Home
ಸುದ್ದಿಜಾಲ

ಜಿಯೋಗಿಂತಲೂ ಮೊದಲೇ ಗಣರಾಜ್ಯೋತ್ಸವ ಆಫರ್ ಕೊಟ್ಟ ಏರ್‌ಟೆಲ್: ನಿತ್ಯ 1.4GB ಡೇಟಾ

By Srinidhi

ಜಿಯೋ ಸಂಕ್ರಾಂತಿ ಅಂಗವಾಗಿ ನೀಡಿದ್ದ ದರ ಕಡಿತ ಮತ್ತು ಹೆಚ್ಚು ಡೇಟಾ ಆಫರ್ ಅನ್ನು ನಿಧಾನವಾಗಿಯಾದರೂ ಉತ್ತಮವಾಗಿ ಕಾಪಿ ಮಾಡಿರುವ ಏರ್‌ಟೆಲ್‌ ಸಹ ತನ್ನ ಬಳಕೆದಾರರಿಗೆ ಹೆಚ್ಚುವರಿ ಡೇಟಾವನ್ನು ನೀಡುವ ಪ್ಲಾನ್‌ಗಳನ್ನು ಘೋಷಣೆ ಮಾಡಿದೆ. ಈ ಹಿಂದೆಯೇ ಜಾರಿಗೆ ಬಂದಿರುವ ಪ್ಲಾನ್‌ಗಳ ಮೇಲೆ ಹೆಚ್ಚುವರಿ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಈ ಮೂಲಕ ಮತ್ತೊಮ್ಮೆ ಜಿಯೋಗೆ ಸೆಡ್ಡು ಹೊಡೆಯಲು ಮುಂದಾಗಿದೆ.

ಜಿಯೋಗಿಂತಲೂ ಮೊದಲೇ ಗಣರಾಜ್ಯೋತ್ಸವ ಆಫರ್ ಕೊಟ್ಟ ಏರ್‌ಟೆಲ್

ಪ್ರಸ್ತುತ ದಿನಕ್ಕೆ ಒಂದು GB ವೇಗದ ಡೇಟಾವನ್ನು ನೀಡುವ ಹಲವು ಪ್ಲಾನ್‌ಗಳು ವಿವಿಧ ಟೆಲಿಕಾಂ ಕಂಪನಿಗಳಲ್ಲಿ ಕಾಣಬಹುದು. ಆದರೆ ಬಳಕೆದಾರರಿಗೆ ಪ್ರತಿ ನಿತ್ಯ ಒಂದು GB ಡೇಟಾ ಬಳಕೆಗೆ ಸಾಕಾಗುತ್ತಿಲ್ಲ ಎನ್ನಲಾಗಿದೆ. ಇದರಿಂದಾಗಿ ಹೆಚ್ಚಿನ ಡೇಟಾ ನೀಡುವ ಪ್ಲಾನ್‌ಗಳಿಗೆ ಒಲವು ತೋರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಯೋ ಜಾರಿ ಮಾಡಿದ್ದ ಪ್ಲಾನ್ ಅನ್ನೇ ಕಾಪಿ ಮಾಡಿದ ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ನೀಡುತ್ತಿದೆ.

ಓದಿರಿ: ವಾಟ್ಸ್‌ಆಪ್‌ನಲ್ಲಿ ಕೇವಲ ಚಾಟಿಂಗ್ ಅಲ್ಲ, ದುಡ್ಡು ಮಾಡಿ..! ಹೇಗೆ..?

ಹೆಚ್ಚುವರಿ ಡೇಟಾ:

ಹೆಚ್ಚುವರಿ ಡೇಟಾ:

ಏರ್‌ಟೆಲ್ ಈಗಾಗಲೇ ಬಿಡುಗಡೆ ಮಾಡಿರುವ ರೂ.199, 448 ಮತ್ತು 509 ಪ್ರೀಪೆಯ್ಡ್ ರಿಚಾರ್ಜ್ ಪ್ಲಾನ್‌ಗಳಲ್ಲಿ ಇದುವರೆಗೂ ದಿನಕ್ಕೊಂದು GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿತ್ತು ಆದರೆ ಈಗ ಬದಲಾದ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ 1.4GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ.

ಬದಲಾದ ಡೇಟಾ:

ಬದಲಾದ ಡೇಟಾ:

ರೂ.199 ಪ್ಲಾನ್‌ನಲ್ಲಿ 28 ದಿನಗಳ ಅವಧಿಗೆ ಬಳಕೆದಾರರು 39.2GB ಡೇಟಾವನ್ನು ಪಡೆದುಕೊಳ್ಳಲಿದ್ದು, ರೂ. 448 ಪ್ಲಾನ್‌ನಲ್ಲಿ 82 ದಿನಗಳ ವ್ಯಾಲಿಡಿಟಿಗೆ 114.8GB ಡೇಟಾ ಬಳಕೆಗೆ ದೊರೆಯಲಿದೆ. ಇದೇ ಮಾದರಿಯಲ್ಲಿ ರೂ.509 ಪ್ಲಾನ್‌ನಲ್ಲಿ 90 ದಿನಗಳ ವ್ಯಾಲಿಡಿಟಿಗೆ 126GB ಡೇಟಾವೂ ಬಳಕೆಗೆ ಲಭ್ಯವಾಗಲಿದೆ.

How to Activate UAN Number? KANNADA
ಇನ್ನು ಇದೇ:

ಇನ್ನು ಇದೇ:

ಇದಲ್ಲದೇ ಪ್ರತಿ ನಿತ್ಯ 100 SMS ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಉಚಿತವಾಗಿ ಕರೆಗಳನ್ನು ಮಾಡಬಹುದಾಗಿದ್ದು, ರೂಮಿಂಗ್ ಸಹ ಉಚಿತವಾಗಿದೆ. ಇದಲ್ಲದೇ ಏರ್‌ಟೆಲ್‌ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಜಿಯೋಗೆ ಟಕ್ಕರ್:

ಜಿಯೋಗೆ ಟಕ್ಕರ್:

ಈ ಹಿಂದೆ ಜಿಯೋ ತನ್ನ ಬಳಕೆದಾರರಿಗೆ ಪ್ರತಿ ನಿತ್ಯ 1.5GB ಡೇಟಾವನ್ನು ಬಳಕೆಗೆ ನೀಡುವಂತಹ ಪ್ಲಾನ್‌ ಅನ್ನು ಬಳಕೆಗೆ ನೀಡಿತ್ತು. ಇದಕ್ಕೆ ಕೌಂಟರ್ ನೀಡುವ ಸಲುವಾಗಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಈ ಮಾದರಿಯ ಆಫರ್ ನೀಡಲು ಮುಂದಾಗಿದೆ. ಇದರಿಂದಾಗಿ ಹೆಚ್ಚಿನ ಜನರು ಏರ್‌ಟೆಲ್‌ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗಿದೆ.

Best Mobiles in India

English summary
Airtel recharge offers 1.4GB daily data. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+