ಕಡಿಮೆ ಬೆಲೆಯಲ್ಲಿ ಅತ್ಯುತ್ತಮ Airtel ರೀಚಾರ್ಜ್ ಪ್ಲ್ಯಾನ್‌ಗಳ ಲಿಸ್ಟ್ ಇಲ್ಲಿದೆ!
ದೇಶದ ಟೆಲಿಕಾಂ ವಲಯದಲ್ಲಿ ಎರಡನೇ ದೊಡ್ಡ ಖಾಸಗಿ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಕೆಲವು ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯ ಪ್ಲ್ಯಾನ್‌ಗಳ ಪೈಕಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಯೋಜನೆಗಳು ಸೇರಿವೆ. ಅಲ್ಲದೇ ಪೂರ್ಣ ಮಾಸಿಕ ವ್ಯಾಲಿಡಿಟಿ (30 ದಿನಗಳ ವ್ಯಾಲಿಡಿಟಿಯ) ಸೌಲಭ್ಯದ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಸಹ ಇದೆ.
ಹೌದು, ಏರ್‌ಟೆಲ್ ಟೆಲಿಕಾಂ ಸಹ ಭಿನ್ನ ಶ್ರೇಣಿಯ ಯೋಜನೆಗಳ ಆಯ್ಕೆ ಒಳಗೊಂಡಿದೆ. ಅವುಗಳಲ್ಲಿ ಅಧಿಕ ಡೇಟಾ ಪ್ರಯೋಜನದ ಯೋಜನೆಗಳು ಸೇರಿವೆ ಅಲ್ಲದೇ ಅಧಿಕ ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಕೂಡಾ ಇವೆ. ಸಂಸ್ಥೆಯ ಬಹುತೇಕ ಯೋಜನೆಗಳು ದೈನಂದಿನ ಡೇಟಾ, ಎಸ್‌ಎಮ್‌ಎಸ್ ಹಾಗೂ ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಪಡೆದಿವೆ. ಹಾಗಾದರೇ ಏರ್‌ಟೆಲ್ ಸಂಸ್ಥೆಯ 30 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳ ಬಗ್ಗೆ ಹಾಗೂ ಕೆಲವು ಬೆಸ್ಟ್ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ ಟೆಲಿಕಾಂನ 355ರೂ. ಯೋಜನೆಯ ಮಾಹಿತಿ
ಏರ್‌ಟೆಲ್ ಟೆಲಿಕಾಂನ 355 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 25 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಹೆಲೋ ಟ್ಯೂನ್ ಹಾಗೂ ವೆಂಕ್ ಮ್ಯೂಸಿಕ್ ಪ್ರಯೋಜನ ಸಹ ಲಭ್ಯ.
ಏರ್‌ಟೆಲ್ ಟೆಲಿಕಾಂನ 219ರೂ. ಯೋಜನೆಯ ಮಾಹಿತಿ
ಏರ್‌ಟೆಲ್ ಟೆಲಿಕಾಂನ 219 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 3 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಹೆಲೋ ಟ್ಯೂನ್ ಹಾಗೂ ವೆಂಕ್ ಮ್ಯೂಸಿಕ್ ಪ್ರಯೋಜನ ಸಹ ಲಭ್ಯವಾಗಲಿದೆ.
ಏರ್‌ಟೆಲ್ ಟೆಲಿಕಾಂನ 589ರೂ. ಯೋಜನೆಯ ಮಾಹಿತಿ
ಏರ್‌ಟೆಲ್ ಟೆಲಿಕಾಂನ 589 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 50 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಹೆಲೋ ಟ್ಯೂನ್ ಹಾಗೂ ವೆಂಕ್ ಮ್ಯೂಸಿಕ್ ಪ್ರಯೋಜನ ಸಹ ಸಿಗಲಿದೆ.
ಏರ್‌ಟೆಲ್ ಟೆಲಿಕಾಂನ 619ರೂ. ಯೋಜನೆಯ ಮಾಹಿತಿ
ಏರ್‌ಟೆಲ್ ಟೆಲಿಕಾಂನ 619ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 60 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ನಿತ್ಯ 1.5GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಹೆಲೋ ಟ್ಯೂನ್ ಹಾಗೂ ವೆಂಕ್ ಮ್ಯೂಸಿಕ್ ಪ್ರಯೋಜನ ಸಹ ಸಿಗಲಿದೆ.


Click it and Unblock the Notifications








