ಏರ್‌ಟೆಲ್ ಟೆಲಿಕಾಂನ ಅಗ್ಗದ ಸ್ಮಾರ್ಟ್ ರೀಚಾರ್ಜ್ ಪ್ಲ್ಯಾನ್‌ಗಳ ಲಿಸ್ಟ್ ಇಲ್ಲಿದೆ!
ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಅದಾಗ್ಯೂ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ಲ್ಯಾನ್ ಪರಿಚಯಿಸುತ್ತಿವೆ. ಏರ್‌ಟೆಲ್ ಸಂಸ್ಥೆಯು ಹಲವು ರೀಚಾರ್ಜ್ ಆಯ್ಕೆಗಳನ್ನು ತನ್ನ ಚಂದಾದಾರರಿಗೆ ಒದಗಿಸಿದ್ದು, ಅವುಗಳಲ್ಲಿ ಅಗ್ಗದ ಬೆಲೆಯ ಪ್ಲ್ಯಾನ್‌ಗಳೊಂದಿಗೆ ದುಬಾರಿ ಬೆಲೆಯ ಪ್ಲ್ಯಾನ್‌ಗಳು ಸೇರಿವೆ. ಆದ್ರೆ ಬಜೆಟ್ ಪ್ರೈಸ್‌ನಲ್ಲಿನ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳು ಹೆಚ್ಚು ಗ್ರಾಹಕರನ್ನು ಸೆಳೆಯುತ್ತವೆ.

ಹೌದು, ಏರ್‌ಟೆಲ್ ಕೆಲವು ಕನಿಷ್ಠ ಬೆಲೆಯ ಸ್ಮಾರ್ಟ್ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಆ ಪ್ಲ್ಯಾನ್‌ಗಳು ವ್ಯಾಲಿಡಿಟಿ, ವಾಯಿಸ್ ಕರೆ, ಎಸ್‌ಎಮ್‌ಎಸ್, ಹಾಗೂ ಡೇಟಾ ಸೌಲಭ್ಯಗಳನ್ನು ಒಳಗೊಂಡಿವೆ. ಹಾಗೆಯೇ ಏರ್‌ಟೆಲ್ ಟೆಲಿಕಾಂ ಡೇಟಾ ಸೌಲಭ್ಯದ ಹಾಗೂ ಟಾಕ್‌ಟೈಮ್ ಪ್ರಯೋಜನದ ಪ್ರತ್ಯೇಕ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಹಾಗಾದರೇ ಏರ್‌ಟೆಲ್‌ನ ಸ್ಮಾರ್ಟ್ ರೀಚಾರ್ಜ್ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 45ರೂ. ಸ್ಮಾರ್ಟ್ ರೀಚಾರ್ಜ್ ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಸ್ಥಳೀಯ ಹಾಗೂ ರಾಷ್ಟ್ರೀಯ ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಏರ್‌ಟೆಲ್ 49ರೂ. ಸ್ಮಾರ್ಟ್ ರೀಚಾರ್ಜ್ ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ರೀಚಾರ್ಜ್‌ನಲ್ಲಿ 64ರೂ. ಟಾಕ್‌ಟೈಮ್ ಲಭ್ಯವಾಗಲಿದ್ದು, 100MB ಡೇಟಾ ಸೌಲಭ್ಯವು ಸಿಗಲಿದೆ. ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಏರ್‌ಟೆಲ್ 79ರೂ. ಸ್ಮಾರ್ಟ್ ರೀಚಾರ್ಜ್ ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ರೀಚಾರ್ಜ್‌ನಲ್ಲ 64ರೂ. ಟಾಕ್‌ಟೈಮ್ ಲಭ್ಯವಾಗಲಿದ್ದು, 200MB ಡೇಟಾ ಸೌಲಭ್ಯವು ಸಿಗಲಿದೆ. ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.


Click it and Unblock the Notifications








