ಏರ್‌ಟೆಲ್‌ನ ಈ ಪ್ಲ್ಯಾನ್‌ಗಳಲ್ಲಿ ಇನ್ನು zee 5 ಚಂದಾದಾರಿಕೆ ಇರಲ್ಲ!

|

ದೇಶದ ಟೆಲಿಕಾಂ ಸಂಸ್ಥೆಗಳು ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋಜನಗಳೊಂದಿಗೆ ಇತ್ತೀಚಿಗೆ ವಿಡಿಯೊ ಕಂಟೆಂಟ್‌ ಸ್ಟ್ರೀಮಿಂಗ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತಿವೆ. ಹೀಗೆ ಏರ್‌ಟೆಲ್‌ ಸಹ ತನ್ನ ಕೆಲವು ಪ್ಲ್ಯಾನ್‌ಗಳಲ್ಲಿ ಬಳಕೆದಾರರಿಗೆ ಹೆಚ್ಚುವರಿಯಾಗಿ zee 5 ಚಂದಾದಾರಿಕೆಯನ್ನು ಉಚಿತವಾಗಿ ಲಭ್ಯವಾಗಿಸಿತ್ತು. ಆದರೆ ಇದೀಗ ಒಂದು ಪ್ರೀಫೇಯ್ಡ್‌ ಪ್ಲ್ಯಾನ್‌ ಹೊರತುಪಡಿಸಿ ಉಳಿದ ಪ್ಲ್ಯಾನ್‌ಗಳಿಗೆ zee 5 ಚಂದಾದಾರಿಕೆ ತೆಗೆದಿದೆ.

ಏರ್‌ಟೆಲ್‌ ಟೆಲಿಕಾಂ

ಹೌದು, ಏರ್‌ಟೆಲ್‌ ಟೆಲಿಕಾಂನ 289ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಹೊರತುಪಡಿಸಿ ಇನ್ನುಳಿದ ಯೋಜನೆಗಳಿಗೆ zee 5 ಚಂದಾದಾರಿಕೆ ನಿಲ್ಲಿಸಿದೆ. ಉಳಿದಂತೆ ಡೇಟಾ, ವಾಯಿಸ್‌ ಕರೆ, ವ್ಯಾಲಿಡಿಟಿ ಮತ್ತು ಎಸ್‌ಎಮ್‌ಎಸ್‌ಗಳಲ್ಲಿ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಏರ್‌ಟೆಲ್‌ನ ಥ್ಯಾಂಕ್ಸ್‌ನಲ್ಲಿ ZEE5-ಜೀ5 ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್ ಚಂದಾದಾರಿಕೆಯ ಸೇವೆ ನೀಡಿತ್ತು. ಸದ್ಯ ಏರ್‌ಟೆಲ್‌ 289ರೂ. ಪ್ಲ್ಯಾನ್ zee 5 ಚಂದಾದಾರಿಕೆ ಪಡೆದಿದೆ.

ಏರ್‌ಟೆಲ್‌ 289ರೂ. ಪ್ಲ್ಯಾನ್

ಏರ್‌ಟೆಲ್‌ 289ರೂ. ಪ್ಲ್ಯಾನ್

ಏರ್‌ಟೆಲ್‌ನ ಇತ್ತೀಚಿನ 289ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ, ನ್ಯಾಶನಲ್, ಲೋಕಲ್ ಕರೆಗಳ ಸೌಲಭ್ಯ ಲಭ್ಯ. ಹಾಗೂ ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯವಾಗುವುದು. ಇದರೊಂದಿಗೆ zee 5 ಚಂದಾದಾರಿಕೆ ಸೌಲಭ್ಯವು ಸಹ ದೊರೆಯುವುದು. ಹಾಗೆಯೇ ಏರ್‌ಟೆಲ್‌ನ 2GB ಡೇಟಾ ಯೋಜನಗಳ ಬಗ್ಗೆ ಮುಂದೆ ಓದಿರಿ.

ಏರ್‌ಟೆಲ್‌ 2498ರೂ.ಪ್ಲ್ಯಾನ್

ಏರ್‌ಟೆಲ್‌ 2498ರೂ.ಪ್ಲ್ಯಾನ್

ಏರ್‌ಟೆಲ್‌ನ ಈ ಯೋಜನೆಯು 2GB ದೈನಂದಿನ ಡೇಟಾ ಪ್ರಯೋಜನವನ್ನು ಹೊಂದಿದೆ. ಹಾಗೂ 365 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ / ದಿನ ಪ್ರಯೋಜನವಿದೆ.

ಏರ್‌ಟೆಲ್‌ 698ರೂ.ಪ್ಲ್ಯಾನ್

ಏರ್‌ಟೆಲ್‌ 698ರೂ.ಪ್ಲ್ಯಾನ್

ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ಸೌಲಭ್ಯ ಸಹ ಹೊಂದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಪ್ರಯೋಜನವಿದೆ.

ಏರ್‌ಟೆಲ್‌ 449ರೂ.ಪ್ಲ್ಯಾನ್

ಏರ್‌ಟೆಲ್‌ 449ರೂ.ಪ್ಲ್ಯಾನ್

ಏರ್‌ಟೆಲ್‌ 449ರೂ.ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಒಳಗೊಂಡಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಹೊಂದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾವನ್ನು ಪಡೆದಿದೆ.

ಏರ್‌ಟೆಲ್‌ 349ರೂ.ಪ್ಲ್ಯಾನ್

ಏರ್‌ಟೆಲ್‌ 349ರೂ.ಪ್ಲ್ಯಾನ್

ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಒಳಗೊಂಡಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾವನ್ನು ಪಡೆದಿದ್ದು, ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಪಡೆದಿದೆ. ಮತ್ತು ಪ್ರತಿದಿನ 100 ಎಸ್‌ಎಂಎಸ್ ಜೊತೆ ಅಮೆಜಾನ್ ಪ್ರೈಮ್ ವೀಡಿಯೊದ ವರ್ಷಪೂರ್ತಿ ಚಂದಾದಾರಿಕೆ ಲಭ್ಯ.

Most Read Articles
Best Mobiles in India

English summary
Airtel has ended the Airtel-Zee5 Summer Bonanza promotional offer that it launched in May.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X