ಏರ್‌ಟೆಲ್ ವೈಫೈ ಕಾಲಿಂಗ್ ಉಚಿತ; ಕಾಲ್ ಡ್ರಾಪ್‌ಗೆ ಫುಲ್ ಸ್ಟಾಪ್!
ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತೀಯ ಟೆಲಿಕಾಂ ವಲಯವು ಮಹತ್ತರ ಅಭಿವೃದ್ಧಿ ಪಡೆದುಕೊಂಡಿದೆ. ಟೆಲಿಕಾಂ ಸಂಸ್ಥೆಗಳು ಪ್ರಸ್ತುತ ಹಲವು ಆಕರ್ಷಕ 4G ಪ್ಲ್ಯಾನ್ ಮತ್ತು ಡೇಟಾ ಸೇವೆಗಳನ್ನು ಪರಿಚಯಿಸಿವೆ. ಈ ಪೈಕಿ ಏರ್‌ಟೆಲ್ ಟೆಲಿಕಾಂ ಕಳೆದ ಡಿಸೆಂಬರ್‌ನಲ್ಲಿ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದು, ಟೆಲಿಕಾಂ ವಲಯದಲ್ಲಿ ವೈಫೈ ಕಾಲಿಂಗ್ ಸೇವೆಯನ್ನು ಪರಿಚಯಿಸಿದೆ. ಈ ಮೂಲಕ ದೇಶದಲ್ಲಿ ವೈಫೈ ಕಾಲಿಂಗ್ ಸೇವೆ ಪರಿಚಯಿಸಿದ ಮೊದಲ ಟೆಲಿಕಾಂ ಆಗಿ ಗುರುತಿಸಿಕೊಂಡಿದೆ.

ಹೌದು, ಏರ್‌ಟೆಲ್ ಸಂಸ್ಥೆಯು ವೈಫೈ ಕಾಲಿಂಗ್ ಸೇವೆಯನ್ನು ಬಿಡುಗಡೆ ಮಾಡಿದೆ. ಮತ್ತು ವೈಫೈ ಸೌಲಭ್ಯ ಹೊಂದಿದ, 4G ಸಂಪರ್ಕದ ಸ್ಮಾರ್ಟ್‌ಫೋನ್ ಹೊಂದಿರುವ ಏರ್‌ಟೆಲ್ ಚಂದಾದಾರರು ಈ ವೈಫೈ ಕಾಲಿಂಗ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಬಹುತೇಕ ಚಂದಾದಾರಿಗೆ ಇನ್ನು ವೈಫೈ ಕಾಲಿಂಗ್ ಸೇವೆಯ ಬಗ್ಗೆ ಮಾಹಿತಿ ಇಲ್ಲ ಮತ್ತು ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೇವೆ ಲಭ್ಯ ಎನ್ನುವ ಗೊಂದಲಗಳು ಇವೆ. ನಿಮ್ಮ ಅಂತಹ ಎಲ್ಲ ಗೊಂದಲಗಳಿಗೆ ಈ ಲೇಖನದಲ್ಲಿ ಉತ್ತರವಿದೆ. ಮುಂದೆ ಓದಿರಿ.

ಏನಿದ ವೈಫೈ ಕಾಲಿಂಗ್?
ಏರ್‌ಟೆಲ್ ಟೆಲಿಕಾಂ ಶುರುಮಾಡಿರುವ ವೈಫೈ ಕಾಲಿಂಗ್ ಸೇವೆಯು ಇದೀಗ ಚಾಲ್ತಿಯಲ್ಲಿದೆ. ಆದರೆ ಏನಿದು ವೈಫೈ ಕಾಲಿಂಗ್ ಅಂತಾ ಕೇಳುವವರೇ ಅಧಿಕ. ವೈಫೈ ಕಾಲಿಂಗ್ ಸಹ ಸಾಮನ್ಯ ವಾಯಿಸ್ ಕಾಲಿಂಗ್‌ನಂತೆ ಆದರೆ ಈ ಕರೆಗಳು ಇಂಟರ್ನೆಟ್ ಆಧಾರಿತವಾಗಿದ್ದು, ವೈಫೈ ಸೌಲಭ್ಯವನ್ನು ಬೇಡುತ್ತವೆ. ಈ ಕಾಲಿಂಗ್ ವ್ಯವಸ್ಥೆಯಲ್ಲಿ ಸಾಮಾನ್ಯ ನೆಟವರ್ಕ್ ಬಳಕೆ ಆಗುವುದಿಲ್ಲ. ಹೀಗಾಗಿ ಯಾವುದೇ ಹೆಚ್ಚುವರಿ ರೀಚಾರ್ಜ್ ಅಗತ್ಯ ಇರಲ್ಲ.
ಏರ್‌ಟೆಲ್ ಈ ವೈಫೈ ಕಾಲಿಂಗ್ ಸೇವೆ ಆರಂಭಿಸಿದ ಜಸ್ಟ್ ಎರಡು ತಿಂಗಳಿನಲ್ಲಿ 3 ಮಿಲಿಯನ್ ಬಳಕೆದಾರರನ್ನು ಒಳಗೊಂಡಿದೆ. ಈ ವರ್ಷದ ಅಂತ್ಯದ ವೇಳೆಗೆ ಸುಮಾರು 10 ಮಿಲಿಯನ್ ಬಳಕೆದಾರರು ಈ ಹೊಸ ಕಾಲಿಂಗ್ ಸೌಲಭ್ಯವನ್ನು ಬಳಕೆಮಾಡುವ ಸಾಧ್ಯತೆಗಳಿವೆ.

ವೈಫೈ ಕಾಲಿಂಗ್ ಬದಲಾವಣೆ
ವೈಫೈ ಕಾಲಿಂಗ್ ಸೇವೆಯು ಸಾಮಾನ್ಯ ಕರೆಗಳ ವ್ಯವಸ್ಥೆಗೆ ಪರ್ಯಾಯ ಮಾರ್ಗವಾಗಿ ರೂಪಗೊರ್ಳಳುವ ಸಾಧ್ಯತೆಗಳಿವೆ. ಏರ್‌ಟೆಲ್ ವೈಫೈ ಕಾಲಿಂಗ್ ಸೇವೆಯನ್ನು ಬಳಕೆದಾರರು ಅವರ ಸ್ಮಾರ್ಟ್‌ಫೋನ್‌ಗಳಲ್ಲಿ ವೈಫೈ ಸೌಲಭ್ಯ ಬಳಕೆ ಮಾಡಿ ಈ ಸೇವೆ ಪಡೆಯಬಹುದಾಗಿದೆ. ವೈಫೈ ಕಾಲಿಂಗ್‌ನ ಇನ್ನೊಂದು ಪ್ರಮುಖ ಹೈಲೈಟ್ ಅಂದರೇ ಹೆಚ್‌ಡಿ ಗುಣಮಟ್ಟದಲ್ಲಿ ಕರೆಗಳು ಇರುತ್ತವೆ. ಆದರೆ ನಿಮ್ಮಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಇರಬೇಕು ಮತ್ತು ಏರ್‌ಟೆಲ್ ಸಿಮ್ ಇರಬೇಕು.

ವೈಫೈ ಕರೆಗಳಿಗೆ ನಿಮ್ಮ ಸ್ಮಾರ್ಟ್‌ಫೋನ್ ಸಿದ್ಧವೇ?
ಏರ್‌ಟೆಲ್ ವೈಫೈ ಕಾಲಿಂಗ್ ಸೇವೆಯು ಆಪಲ್ ಐಫೋನ್‌ಗಳಿಂದ ಹಿಡಿದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಹುತೇಕ ಫೋನ್‌ಗಳಲ್ಲಿ ಸಪೋರ್ಟ್ ಮಾಡಲಿದೆ. ಫ್ಲ್ಯಾಗಶಿಫ್ ಮಾದರಿ ಸ್ಮಾರ್ಟ್‌ಫೋನ್ ಹೊರತು ಪಡಿಸಿ ಮೀಡ್‌ರೇಂಜ್ ವೇರಿಯಂಟ್ ಫೋನ್‌ಗಳಲ್ಲಿಯೂ ಏರ್‌ಟೆಲ್ ವೈಫೈ ಕಾಲಿಂಗ್ ಸೇವೆ ಲಭ್ಯವಾಗುತ್ತದೆ. ಜಿಯೋಗಿಂತ ಉತ್ತಮ ವೈಫೈ ಕಾಲಿಂಗ್ ಸೇವೆಯನ್ನು ಹೊಂದಿದೆ ಎಂದು ಏರ್‌ಟೆಲ್ ಹೇಳಿಕೊಂಡಿದೆ.

ಯಾವೆಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಏರ್‌ಟೆಲ್ ವೈಫೈ ಕಾಲಿಂಗ್ ಸೇವೆಯು ಲಭ್ಯ ಇದೆ ಎಂಬುದನ್ನು ತಿಳಿಯಲು ಸಂಸ್ಥೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿರಿ. https://www.airtel.in/wifi-calling.

ವೈಫೈ ಕಾಲಿಂಗ್ ಬಳಕೆ ಹೇಗೆ?
ಏರ್‌ಟೆಲ್ ವೈಫೈ ಕಾಲಿಂಗ್ ಸೇವೆಯು ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿಯೂ ಲಭ್ಯವಿದೆ. (ಜಮ್ಮು-ಕಾಶ್ಮೀರ ಹೊರತುಪಡಿಸಿ). ಎಲ್ಲ ಬ್ರಾಡ್‌ಬ್ಯಾಂಡ್ ಪೂರೈಕೆದಾರ ನೆಟರ್ವಕಗೆ ಬೆಂಬಲ ಪಡೆದಿದೆ. ಏರ್‌ಟೆಲ್ ಬಳಕೆದಾರರು ಯಾವುದೇ ವೈಫೈ ಸೌಲಭ್ಯ ಬಳಸಿಕೊಂಡು ವೈಫೈ ಕಾಲಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ವೈಫೈ ಕಾಲಿಂಗ್ ಬೆಂಬಲ ಪಡೆದಿರುವ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕೆ ಕನೆಕ್ಟ್ ಮಾಡಿರಿ. ನಂತರ ನಿಮ್ಮ ಏರ್‌ಟೆಲ್ ಸಿಮ್‌ನ VoLTE ಸೇವೆಯನ್ನು ಆನ್ ಮಾಡಿಕೊಳ್ಳಿರಿ. ಈ ಸೇವೆಯನ್ನು ಸಕ್ರಿಯ ಮಾಡಲು ಈ ಹಂತಗಳನ್ನು ಅನುಸರಿಸಿ. ಸೆಟ್ಟಿಂಗ್> ನೆಟವರ್ಕ್ಸ> ಏರ್‌ಟೆಲ್ ಸಿಮ್> VoLTE. ಈ ಸೆಟ್ಟಿಂಗ್ ಆದ ಬಳಿಕ ವೈಫೈ ಕಾಲಿಂಗ್‌ಗಾಗಿ ಸೆಟ್ಟಿಂಗ್> ನೆಟವರ್ಕ ಸೆಟ್ಟಿಂಗ್> ಏರ್‌ಟೆಲ್ ಸಿಮ್> Activate Make Calls Using Wi-Fi ಆನ್ ಮಾಡಿ.


Click it and Unblock the Notifications








