20 ಕೋಟಿ ಚಂದಾದಾರರನ್ನು ದಾಟಿದ ಏರ್ ಟೆಲ್!

By Varun
|
20 ಕೋಟಿ ಚಂದಾದಾರರನ್ನು ದಾಟಿದ ಏರ್ ಟೆಲ್!

ಭಾರತದ ನಂ.1 ಟೆಲಿಕಾಂ ಸೇವಾದಾರ ಏರ್ ಟೆಲ್ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ! ಅದೇನೆಂದರೆ ಒಂದು ಬಿಲಿಯನ್ ಜನಸಂಖ್ಯೆ ಇರುವ ಭಾರತದಲ್ಲಿ ಈಗ ಅದು 200 ಮಿಲಿಯನ್ ಚಂದಾದಾರರನು ಹೊಂದಿರುವ ಮೊದಲ ಭಾರತೀಯ ಕಂಪನಿಯಾಗಿದೆ.

ಭಾರತ ಸೇರಿದಂತೆ ಸುಮಾರು 20 ದೇಶಗಳಲ್ಲಿ ನೆಟ್ವರ್ಕ್ ಸೇವೆ ಒದಗಿಸುತ್ತಿರುವ ಭಾರತಿ ಏರ್ಟೆಲ್, ಈಗ ಈ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಇದು 2G, 3G ಹಾಗು 4G ಸೇವೆ, ಲ್ಯಾಂಡ್ ಲೈನ್, DSL ಬ್ರಾಡ್ ಬ್ಯಾಂಡ್, IPTV ಹಾಗು DTH ಸೇವೆಯನ್ನೂ ಒಳಗೊಂಡಿದೆ.

ಈ ಸುದ್ದಿಯನ್ನು ಪ್ರಕಟಿಸಿ ಮಾತಾಡಿದ ಕಂಪನಿಯ ಸಿಇಒ (ಇಂಡಿಯಾ ಹಾಗು ಏಷಿಯಾ ಪೆಸಿಫಿಕ್) ಸಂಜಯ್ ಕಪೂರ್, ಭಾರತಿ ಏರ್ ಟೆಲ್ ಹದಿನಾಲ್ಕು ವರ್ಷಗಳಿಂದ ಮೊಬೈಲ್ ಸೇವೆಯಲ್ಲಿ ಇದ್ದು , 10 ಕೋಟಿ ಚಂದಾದಾರರ ಗುರಿಯನ್ನು ಮೂರು ವರ್ಷಗಳ ಹಿಂದೆ ತಲುಪಿದ್ದು, ಈಗ ಇನ್ನೂ 10 ಕೋಟಿ ಚಂದಾರರರನ್ನು ಕೇವಲ ಮೂರು ವರ್ಷಗಳಲ್ಲಿ ಸೇರ್ಪಡೆಗೊಳಿಸಿಕೊಂಡಿದ್ದು, ಇದು ಏರ್ಟೆಲ್ ಮೇಲಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಈ ಸಂಧರ್ಭದಲ್ಲಿ ಬೆಳವಣಿಗೆಯ ಬಗ್ಗೆ ಹರ್ಷ ವ್ಯಕ್ತ್ ಪಡಿಸಿದರು.

1995 ರಲ್ಲಿ ಸ್ಥಾಪನೆಗೊಂಡ ಭಾರತಿ ಏರ್ ಟೆಲ್ ಭಾರತದ ಟೆಲಿಕಾಂ ಜಗತ್ತಿನಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ್ದು, ಇತ್ತೀಚೆಗೆ 4G ಸೇವೆಯನ್ನುಪ್ರಾರಂಭ ಮಾಡಿದ ಮೊದಲ ಆಪರೇಟರ್ ಎಂಬ ಕೀರ್ತಿಯನ್ನೂ ಪಡೆದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X