ಟೆಲ್‌ 839ರೂ. ರೀಚಾರ್ಜ್‌ ಯೋಜನೆ

ಏರ್‌ಟೆಲ್‌ ಟೆಲಿಕಾಂನ ಈ 839ರೂ. ಪ್ರಿಪೇಯ್ಡ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ವೇಳೆ ಚಂದಾದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಪ್ರಿಪೇಯ್ಡ್‌ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಸಂಪೂರ್ಣ ಅನಿಯಮಿತ ಧ್ವನಿ ಕರೆಗಳ ಪ್ರಯೋಜನ ಕೂಡಾ ದೊರೆಯುತ್ತದೆ. ಇನ್ನು ಇದರ ಜೊತೆಗೆ ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಲಭ್ಯವಾಗಲಿದ್ದು, ಹೆಚ್ಚುವರಿಯಾಗಿ ಹೆಲೋ ಟ್ಯೂನ್ ಹಾಗೂ ವೆಂಕ್ ಮ್ಯೂಸಿಕ್ ಸೌಲಭ್ಯ ಸಿಗಲಿವೆ.

ಏರ್‌ಟೆಲ್‌ 869ರೂ. ರೀಚಾರ್ಜ್‌ ಯೋಜನೆ

ಏರ್‌ಟೆಲ್‌ ಟೆಲಿಕಾಂನ ಈ 869ರೂ. ಪ್ರಿಪೇಯ್ಡ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ವೇಳೆ ಚಂದಾದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಪ್ರಿಪೇಯ್ಡ್‌ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಸಂಪೂರ್ಣ ಅನಿಯಮಿತ ಧ್ವನಿ ಕರೆಗಳ ಪ್ರಯೋಜನ ಕೂಡಾ ದೊರೆಯುತ್ತದೆ. ಇನ್ನು ಇದರ ಜೊತೆಗೆ ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಲಭ್ಯವಾಗಲಿದ್ದು, ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಪಡೆದಿದೆ.

Best Mobiles in India

English summary
Airtel Prepaid Plans with 2GB Daily Data Under Rs 1000. Plans list and benefits details check here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+